- Home
- Entertainment
- TV Talk
- 'ವೃಷಭ' ಸಿನಿಮಾ ರಿಲೀಸ್; ಕಣ್ಣು ಕಳೆದುಕೊಳ್ಳೋ ಸ್ಥಿತಿ ಬಂದಿದ್ರೂ, ಬೆಲೆ ಇಲ್ಲ ಎಂದ Bigg Boss ರಘು
'ವೃಷಭ' ಸಿನಿಮಾ ರಿಲೀಸ್; ಕಣ್ಣು ಕಳೆದುಕೊಳ್ಳೋ ಸ್ಥಿತಿ ಬಂದಿದ್ರೂ, ಬೆಲೆ ಇಲ್ಲ ಎಂದ Bigg Boss ರಘು
Bigg Boss Raghu News: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಘು ಅವರು ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ, ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ರಘು ಅವರು ಫಿನಾಲೆಗೆ ಹೋಗುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.

ಬೇಸರ ಹೊರಹಾಕಿದ ರಘು
ಮೋಹನ್‌ಲಾಲ್, ಸಮರ್ಜಿತ್ ಲಂಕೇಶ್ ನಟನೆಯ ‘ವೃಷಭ’ ಸಿನಿಮಾದಲ್ಲಿ ರಘು ಅವರು ನಟಿಸಿದ್ದಾರೆ. ಆದರೆ ಅವರ ಪಾತ್ರಕ್ಕೆ ಸರಿಯಾದ ಮಾನ್ಯತೆ ನೀಡಲಿಲ್ಲವಂತೆ. ಈ ಬಗ್ಗೆ ರಘು ಅವರು ಜೂನ್ ತಿಂಗಳಿನಲ್ಲಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದಿದ್ದಾರೆ ರಘು
6 ಗಂಟೆ ಮೇಕಪ್
ಪ್ರತಿದಿನ ಆರು ಗಂಟೆಗಳ ಕಾಲ ಅತಿಯಾಗಿ ಮೇಕಪ್ ಮಾಡಲಾಗುತ್ತಿತ್ತು. ಸತತ ಹದಿನೈದು ರಾತ್ರಿಗಳ ಕಾಲ ಚಿತ್ರೀಕರಣ ಆಗಿದೆ. ನನ್ನ ಹೃದಯ, ಆತ್ಮ ಮತ್ತು ದೇಹ — ಎಲ್ಲವನ್ನೂ ನಾನು ಈ ಪಾತ್ರಕ್ಕಾಗಿ ಧಾರೆ ಎರೆದಿದ್ದೇನೆ ಎಂದು ರಘು ಹೇಳಿದ್ದಾರೆ.
ಕಣ್ಣು ಕಳೆದುಕೊಳ್ಳೋ ಥರ ಆಗಿತ್ತು
ಒಂದು ಹಂತದಲ್ಲಂತೂ, ನಾನು ಲೆನ್ಸ್ ಹಾಕಿದಾಗ, ನಾನು ನನ್ನ ದೃಷ್ಟಿಯನ್ನೇ ಕಳೆದುಕೊಳ್ಳುವ ಹಾಗೆ ಆಗಿತ್ತು. ಪ್ರತಿದಿನ ನಾನು ಬೆಳಿಗ್ಗೆ ಎದ್ದಾಗ ಮೇಕಪ್‌ಗೆ ಬಳಸಿದ ರಾಸಾಯನಿಕಗಳಿಂದಾಗಿ ನನ್ನ ಚರ್ಮ ಸುಲಿದು ಹೋಗುತ್ತಿತ್ತು. ಆದರೂ, ನಾನು ಹಿಂದೇಟು ಹಾಕಲಿಲ್ಲ. ಆ ನೋವು, ಆಯಾಸ, ಬೇಸರವನ್ನು ನಾನು ಮೆಟ್ಟಿ ನಿಂತು ಮುನ್ನುಗ್ಗಿದೆ ಎಂದಿದ್ದಾರೆ.
ನೋವನ್ನು ವಿವರಿಸಲು ಪದಗಳಿಲ್ಲ
ಆದರೆ ಕೊನೆಗೆ ನನಗೆ ಯಾವುದೇ ಮಾನ್ಯತೆ ಸಿಗಲಿಲ್ಲ, ಮೆಚ್ಚುಗೆಯೂ ಇಲ್ಲ. ಕನಿಷ್ಠ ಪಕ್ಷ ನನ್ನ ಹೆಸರನ್ನು ಉಲ್ಲೇಖಿಸಲೂ ಇಲ್ಲ. ಇದು ನೋವು ಮಾಡುತ್ತದೆ. ಆ ನೋವನ್ನು ವಿವರಿಸಲು ಪದಗಳಿಲ್ಲ. ಆದರೂ, ಇದೇ ಜೀವನ ಎಂದಿದ್ದಾರೆ.
ಇನ್ನೂ ಸ್ಟ್ರಾಂಗ್ ಆಗಿದ್ದೇನೆ
ನಾನು ಕಂಡ ಕನಸುಗಳೆಲ್ಲವೂ ಒಂದು ದಿನ ನನ್ನನ್ನು ಹುಡುಕಿಕೊಂಡು ಬರುತ್ತವೆ ಎಂದು ನಾನು ನಂಬಿದ್ದೇನೆ. ಅಲ್ಲಿಯವರೆಗೆ, ನಾನು ಇನ್ನೂ ಸ್ಟ್ರಾಂಗ್ ಆಗಿದ್ದೇನೆ, ಜಾಣ್ಮೆಯಿಂದ, ಹೆಚ್ಚಿನ ಛಲದಿಂದ ಮುನ್ನಡೆಯುತ್ತೇನೆ. ನನ್ನನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವವರಿಗೆ ವಂದನೆಗಳು. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ ರಘು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

