ಹೊಸವರ್ಷ ಅಮಲಿನಲ್ಲಿ ಮಹಿಳಾ ಪೊಲೀಸ್, ಯುವತಿಯರ ಜೊತೆ ಅನುಚಿತ ವರ್ತನೆ, ನಾಲ್ವರು ವಶಕ್ಕೆ, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಸಿಸಿಬಿ ಪೊಲೀಸರುು ಯುವಕರನ್ನು ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು (ಡಿ.31) ಹೊಸ ವರ್ಷ ಬರಮಾಡಿಕೊಳ್ಳಲು ಕೆಲವೇ ನಿಮಿಷಗಳು ಮಾತ್ರ ಬಾಕಿ. ಸಂಭ್ರಮ ಜೋರಾಗಿದೆ. ಹಲವರು ಪಾರ್ಟಿ ನಶೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ನಡುವೆ ಮೂವರು ಯುವಕರ ಗುಂಪು ಮಹಿಳಾ ಪೊಲೀಸ್ ಹಾಗೂ ಯುವತಿಯರ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರಿನ ಚರ್ತ್ ಸ್ಟ್ರೀಟ್‌ನಲ್ಲಿ ನಡೆದಿದೆ. ಮೂವರು ಯುವಕರ ಗುಂಪು ಬಾಲ ಬಿಚ್ಚುತ್ತಿದ್ದಂತೆ ಸಿಸಿಬಿ ಪೊಲೀಸರು ಎಂಟ್ರಿಕೊಟ್ಟಿದ್ದಾರೆ. ಬಳಿಕ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಹೊಸವರ್ಷ ಸಂಭ್ರಮಾಚರಣೆ ಹೆಸರಿನಲ್ಲಿ ಪುಂಡಾಟಿಕೆ

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮೂವರು ಯುವಕರು ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭ್ರಮ ಆಚರಿಸುತ್ತಿದ್ದ ಯುವತಿಯರಿಕೆ ಕಿರುಕಳ ನೀಡಲು ಆರಂಭಿಸಿದ್ದಾರೆ. ಯುವತಿರು ಮಹಿಳಾ ಪೊಲೀಸರು ಬಳಿ ಬಂದಿದ್ದಾರೆ. ಹೀಗಾಗಿ ಪುಂಡರ ಪುಂಡಾಟಿಕೆ ಬ್ರೇಕ್ ಹಾಕಲು ಮಹಿಳಾ ಪೊಲೀಸರು ಮುಂದಾದಾಗ ಅನುಚಿತ ವರ್ತನೆ ತೋರಿದ್ದಾರೆ. ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ಮುಟ್ಟಿದೆ.

ಸ್ಥಳಕ್ಕೆ ಎಂಟ್ರಿಕೊಟ್ಟ ಸಿಸಿಬಿ

ಯುವಕರ ಮಹಿಳಾ ಪೊಲೀಸರು, ಯುವತಿಯರ ವಿರುದ್ದ ಅನುಚಿತ ವರ್ತನೆ ತೋರಿದ ಮಾಹಿತಿ ಸಿಗುತ್ತದ್ದಂತೆ ಸಿಸಿಬಿ ಪೊಲೀಸರು ಸ್ಥಳಕ್ಕೆ ಎಂಟ್ರಿಕೊಟ್ಟಿದ್ದಾರೆ.ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪುಂಡಾಟಿಕೆ, ಅನುಚಿತ ವರ್ತನೆ ತೋರಿದವರಿಗೆ ಯಾವುದೇ ರೀತಿ ವಿನಾಯಿತಿ ಇರುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮತ್ತೊಬ್ಬ ಪುಂಡ ಪೊಲೀಸ್ ವಶಕ್ಕೆ

ಜನರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬ್ರಿಗೇಡ್ ರಸ್ತೆಗೆ ಪೊಲೀಸ್ ಆಯುಕ್ತರು ಭೇಟಿ ನೀಡಿದ್ದಾರೆ. ಇದೇ ವೇಳೆ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಅನುಚಿತ ವರ್ತನೆ ತೋರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪುಂಡನ ವಶಕ್ಕೆ ಪಡೆಯಲು ಖುದ್ದು ಪೊಲೀಸ್ ಆಯುಕ್ತರೇ ಸೂಚಿಸಿದ್ದಾರೆ. ಇದರಂತೆ ಅನುಚಿತ ವರ್ತನೆ ತೋರಿದ ಅನಾಮಿಕನ ವಶಕ್ಕೆ ಪಡೆದಿದ್ದಾರೆ.

ಕೋರಮಂಗಲದಲ್ಲಿ ಭಾರಿ ಜನ

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಇದೇ ವೇಳೆ ಕೋರಮಂಗದಲ್ಲೂ ಪೊಲೀಸ್ ಭದ್ರತೆ ನೀಡಲಾಗಿದೆ. ಆದರೆ ಬಾರಿ ಎಂಜಿ ರೋಡ್, ಬ್ರಿಗೇಡ್ ರೋಡ್‌ಗಿಂತ ಜನರು ಕೋರಮಂಗಲ ಕಡೆ ಧಾವಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಭಾರಿ ಸಂಚಾರ ದಟ್ಟಣೆಯಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಹಾಸ ಮಾಡುತ್ತಿದ್ದಾರೆ. ಹೊಸ ವರ್ಷ ಸಮೀಪಿಸುತ್ತಿದ್ದಂತೆ, ಕೌಂಟ್‌ಡೌನ್ ಹತ್ತಿರಬರುತ್ತಿದ್ದಂತೆ ಜನಸಾಗರವೇ ಹರಿದು ಬಂದಿದೆ.