- Home
- News
- India News
- ಇರಾನ್-ಇಸ್ರೇಲ್ ದಾಳಿ; ಮುಂದಾಗೋ ಭೃಗು ಅಂಗಾರಕ ಯುತಿ ಅಪಾಯ ಬಿಚ್ಚಿಟ್ಟ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
ಇರಾನ್-ಇಸ್ರೇಲ್ ದಾಳಿ; ಮುಂದಾಗೋ ಭೃಗು ಅಂಗಾರಕ ಯುತಿ ಅಪಾಯ ಬಿಚ್ಚಿಟ್ಟ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಾಗಿದೆ. ಇರಾಕ್ ಹಾಗೂ ಇರಾನ್ ಸಂಘರ್ಷದಲ್ಲಿ ಸಾಕಷ್ಟು ಜನರು ಒದ್ದಾಡುತ್ತಿದ್ದಾರೆ. ಈಗ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಭೃಗು ಅಂಗಾರಕ ಯುತಿ ಅಪಾಯಕಾರಿ
ಈ ಭೃಗು ಅಂಗಾರಕ ಯುತಿ ಬಹಳ ಅಪಾಯಕಾರಿ. ನೇರ ಹೊಟ್ಟೆಯೊಳಗೇ ಕಿತಾಪತಿ ಮಾಡ್ತದೆ. ಧನುಸ್ಸಿನಲ್ಲಿ ಇದು ಇದ್ದಾಗ ಯುದ್ಧ ತಾರಕಕ್ಕೇರಿತು. ಮತ್ತೆ ಮಕರದಲ್ಲಿ ಸ್ವಲ್ಪ ದಿನದ ನಂತರ ಯುತಿ. ಕೆಲ ದಿನ ಶಾಂತವಾಯ್ತು. ಮತ್ತೆ ಶುರುವಾಯ್ತು ಹತ್ಯಾಕಾಂಡ.
ಅಧಿಕಾರದಲ್ಲಿ ಮದ ಬಂದರೆ ಗುದ್ಧಾಟ
ಇದಾದ ಮೇಲೆ ಕುಂಭ. ಇಲ್ಲಿಯೂ ಆರಂಭದಲ್ಲಿ ಕೆಲ ದಿನ ಶಾಂತವಾಗಿತ್ತು.ಈಗ ಮತ್ತೆ ತಾರಕಕ್ಕೇರಿದೆ.ಪಾಕಿನಲ್ಲಿ ಅಫಘಾನರ ಯುದ್ಧ. ಆದರೆ ಇದೊಂದು ಅಧಿಕಾರ ಯೋಗವೂ ಹೌದು. ಅಧಿಕಾರದಲ್ಲಿ ಮದ ಬಂದರೆ ಗುದ್ಧಾಟವೂ ಆಗುತ್ತದೆ.
ಆರೋಗ್ಯ ಸಮಸ್ಯೆ
ಇನ್ನು ದೇಹದಲ್ಲಿ ಕಿರು ಹೊಟ್ಟೆಯ ಭಾಗದಲ್ಲಿ ತೊಂದರೆ.ಅಲ್ಲಿಯೇ ಗರ್ಭಕೋಶ,ಮೂತ್ರ ಕೋಶ,ಕಿಡ್ನಿ ಇರೋದು.ಅದಕ್ಕೆ ಮಾರಕ. ಯುರಿನ್ ಬ್ಲಾಡರ್,ಕಿಡ್ನಿ ಸ್ಟೋನ್ ಇತ್ಯಾದಿ ತೊಂದರೆ ಬರುತ್ತದೆ.
ಮುಂದೆ ಏನಾಗಲಿದೆ?
ಇನ್ನೊಂದು ನಾಲ್ಕೈದು ದಿನ ಕುಂಭದಲ್ಲಿ ಶುಕ್ರ ಕುಜರ ಯುತಿ ಇದೆ. ಅತ್ಯಾ*ಚಾರ, ಮತ ಕಲಹ ನಡೆಯಬಹುದು. ಯಾವುದಕ್ಕೂ ಅವರವರ ತಾಳ್ಮೆ ಸಂಯಮಗಳೇ ಪರಿಹಾರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

