- Home
- Entertainment
- TV Talk
- BBK 12: ಗಿಲ್ಲಿ ನಟನ ವಿರುದ್ಧ ತಿರುಗಿ ಬೀಳೋಕೆ ಎಲ್ಲ ಸ್ಪರ್ಧಿಗಳಿಗೆ ಸಿಕ್ಕಿದೆ ಬ್ರಹ್ಮಾಸ್ತ್ರ! ಇದು ಸ್ವಯಂ ಅಪರಾಧ!
BBK 12: ಗಿಲ್ಲಿ ನಟನ ವಿರುದ್ಧ ತಿರುಗಿ ಬೀಳೋಕೆ ಎಲ್ಲ ಸ್ಪರ್ಧಿಗಳಿಗೆ ಸಿಕ್ಕಿದೆ ಬ್ರಹ್ಮಾಸ್ತ್ರ! ಇದು ಸ್ವಯಂ ಅಪರಾಧ!
Bigg Boss Kannada Season 12 Episode Update: ತಂಡವನ್ನು ಮುನ್ನಡೆಸಬೇಕಾದ ನಾಯಕನೇ ಸೋಮಾರಿಯಾದರೆ, ಆ ಸೈನ್ಯ ಸುಮ್ಮನಿರುತ್ತದೆಯೇ? ಈಗ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ 'ಕೆಲಸ'ದ ಯುದ್ಧ ಶುರುವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಗಿಲ್ಲಿ ನಟ ಈಗ ಕ್ಯಾಪ್ಟನ್
ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ, ಗಿಲ್ಲಿ ನಟನ ಸಾರಥ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಗಿಲ್ಲಿ ನಟ ಅಲಿಯಾಸ್ ನಟರಾಜ್ ಅವರು ಕೊನೆಗೂ, ಮನೆಯ ಕ್ಯಾಪ್ಟನ್ ಆದರು. ಈಗ ಉಳಿದ ಸ್ಪರ್ಧಿಗಳು ಅಸಹಕಾರ ಚಳುವಳಿ ಮಾಡಿದರೆ?
ಕ್ಯಾಪ್ಟನ್ ಆಗೋಕೆ ಸಾಧ್ಯವಿಲ್ಲ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಸ್ಪರ್ಧಿಗಳ ಮನೆಯವರು ಆಯ್ಕೆ ಮಾಡಿದಂತೆ, ಹೊಸ ಕ್ಯಾಪ್ಟನ್ ಆಗಿದ್ದಾರೆ. ಗಿಲ್ಲಿ ನಟ ಅವರು ಫಿಸಿಕಲ್ ಟಾಸ್ಕ್ ಆಡಿ ಕ್ಯಾಪ್ಟನ್ ಆಗೋಕೆ ಸಾಧ್ಯವಿಲ್ಲ ಎಂದು ಸೂರಜ್, ರಘು ಮಾತನಾಡಿಕೊಂಡಿದ್ದರು. ಮನೆಯವರ ಮತಗಳ ಆಧಾರದ ಮೇಲೆ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆದರು. ಕೊನೆಯಲ್ಲಿ ಗಿಲ್ಲಿ ನಟ ಅವರು ಕ್ಯಾಪ್ಟನ್ ಆದರು.
ಗಿಲ್ಲಿ ನಟ ಅವರೇ ಕೆಲಸ ಮಾಡೋದಿಲ್ವಲ್ಲ..!
ಕ್ಯಾಪ್ಟನ್ ಆದವರು ಇಡೀ ಮನೆಯ ಜವಾಬ್ದಾರಿಯನ್ನು ತನ್ನ ಹೆಗಲಿನ ಮೇಲೆ ಹೊತ್ತು ಎಲ್ಲರಿಂದ ಕೆಲಸ ಮಾಡಿಸಬೇಕು. ಬೇರೆಯವರ ಬಳಿ ಕೆಲಸ ಮಾಡಿಸುವ ಅರ್ಹತೆ ಇರಬೇಕು. ಇದರ ಜೊತೆಗೆ ಅವರಿಗೆ ಎಲಿಮಿನೇಶನ್‌ನಿಂದ ಇಮ್ಯುನಿಟಿ ಕೂಡ ಸಿಗುವುದು. ಆದರೆ, ಸ್ವತಃ ಗಿಲ್ಲಿ ನಟ ಅವರೇ ಕೆಲಸ ಮಾಡೋದಿಲ್ವಲ್ಲ..!
ಈಗ ಉಳಿದವರು ಏನು ಮಾಡ್ತಾರೆ?
ಈ ಮನೆಯಲ್ಲಿ ಕ್ಯಾಪ್ಟನ್ ಆದವರಿಗೆ ಬಿಗ್ ಬಾಸ್ ಕೆಲವು ವಿಶೇಷ ಸವಲತ್ತುಗಳನ್ನು ಕೊಟ್ಟಿರುತ್ತಾರೆ. ಗಿಲ್ಲಿ ನಟ ಅವರು ಈ ಹಿಂದೆ ಯಾರು ಎಷ್ಟೇ ಬಾರಿ ಹೇಳಿದರೂ ಕೂಡ, ಕ್ಯಾಪ್ಟನ್ ಹೇಳಿದರೂ ಕೂಡ, ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಮಾತನಾಡಿದರೂ ಕೂಡ ಕೆಲಸವನ್ನು ಮಾಡಿಲ್ಲ. ಈಗ ಉಳಿದವರು ಏನು ಮಾಡ್ತಾರೆ?
ಗಿಲ್ಲಿ ನಟ ಗೆಟಪ್ ಬದಲಾಗಿದೆ.
ನಾವು ಎಷ್ಟೇ ಬಾರಿ ಹೇಳಿದರೂ ಕೂಡ ಗಿಲ್ಲಿ ನಟ ಕೆಲಸ ಮಾಡಿಲ್ಲ, ನಾವು ಕೂಡ ಕೆಲಸ ಮಾಡೋದಿಲ್ಲ ಎಂದು ಸ್ಪರ್ಧಿಗಳು ಹೇಳಿದರೆ, ಅಲ್ಲಿಗೆ ಗಿಲ್ಲಿ ನಟ ಅವರು ಕ್ಯಾಪ್ಟನ್ಸಿ ನಿಭಾಯಿಸುವಲ್ಲಿ ಸೋಲುತ್ತಾರೆ. ಕ್ಯಾಪ್ಟನ್ ಆಗುತ್ತಿದ್ದಂತೆ ಗಿಲ್ಲಿ ನಟ ಅವರ ಗೆಟಪ್ ಬದಲಾಗಿದೆ. ವಿಜಯ ತಿಲಕ ಇಟ್ಟು, ಪಂಚೆ ಉಟ್ಟು, ಶರ್ಟ್ ಧರಿಸಿ ಅವರ ಖದರ್ ಚೇಂಜ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

