ಹೀರೋ ಮೋಟೋಕಾರ್ಪ್ ಹೊಸ ಸೂಪರ್ ಸ್ಪ್ಲೆಂಡರ್ XTEC ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಜೆಟ್ ಸ್ನೇಹಿ ಬೆಲೆ, 68 kmpl ವರೆಗಿನ ಅತ್ಯುತ್ತಮ ಮೈಲೇಜ್  ಬ್ಲೂಟೂತ್ ಕನೆಕ್ಟಿವಿಟಿಯಂತಹ ಸ್ಮಾರ್ಟ್ ಫೀಚರ್ಸ್ ಹೊಂದಿದೆ. 124.7cc ಎಂಜಿನ್ ಹೊಂದಿರುವ ಇದು, ಹೋಂಡಾ ಶೈನ್, ಬಜಾಜ್ ಪ್ಲಾಟಿನಾ ಬೈಕ್‌ಗಳಿಗೆ ಪೈಪೋಟಿ

ಮಧ್ಯಮ ವರ್ಗದ ಜನರ ಫೇವರೆಟ್ ಬೈಕ್ ಎಂದೇ ಹೆಸರಾಗಿರುವ ಹೀರೋ ಸ್ಪ್ಲೆಂಡರ್ ಈಗ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಹೀರೋ ಸೂಪರ್ ಸ್ಪ್ಲೆಂಡರ್ XTEC (Hero Super Splendor XTEC) ಬೈಕ್ ಬಜೆಟ್ ದರದಲ್ಲಿ ಗರಿಷ್ಠ ಮೈಲೇಜ್ ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ಹೊತ್ತು ಬಂದಿದ್ದು, ಗ್ರಾಹಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಹೀರೋ ಸೂಪರ್ ಸ್ಪ್ಲೆಂಡರ್ XTEC ಬೆಲೆ ಎಷ್ಟು?

ಹೊಸ ಸೂಪರ್ ಸ್ಪ್ಲೆಂಡರ್ XTEC ಬೈಕ್ ಡ್ರಮ್ ರೂಪಾಂತರದ ಬೆಲೆ ಸುಮಾರು ₹78,618 (ಎಕ್ಸ್-ಶೋರೂಂ) ನಿಂದ ಆರಂಭವಾಗುತ್ತದೆ. ಇನ್ನು ಪ್ರೀಮಿಯಂ ಲುಕ್ ಬಯಸುವವರಿಗಾಗಿ ಡಿಸ್ಕ್ ಬ್ರೇಕ್ ರೂಪಾಂತರವು ₹82,305 ಕ್ಕೆ ಲಭ್ಯವಿದೆ. ಹೋಂಡಾ ಶೈನ್ ಮತ್ತು ಬಜಾಜ್ ಪ್ಲಾಟಿನಾದಂತಹ ದಿಗ್ಗಜ ಬೈಕ್‌ಗಳಿಗೆ ಇದು ನೇರ ಪೈಪೋಟಿ ನೀಡುತ್ತಿದ್ದು, ಈ ದರದಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್ ಬೈಕ್ ಎನ್ನಿಸಿಕೊಂಡಿದೆ.

ಪವರ್‌ಫುಲ್ ಎಂಜಿನ್ ಮತ್ತು ಸ್ಮೂತ್ ಡ್ರೈವ್

ಈ ಬೈಕ್ 124.7cc ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 10.7 PS ಪವರ್ ಮತ್ತು 10.6 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 2025 ರ ನೂತನ ಮಾದರಿಯು BS6 ಫೇಸ್ 2B ಎಂಜಿನ್‌ನೊಂದಿಗೆ ಬಂದಿದ್ದು, ಇದು ಪರಿಸರ ಸ್ನೇಹಿಯಾಗಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ನಗರ ಪ್ರದೇಶದ ಟ್ರಾಫಿಕ್‌ನಲ್ಲಿ ಕೂಡ ಇದು ಅತ್ಯಂತ ಸುಲಭವಾಗಿ ಚಲಿಸುತ್ತದೆ.

ಫುಲ್ ಟ್ಯಾಂಕ್ ಮಾಡಿದರೆ ವಾರವಿಡೀ ಟೆನ್ಷನ್ ಇಲ್ಲ!

ಈ ಬೈಕ್‌ನ ಹೈಲೈಟ್ ಅಂದರೆ ಅದರ ಮೈಲೇಜ್. ARAI ಪ್ರಕಾರ ಇದು 68 kmpl ಮೈಲೇಜ್ ನೀಡುತ್ತದೆ, ಆದರೆ ರಸ್ತೆಗಳಲ್ಲಿ 60 ರಿಂದ 65 kmpl ಮೈಲೇಜ್ ಖಚಿತ. ಈ ಬೈಕ್ 12-ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ ಬರೊಬ್ಬರಿ 700 ಕಿಲೋಮೀಟರ್‌ಗಳಿಗೂ ಅಧಿಕ ದೂರ ಪ್ರಯಾಣಿಸಬಹುದು. ದೈನಂದಿನ ಕಚೇರಿ ಕೆಲಸ ಅಥವಾ ಲಾಂಗ್ ರೈಡ್ ಮಾಡುವವರಿಗೆ ಇದು ಪೆಟ್ರೋಲ್ ಖರ್ಚು ಉಳಿಸುವ ವರದಾನವೇ ಸರಿ.

ಹೈಟೆಕ್ ಫೀಚರ್‌ಗಳು, ಸುರಕ್ಷತೆ ಹೇಗಿದೆ?

ಸ್ಮಾರ್ಟ್ ಜನರ ಆಯ್ಕೆಗಾಗಿ ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಇರುವ ಸಂಪೂರ್ಣ ಡಿಜಿಟಲ್ ಡಿಸ್‌ಪ್ಲೇ ನೀಡಲಾಗಿದೆ. ಇದರಿಂದ ನಿಮ್ಮ ಮೊಬೈಲ್ ಕರೆ ಮತ್ತು ಮೆಸೇಜ್ ಅಲರ್ಟ್‌ಗಳನ್ನು ಬೈಕ್‌ನಲ್ಲೇ ನೋಡಬಹುದು. ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ನಂತಹ ಸುರಕ್ಷತಾ ಸೌಲಭ್ಯಗಳು ಈ ಬೈಕ್‌ನ ಮೌಲ್ಯವನ್ನು ಹೆಚ್ಚಿಸಿವೆ.

ಮಾರುಕಟ್ಟೆಯಲ್ಲಿ ಯಾರಿಗೆ ಪೈಪೋಟಿ?

ಸದ್ಯ ಮಾರುಕಟ್ಟೆಯಲ್ಲಿ ಹೀರೋ ಸೂಪರ್ ಸ್ಪ್ಲೆಂಡರ್ XTEC ಬೈಕ್, ಹೋಂಡಾ ಶೈನ್ 125, ಟಿವಿಎಸ್ ರೈಡರ್ 125 ಮತ್ತು ಬಜಾಜ್ ಪಲ್ಸರ್ 125 ಬೈಕ್‌ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಮೈಲೇಜ್ ಮತ್ತು ಆಧುನಿಕ ತಂತ್ರಜ್ಞಾನ ಎರಡನ್ನೂ ಸಮತೋಲನವಾಗಿ ನೀಡುವಲ್ಲಿ ಹೀರೋ ಸಂಸ್ಥೆ ಈ ಮೂಲಕ ಯಶಸ್ವಿಯಾಗಿದೆ.