Karnataka News Live: ಕಿಡ್ನಿ ರೋಗಿಗಳೇ, ಈ 5 ಸರಳ ಆಹಾರಗಳನ್ನು ತಪ್ಪದೇ ಬಳಸಿ!

ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಲೈಂಗಿ*ಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಖಾಸಗಿ ಶಾಲೆಯ ಮಾಲೀಕ ಸೇರಿ ಮೂವರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
8 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಸತಿ ಶಾಲೆಯ ಮುಖ್ಯಸ್ಥ ಧನಂಜಯ್, ಕೃತ್ಯಕ್ಕೆ ನೆರವಾದ ಆರೋಪದ ಮೇಲೆ ಮಹಿಳಾ ವಾರ್ಡನ್ ಮತ್ತು ಕೃತ್ಯದ ಬಗ್ಗೆ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಧನಂಜಯ್ ಪತ್ನಿಯನ್ನು ಬಂಧಿಸಲಾಗಿದೆ. ಬಾಲಕಿಯ ಪಾಲಕರು ನೀಡಿದ ದೂರಿನನ್ವಯ ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Karnataka News Live 1 March 2026 ಕಿಡ್ನಿ ರೋಗಿಗಳೇ, ಈ 5 ಸರಳ ಆಹಾರಗಳನ್ನು ತಪ್ಪದೇ ಬಳಸಿ!
Karnataka News Live 1 March 2026 ಹೊಸ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭ, ದೆಹಲಿಗೆ ಬನ್ನಿ ಎಂದ ಹೆಚ್‌ಡಿಕೆ, ರೈತರಿಗೆ ಸಿಗುವುದೇ ನ್ಯಾಯ?
ಆಲೂರಿನಲ್ಲಿ ಹೊಸ ರೈಲ್ವೆ ಮಾರ್ಗಕ್ಕೆ ಭೂಮಿ ಕಳೆದುಕೊಳ್ಳುವ ರೈತರು ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ. ರೈಲ್ವೆ ಸಚಿವರೊಂದಿಗೆ ಸಮಾಲೋಚಿಸಿ ಸೂಕ್ತ ಬೆಲೆ ಕೊಡಿಸುವ ಭರವಸೆ ನೀಡಿದ್ದಾರೆ.
Karnataka News Live 1 March 2026 ಚಿಕ್ಕಬಳ್ಳಾಪುರ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ
ಚಿಕ್ಕಬಲ್ಳಾಪುರದ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ, ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಅಲೀಪುರ ಮಿನಿ ಇರಾನ್ ಎಂದೇ ಗುರುತಿಸಿಕೊಂಡಿದೆ.
Karnataka News Live 1 March 2026 ಕೈಗಾ ಅಣುಸ್ಥಾವರ - ಅಣು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮ ನಿರ್ಭರತೆ - ಡಾ.ಅಜಿತ್ ಕುಮಾರ್ ಮೊಹಂತಿ
ಕಾರವಾರದ ಕೈಗಾದಲ್ಲಿ 5 ಮತ್ತು 6ನೇ ಅಣುವಿದ್ಯುತ್ ಘಟಕಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದು ದೇಶದ ಅಣುಶಕ್ತಿ ತಂತ್ರಜ್ಞಾನದಲ್ಲಿನ ಸಂಪೂರ್ಣ ಆತ್ಮನಿರ್ಭರತೆಯನ್ನು ಸಾರುತ್ತದೆ. ಈ ಹೊಸ ಘಟಕಗಳು ತಲಾ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.
Karnataka News Live 1 March 2026 ಬೆಂಗಳೂರು–ಅಶೋಕಪುರಂ ಮೆಮು ರೈಲು ವಿಳಂಬ, ಬಿಡದಿಯಲ್ಲಿ ಪ್ರಯಾಣಿಕರ ಪ್ರತಿಭಟನೆ, ಲಘು ಲಾಠಿ ಚಾರ್ಜ್!
ಬೆಂಗಳೂರು–ಅಶೋಕಪುರಂ ಮೆಮು ರೈಲು ತಾಂತ್ರಿಕ ದೋಷದಿಂದ ಸುಮಾರು ಒಂದೂವರೆ ಗಂಟೆ ವಿಳಂಬವಾದ ಹಿನ್ನೆಲೆಯಲ್ಲಿ, ಬಿಡದಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.
Karnataka News Live 1 March 2026 ಯುದ್ಧಭೀತಿ ಹಿನ್ನೆಲೆ - ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ಕೂಗು! ಸಹಾಯವಾಣಿ ತೆರೆದ ಜಿಲ್ಲಾಡಳಿತ
ಇಸ್ರೇಲ್-ಇರಾನ್ ಯುದ್ಧ ಭೀತಿಯಿಂದಾಗಿ ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ನೂರಾರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಪ್ರವಾಸಿಗರು, ಉದ್ಯೋಗಿಗಳು ಮತ್ತು ವಯೋವೃದ್ಧರು ತೀವ್ರ ಸಂಕಷ್ಟದಲ್ಲಿದ್ದು, ಅವರ ನೆರವಿಗಾಗಿ ಜಿಲ್ಲಾಡಳಿತಗಳು ಸಹಾಯವಾಣಿಗಳನ್ನು ಸ್ಥಾಪಿಸಿವೆ.
Karnataka News Live 1 March 2026 Dog Satish ಮಗನಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ? 1 ಕೋಟಿಗೆ ಆಫರ್; ಏನಿದು ಬಿಸಿಬಿಸಿ ಸುದ್ದಿ?
ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರ ಮಗ ಹರ್ಷ್ ಅವರನ್ನು ನಾಯಕನನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹರ್ಷ್‌ಗೆ ನಾಯಕಿಯಾಗಿ ನಟಿ ರಚಿತಾ ರಾಮ್‌ಗೆ ಒಂದು ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Karnataka News Live 1 March 2026 ರಾಮನಗರದಲ್ಲಿ ಮಾರ್ಚ್5 ರಂದು ಉದ್ಯೋಗ ಮೇಳ, ಬರೋಬ್ಬರಿ 171 ಕಂಪೆನಿಗಳು ಭಾಗಿ, ನೀವು ಸಿದ್ಧರಿದ್ದೀರಾ?
ರಾಮನಗರದಲ್ಲಿ ಮಾರ್ಚ್ 5 ರಂದು ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ 171ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ.
Karnataka News Live 1 March 2026 ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳಿ - ಹಂತ ಹಂತದ ಮಾಹಿತಿ ಇಲ್ಲಿದೆ
Karnataka News Live 1 March 2026 ಬೀದರ್ - ಶೀಲ ಶಂಕಿಸಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ, ರಾತ್ರಿ ಇಡೀ ಜಗಳವಾಡಿ ಬೆಳಗ್ಗೆ ಕಲ್ಲು ಎತ್ತಿ ಹಾಕಿ ಕೊಂದ!
Karnataka News Live 1 March 2026 ಎಂಗೇಜ್ಮೆಂಟ್ ಬೆನ್ನಲ್ಲೇ ಭಾರ್ಗವಿ- ಜೈದೇವ್ ಹೋಟೆಲ್ ಸುತ್ತಾಟ - ರಾಧಾ-ರಾಣವ್ ಫೋಟೋ ವೈರಲ್
'ಅಮೃತಧಾರೆ' ಸೀರಿಯಲ್‌ನಲ್ಲಿ ಮಲ್ಲಿ ಮತ್ತು ಜೈದೇವ್ ಪಾತ್ರಧಾರಿಗಳಾಗಿದ್ದ ರಾಧಾ ಭಗವತಿ ಮತ್ತು ರಾಣವ್ ಗೌಡ ಇದೀಗ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಒಂದಾಗಿದ್ದು, ಅವರ ನಿಶ್ಚಿತಾರ್ಥದ ನಂತರದ ಕ್ಷಣಗಳು ಮತ್ತು ವೃತ್ತಿಜೀವನದ ಬಗ್ಗೆ ಈ ಲೇಖನ ವಿವರಿಸುತ್ತದೆ.
Karnataka News Live 1 March 2026 ಹುಸಿಮುನಿಸು, ಪ್ರೀತಿ, ಕೋಳಿ ಜಗಳ; ಮದುವೆಯಾದ್ಮೇಲೆ ವಿಡಿಯೋ ಶೇರ್ ಮಾಡಿದ ನಟಿ ರಶ್ಮಿಕಾ ಮಂದಣ್ಣ
Actress Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮದುವೆಯಾಗಿ, ಖುಷಿ ಅಲೆಯಲ್ಲಿ ತೇಲುತ್ತಿದ್ದಾರೆ. ಕುಟುಂಬಸ್ಥರ ಸಾಕ್ಷಿಯಾಗಿ, ಸ್ನೇಹಿತರು, ಆಪ್ತರ ಮುಂದೆ ಉದಯಪುರದಲ್ಲಿ ಗ್ರ್ಯಾಂಡ್ ಆಗಿ ಮದುವೆಯಾದ ಜೋಡಿ ತಿರುಮಲ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.
Karnataka News Live 1 March 2026 ಇವ್ರ ಎದುರು ಡೈಲಾಗೇ ಮರೆತುಹೋಗತ್ತೆ ಎಂದ ಸುನಿ - ಅಕ್ಕ-ತಮ್ಮ, ಆಂಟಿ ಲವರ್ ಕಮೆಂಟ್ಸ್ಗೆ ಹೇಳಿದ್ದೇನು?
Karnataka News Live 1 March 2026 ಇರಾನ್-ಇಸ್ರೇಲ್ ಯುದ್ಧದ ಭೀತಿ ಮಧ್ಯೆ ದುಬೈನಲ್ಲಿದ್ದೇ ಪರಿಸ್ಥಿತಿ ವಿವರಿಸಿದ ನಟಿ ದೀಪಿಕಾ ದಾಸ್!
ಇರಾನ್ ಇಸ್ರೇಲ್ ಯುದ್ಧದ ನಡುವೆ ಕೆಲವರು ದುಬೈ, ಕತಾರ್‌ನಲ್ಲಿದ್ದಾರೆ. ಅಲ್ಲಿಂದ ಭಾರತಕ್ಕೆ ಬರಲು ಕೆಲ ಕನ್ನಡಿಗರು ಒದ್ದಾಡುತ್ತಿದ್ದಾರೆ. ಹಾಗೆ ದೀಪಿಕಾ ದಾಸ್ ಕೂಡ ದುಬೈನಲ್ಲಿದ್ದಾರೆ. ಈಗ ಅಲ್ಲಿನ ಪರಿಸ್ಥಿತಿ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
Karnataka News Live 1 March 2026 ಹಾವೇರಿ - ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ, ದೇವರ ದರ್ಶನ ಪಡೆದ ನವಜೋಡಿ ಮನೆ ಸೇರಲೇ ಇಲ್ಲ!
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು, ಇತ್ತೀಚೆಗೆ ವಿವಾಹವಾದ ನವ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
Karnataka News Live 1 March 2026 ಅಟ್ಯಾಚ್‌ಮೆಂಟ್‌ನಲ್ಲಿ ನಂಬಿಕೆಯಿಲ್ಲ, ಒಬ್ನೇ ಇರೋಕೆ ಖುಷಿ - ರಶ್ಮಿಕಾ ಮದುವೆ ಬಳಿಕ ರಕ್ಷಿತ್ ಶೆಟ್ಟಿ Interview
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆದರು. ಈ ಹಿಂದೆ ರಶ್ಮಿಕಾ ಜೊತೆ ಎಂಗೇಜ್ ಆಗಿದ್ದ ರಕ್ಷಿತ್ ಶೆಟ್ಟಿ ಅವರು ಕೆಲ ಸಮಯದಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ. 3 ವರ್ಷಗಳ ಬಳಿಕ ಕನ್ನಡ ಪ್ರಭ ಪತ್ರಿಕೆಗೆ ಸಂದರ್ಶನ ನೀಡಿದ್ದರು. ರಶ್ಮಿಕಾ ಮದುವೆ ಬಳಿಕ ರಕ್ಷಿತ್ ಅವರು ಸಂದರ್ಶನ ನೀಡಿದ್ದಾರೆ.
Karnataka News Live 1 March 2026 Iran Israel War - ವಿಮಾನವಿಲ್ಲ, ದುಬೈನಲ್ಲಿ ಸಿಲುಕಿಕೊಂಡಿರೋ ಕನ್ನಡ ಸೆಲೆಬ್ರಿಟಿಗಳಿವರು!
Iran Israel Conflict: ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮ ಬೇರೆ ದೇಶದ ಮೇಲೆ ಕೂಡ ಆಗಿದೆ. ಇನ್ನೊಂದು ಕಡೆ ಪಾಕಿಸ್ತಾನ್-ತಾಲಿಬಾನ್ ನಡುವೆ ಕೂಡ ಉದ್ವಿಘ್ನ ವಾತಾವರಣ ಶುರುವಾಗಿದೆ. ಅಂದಹಾಗೆ ಕನ್ನಡದ ಸೆಲೆಬ್ರಿಟಿಗಳು ದುಬೈನಲ್ಲಿದ್ದು, ಅಲ್ಲಿಂದ ಭಾರತಕ್ಕೆ ಬರಲು ಒದ್ದಾಡುತ್ತಿದ್ದಾರೆ.
Karnataka News Live 1 March 2026 ಇರಾನ್-ಇಸ್ರೇಲ್ ಯುದ್ಧ - ಭಾರತಕ್ಕೆ ರಫ್ತು, ಆಮದು ಆಗುವ ವಸ್ತುಗಳೇನು? ನಮ್ಮಲ್ಲಿ ಬೆಲೆ ಏರಿಕೆ ಆಗುತ್ತಾ?
ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಇದರ ಜೊತೆಗೆ ಬೇರೆ ರಾಷ್ಟ್ರಗಳು ಕೂಡ ಇಲ್ಲಿ ಮೂಗು ತೂರಿಸುತ್ತಿವೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ಏನು ಪರಿಣಾಮ ಬೀರಲಿದೆ ಇರಾನ್‌ನೊಂದಿಗೆ ಭಾರತದ ಸಂಬಂಧ ಹೇಗಿದೆ? ಏನೆಲ್ಲ ಪದಾರ್ಥ, ವಸ್ತುಗಳು ಆಮದು, ರಫ್ತು ಆಗುತ್ತವೆ?
Karnataka News Live 1 March 2026 Bigg Boss ಗೆಲುವಿನ ಬಳಿಕ ರಕ್ಷಿತಾ ಶೆಟ್ಟಿ ಕನಸಿನ ಹುಡುಗನ ಆಯ್ಕೆ ಬದಲಾಯ್ತು! ಪುಟ್ಟಿ ಮಾತಿಗೆ ಫ್ಯಾನ್ಸ್ ಅಚ್ಚರಿ
ಬಿಗ್‌ಬಾಸ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮಗೆ ಬೇಕಾದ ಹುಡುಗನ ಬಗ್ಗೆ ಮಾತನಾಡಿದ್ದಾರೆ. Bigg Boss ಮನೆಯಲ್ಲಿ ಇರುವಾಗ ತಮ್ಮ ಕನಸಿನ ಹುಡುಗ ರೈತನಾಗಿರಬೇಕು ಇತ್ಯಾದಿಯಾಗಿ ಹೇಳಿದ್ದರು. ಇದೀಗ ರನ್ನರ್ ಅಪ್ ಆಗಿ ಗೆಲುವು ಸಾಧಿಸಿದ ಬಳಿ ಮಂಗಳೂರು ಪುಟ್ಟಿ ಹೇಳಿದ್ದೇನು?
Karnataka News Live 1 March 2026 ಪಾಕಿಸ್ತಾನ-ತಾಲಿಬಾನ್ ಸಂಘರ್ಷ; ಆಟ ಶುರು ಮಾಡಿದ ಅಮೆರಿಕದ ಡೊನಾಲ್ಡ್ ಟ್ರಂಪ್; ಭಾರತಕ್ಕೆ ಸಮಸ್ಯೆ?
Pakistan Taliban Conflict; ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನದ ಸ್ವರಕ್ಷಣೆ ಹಕ್ಕನ್ನು ಅಮೆರಿಕ ಬೆಂಬಲಿಸಿದೆ. ಯುರೋಪಿಯನ್ ಯೂನಿಯನ್ ಸಂಘರ್ಷ ಕಡಿಮೆ ಮಾಡುವಂತೆ ಒತ್ತಾಯಿಸಿದೆ. ಈ ಮಧ್ಯೆ, ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬ ತಾಲಿಬಾನ್ ವಾದವನ್ನು ಪಾಕಿಸ್ತಾನ ತಳ್ಳಿಹಾಕಿದೆ.