ರಣವೀರ್ ಸಿಂಗ್ ಅವರ 'ಧುರಂಧರ್ 2' ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. 640 ಕೋಟಿ ಗಳಿಸಿದ ಮೊದಲ ಭಾಗದ ನಂತರ, ಸೀಕ್ವೆಲ್ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ.
- Home
- News
- State
- State News Live: ಯಶ್ ಎದುರು ಧುರಂಧರ್ 2 ಬ್ಲಾಕ್‌ಬಸ್ಟರ್ ಮಾಡಲು ನಿರ್ಮಾಪಕರ ಭರ್ಜರಿ ಪ್ಲಾನ್, 2000 ಕೋಟಿ ಪಕ್ಕಾ ಎಂದ ಜನ!
State News Live: ಯಶ್ ಎದುರು ಧುರಂಧರ್ 2 ಬ್ಲಾಕ್‌ಬಸ್ಟರ್ ಮಾಡಲು ನಿರ್ಮಾಪಕರ ಭರ್ಜರಿ ಪ್ಲಾನ್, 2000 ಕೋಟಿ ಪಕ್ಕಾ ಎಂದ ಜನ!

ಬೆಂಗಳೂರು (ಡಿ.26): ಒಂದೆಡೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಶುಕ್ರ ವಾರ ಸಂಜೆ ತೆರಳಲಿದ್ದಾರೆ. ಆದರೆ ಈ ವೇಳೆ ಅವಕಾಶ ಸಿಕ್ಕರೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತ್ರ ಅವರು ಹೈಕಮಾಂಡ್ ಜತೆ ಚರ್ಚಿಸುವ' ಸಾಧ್ಯತೆ ಇದೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 26th December:ಯಶ್ ಎದುರು ಧುರಂಧರ್ 2 ಬ್ಲಾಕ್‌ಬಸ್ಟರ್ ಮಾಡಲು ನಿರ್ಮಾಪಕರ ಭರ್ಜರಿ ಪ್ಲಾನ್, 2000 ಕೋಟಿ ಪಕ್ಕಾ ಎಂದ ಜನ!
Karnataka News Live 26th December:BBK 12 - ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಫ್ಯಾಮಿಲಿ ರೌಂಡ್ ಇದ್ದು, ಈಗಾಗಲೇ ಮನೆಗೆ ಎಲ್ಲ ಸ್ಪರ್ಧಿಗಳ ಮನೆಯವರು ಎಂಟ್ರಿ ಕೊಟ್ಟಿದ್ದಾರೆ. ಈಗ ಮಾಳು ನಿಪನಾಳ ಅವರ ಕುಟುಂಬ ಕೂಡ ದೊಡ್ಮನೆಗೆ ಬಂದಿದೆ.
Karnataka News Live 26th December:Halli Power Show Winner - ಹಳ್ಳಿ ಪವರ್ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಗೆಲ್ಲೋರು ಯಾರು?
Halli Power Show: ಸಿಟಿ ಲೈಫ್ ಬಿಟ್ಟು, ಹಳ್ಳಿಯಲ್ಲಿ ಜೀವನ ಮಾಡುವ ಕಥೆಯೇ ‘ಹಳ್ಳಿ ಪವರ್’ ರಿಯಾಲಿಟಿ ಶೋನ ತಿರುಳು. ಈಗ ಈ ಶೋ ಗ್ರ್ಯಾಂಡ್ ಫಿನಾಲೆ ಸಮಯ ಹತ್ತಿರ ಬಂದಿದೆ. ಹಾಗಾದರೆ ಯಾರು ವಿನ್ನರ್ ಆಗ್ತಾರೆ?
Karnataka News Live 26th December:ದಾವಣಗೆರೆಯ ಶೈಕ್ಷಣಿಕ ಪುನರುಜ್ಜೀವನದ ಶಿಲ್ಪಿ ಶಾಮನೂರು
ಡಾ.ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಸರಳ ಸಜ್ಜನ, ಸಾತ್ವಿಕ ರಾಜಕಾರಣಿಯಾಗಿದ್ದರು. ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲೂ ಅಚ್ಚಳಿಯದ ಮುದ್ರೆ ಒತ್ತಿದ್ದರು. ಅವರು ದೇಶದ ಯಾವುದೇ ರಾಜ್ಯ ವಿಧಾನಸಭೆ ಪ್ರತಿನಿಧಿಸುವ ಶಾಸಕರ ಪೈಕಿ ಅತ್ಯಂತ ಹಿರಿಯರು ಎನ್ನುವುದು ವಿಶೇಷ.
Karnataka News Live 26th December:ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಪ್ರಸ್ತುತ ದಿನಮಾನಗಳಲ್ಲಿ ನಾವು ಆಧುನಿಕ ಆಹಾರ ಪದ್ಧತಿ ಅಳವಡಿಕೆ ಮಾಡಿಕೊಂಡಿದ್ದೇವೆ. ಆದರೆ, ಯಾವುದು ಶುದ್ಧ ಮತ್ತು ಯಾವುದು ಅಶುದ್ಧ ಎಂಬುದನ್ನು ಪತ್ತೆ ಮಾಡುವುದೇ ಸವಾಲಿನ ಸಂಗತಿ ಆಗಿದೆ.
Karnataka News Live 26th December:ಒಬ್ಬ ಮಾರ್ಕ್, ಎರಡು ರಾತ್ರಿ, ಒಂದು ಹಗಲು: ಇಲ್ಲಿದೆ ಪವರ್‌ಫುಲ್ ಆ್ಯಕ್ಷನ್ ಸಿನಿಮಾ 'ಮಾರ್ಕ್' ವಿಮರ್ಶೆ
ಹೀರೋನ ಒಂದು ಏಟಿಗೇ ರಕ್ತ ಕಾರುವ, ಗಾಳಿಯಲ್ಲಿ ಹಾರುವ ಹತ್ತಾರು ವಿಲನ್‌ಗಳು, ನೆಲಕ್ಕೆ ಗುದ್ದಿದರೆ ನೆಲವೇ ಒಡೆಯುವಂಥಾ ಹೀರೋ ಕೇಂದ್ರಿತ ವೈಭವೀಕರಣಗಳು ಸಾಕಷ್ಟಿವೆ. ಬೋನಸ್‌ನಂತೆ ಡ್ಯಾನ್ಸಿಂಗ್ ಸ್ಟೈಲ್ ಫೈಟ್ ಇದೆ.
Karnataka News Live 26th December:ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್ ಆಗಿದ್ದು ಹೇಗೆ?: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ನ ಲೂಟಿ ಸರ್ಕಾರ. ಒಬ್ಬ ಆರ್ಥಿಕ ಸಚಿವರಿಗೆ ಗೃಹಲಕ್ಷ್ಮೀ ಯೋಜನೆಯ ₹5 ಸಾವಿರ ಕೋಟಿ ಬಗ್ಗೆ ಮಾಹಿತಿಯೇ ಇಲ್ಲವೆಂದರೆ ಹೇಗೆ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Karnataka News Live 26th December:ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿಂದನೆ ಪ್ರಕರಣ: ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾಗೆ ಸಿಸಿಬಿ ಪತ್ರ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ ಸಂಬಂಧ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮಾಲೀಕತ್ವದ ಮೆಟಾ ಕಂಪನಿಗೆ ಅಧಿಕಾರಿಗಳು ಪತ್ರ ಬರೆದು ಮಾಹಿತಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.
Karnataka News Live 26th December:‘ಹೇಟ್’ಬುಕ್ ಕಮೆಂಟ್‌ಗಳಿಗೆ ದ್ವೇಷದ ಬಿಲ್ ಕಡಿವಾಣ?
ಶರವೇಗವಾಗಿ ಮೊಬೈಲ್ ಫೋನ್‌ಗಳನ್ನು ಸ್ಕ್ರೋಲ್ ಮಾಡುವ ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಂಬುದು ನಮ್ಮನ್ನು ಪರಸ್ಪರ ಬೆಸೆಯುವ ವೇದಿಕೆಯಾಗಬೇಕಿತ್ತು. ದುರ್ದೈವವೆಂದರೆ, ಅದು ಈಗ ವಿಷ ಉಗುಳುವ ಪೆಡಂಭೂತವಾಗಿಬಿಟ್ಟಿದೆ.
Karnataka News Live 26th December:ಚುನಾವಣೆ ಯಾವಾಗ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ: ಬಿ.ವೈ.ವಿಜಯೇಂದ್ರ ವಿಶ್ವಾಸ
ವಾಜಪೇಯಿ ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು ಬಿವೈವಿ.
Karnataka News Live 26th December:ಕುರ್ಚಿ ಸರ್ಕಸ್ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ
ಒಂದೆಡೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಶುಕ್ರವಾರ ಸಂಜೆ ತೆರಳಲಿದ್ದಾರೆ.
Karnataka News Live 26th December:ಸಲಹೆ ಕೊಟ್ಟರೆ ದುರಹಂಕಾರದ ಮಾತು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಲಹೆ ಕೊಟ್ಟರೆ, ರಾಜ್ಯ ಸರ್ಕಾರದವರು ದುರಂಹಕಾರದ ಮಾತುಗಳನ್ನು ಆಡುತ್ತಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
Karnataka News Live 26th December:ಭೂಪರಿವರ್ತನೆ ಇನ್ನು ಅತಿ ಸರಳ
ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಮಾಸ್ಟರ್ ಪ್ಲಾನ್ ಏರಿಯಾ (ಸಮಗ್ರ ಯೋಜನಾ ಪ್ರದೇಶ) ಪ್ರಕಾರ ಭೂ ಬಳಕೆ ಮಾಡಿಕೊಳ್ಳಲು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.