10:32 AM (IST) Dec 27

Karnataka News Live 27 December 2025ಮೂರುವರೆ ದಶಕಗಳಿಂದ ಇದ್ದ ಒಳ ಮೀಸಲಾತಿಗಾಗಿ ಹೋರಾಟಕ್ಕೆ ಜಯ ಸಿಕ್ಕಿದೆ - ಸಚಿವ ಮುನಿಯಪ್ಪ

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿ ಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

Read Full Story
10:20 AM (IST) Dec 27

Karnataka News Live 27 December 2025ಸಿಲಿಂಡರ್ ಸ್ಫೋಟದ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ - ಗೃಹ ಸಚಿವ ಪರಮೇಶ್ವರ್

ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Read Full Story
09:54 AM (IST) Dec 27

Karnataka News Live 27 December 2025ಶಿವಮೊಗ್ಗ-ಬೆಂಗಳೂರು & ಶಿವಮೊಗ್ಗ-ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಯಾರ್ಡ್ ನಿರ್ವಹಣಾ ಕಾಮಗಾರಿಯಿಂದಾಗಿ ಶಿವಮೊಗ್ಗ-ಬೆಂಗಳೂರು ಮತ್ತು ಶಿವಮೊಗ್ಗ-ಚಿಕ್ಕಮಗಳೂರು ಮಾರ್ಗದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಜನಶತಾಬ್ದಿ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಿದೆ.

Read Full Story
09:09 AM (IST) Dec 27

Karnataka News Live 27 December 2025ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶ ಇಲ್ಲ - ಮುಖಾಮುಖಿ ಸಂದರ್ಶನದಲ್ಲಿ ಸಚಿವ ಎಚ್‌.ಕೆ.ಪಾಟೀಲ್‌

ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ ) ವಿಧೇಯಕ’ ಸದ್ಯ ಹೆಚ್ಚು ಚರ್ಚೆಗೆ ಒಳಗಾಗಿದೆ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಸಚಿವ ಎಚ್‌.ಕೆ.ಪಾಟೀಲ್‌.

Read Full Story
08:39 AM (IST) Dec 27

Karnataka News Live 27 December 2025Karna Serial - ನಿತ್ಯಾಳಿಗೆ ರಕ್ತಸ್ರಾವ, ಉಳಿಯೋದೇ ಕಷ್ಟ ಇದೆ! ಕರ್ಣನ ಪ್ಲ್ಯಾನ್‌ ಉಲ್ಟಾ ಹೊಡೆಯೋದು ಪಕ್ಕಾ!

Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ಸಂಜಯ್‌ ಮಾಡಿದ ಕುತಂತ್ರಕ್ಕೆ ನಿತ್ಯಾ ಮಗು ಬಲಿಯಾದಂತಿದೆ. ಹೌದು, ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್‌ ಮಾಡಿದೆ. ಹಾಗಾದರೆ ಮುಂದೆ ಏನಾಗಬಹುದು? ನಿತ್ಯಾ, ತೇಜಸ್‌, ನಿಧಿ ಬದುಕು ಏನಾಗಲಿದೆ?

Read Full Story
08:37 AM (IST) Dec 27

Karnataka News Live 27 December 2025ಗಾನವಿ ನಿಧನದ ಬಳಿಕ ಆತ್ಮ*ಹತ್ಯೆಗೆ ಶರಣಾದ ಗಂಡ ಸೂರಜ್; ಅತ್ತೆ ಜಯಂತಿ ಗಂಭೀರ

ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತ್ನಿಯ ಸಾವಿನ ನಂತರ ಪತಿ ಸೂರಜ್ ಕೂಡ ನಾಗಪುರದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ಜಯಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Read Full Story
08:32 AM (IST) Dec 27

Karnataka News Live 27 December 20255-6 ತಿಂಗಳಿಂದ ನೀರು ಪೋಲು - ಕ್ರಮಕೈಗೊಳ್ಳದ ಅಧಿಕಾರಿಗಳು

ಕಾವೇರಿ ನೀರಿನ ಪೈಪು ಒಡೆದು ಕಳೆದ ಐದಾರು ತಿಂಗಳಿಂದ ಅಮೂಲ್ಯ ಜೀವಜಲ ವ್ಯರ್ಥವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ದಾಸರಹಳ್ಳಿ ಕ್ಷೇತ್ರದ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Read Full Story
08:22 AM (IST) Dec 27

Karnataka News Live 27 December 2025ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ - ಮುನೀಶ್‌ ಮೌದ್ಗಿಲ್‌

ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಾಮಾಣಿಕವಾಗಿ ಸೇವೆ ಮಾಡುತ್ತಿದ್ದು, ತಮ್ಮ ಮೇಲೆ ಸುಳ್ಳು ಹಾಗೂ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಪ್ರತಿಕ್ರಿಯಿಸಿದ್ದಾರೆ.

Read Full Story
08:11 AM (IST) Dec 27

Karnataka News Live 27 December 2025Bigg Boss Kannada 12 ವೀಕೆಂಡ್‌ ಸಂಚಿಕೆಗೆ ಡಬಲ್ ಸಂಭ್ರಮ; ಬರ್ತಿದ್ದಾರೆ ಇಬ್ಬರು ಸ್ಟಾರ್‌ಗಳು

ಈ ವಾರದ ಬಿಗ್‌ಬಾಸ್‌ ವೀಕೆಂಡ್ ಸಂಚಿಕೆಯಲ್ಲಿ ನಿರೂಪಕ ಸುದೀಪ್ ಬದಲಿಗೆ ಇಬ್ಬರು ಸ್ಟಾರ್ ಆಗಮಿಸಲಿದ್ದಾರೆ. ಹೊಸ ಕ್ಯಾಪ್ಟನ್ ಗಿಲ್ಲಿ ನಟನ ನಾಯಕತ್ವ ಮತ್ತು ಕಾವ್ಯಾ ಆಟದ ಬದಲಾವಣೆಗಳು ಸಂಚಿಕೆಯ ಕುತೂಹಲವನ್ನು ಹೆಚ್ಚಿಸಿವೆ.

Read Full Story
08:00 AM (IST) Dec 27

Karnataka News Live 27 December 2025Amuthadhaare Serial - ಯಾರೂ ಊಹಿಸದ ಹೆಜ್ಜೆ ಇಟ್ಟ ಭೂಮಿಕಾ; ವೀಕ್ಷಕರನ್ನು ಇನ್ನು ಹಿಡಿಯೋಕಾಗಲ್ಲ!

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಯಾರೂ ಊಹಿಸದ ಘಟನೆ ನಡೆದು ಹೋಯ್ತು. ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್‌ ಮಾಡಿದೆ. ಭೂಮಿ ಈ ರೀತಿ ಮಾಡ್ತಾಳೆ ಎಂದು ಅಂದುಕೊಂಡಿರಲಿಲ್ಲ. ಇದು ವೀಕ್ಷಕರಿಗಂತೂ ಸಖತ್‌ ಹಬ್ಬ ಎಂದು ಹೇಳಬಹುದು.

Read Full Story
07:30 AM (IST) Dec 27

Karnataka News Live 27 December 2025BBK 12 - ಯಾರು ಗಿಲ್ಲಿ ನಟನ ಬಳಿ ಇದು ಆಗೋದೇ ಇಲ್ಲ ಎಂದಿದ್ರೋ, ಅದನ್ನೇ ಮಾಡಿ ತೋರಿಸಿದ ಜಗತ್‌ ಕಿಲಾಡಿ

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಫಿಸಿಕಲ್‌ ಟಾಸ್ಕ್‌ ಮಾಡೋದಿಲ್ಲ ಎಂಬ ಆರೋಪ ಇತ್ತು. ಬರೀ ಮಾತು ಆಡಿಕೊಂಡು ಇಲ್ಲಿಯವರೆಗೆ ಬಂದ ಗಿಲ್ಲಿ ಮಾತ್ರ ಯಾರ ಜೊತೆಯೂ ಫಿಸಿಕಲ್‌ ಟಾಸ್ಕ್‌ ಆಡಿ ಗೆಲ್ಲಲ್ಲ ಎಂದು ಹೇಳುತ್ತಲೇ ಬಂದಿದ್ದರು.

Read Full Story
07:20 AM (IST) Dec 27

Karnataka News Live 27 December 2025BBK 12 - ಕ್ಯಾಪ್ಟನ್ ಆಗ್ತಿದ್ದಂತೆ ಎಡವಟ್ಟು ಮಾಡಿಕೊಂಡ ಗಿಲ್ಲಿ ನಟ ; ಶುರುವಲ್ಲೇ ಎದುರಾದ ಮೊದಲ ವಿಘ್ನ!

ಬಿಗ್‌ಬಾಸ್ ಮನೆಯ 14ನೇ ವಾರದ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆಯಾಗಿದ್ದಾರೆ. ಆದರೆ, ಕ್ಯಾಪ್ಟನ್ ಆದ ಖುಷಿಯಲ್ಲೇ ಮೈಕ್ ಸರಿಯಾಗಿ ಧರಿಸದೆ ಮೂಲ ನಿಯಮವನ್ನೇ ಉಲ್ಲಂಘಿಸಿ ಮನೆಯ ಸದಸ್ಯರಿಂದ ತಮಾಷೆಗೆ ಗುರಿಯಾಗಿದ್ದಾರೆ. 

Read Full Story
07:04 AM (IST) Dec 27

Karnataka News Live 27 December 2025ಬೆಂಗಳೂರು ಬೀದಿ ನಾಯಿಗಳು ಶೀಘ್ರ ಶೆಲ್ಟರ್‌ಗೆ - ರಾವ್‌

ನಗರದಲ್ಲಿ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುವ ಶೆಲ್ಟರ್‌ಗಳು ಜನವರಿ ಮೊದಲ ವಾರದ ವೇಳೆಗೆ ಕಾರ್ಯಾರಂಭ ಮಾಡಲಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

Read Full Story