- Home
- Entertainment
- TV Talk
- Amruthadhaare Serial: ಶಾಶ್ವತವಾಗಿ ಭೂಮಿ-ಗೌತಮ್‌ನನ್ನು ದೂರ ಮಾಡಿದ್ನಾ JD ಅಲ್ಲ ಕೇಡಿ ಜಯದೇವ್?
Amruthadhaare Serial: ಶಾಶ್ವತವಾಗಿ ಭೂಮಿ-ಗೌತಮ್‌ನನ್ನು ದೂರ ಮಾಡಿದ್ನಾ JD ಅಲ್ಲ ಕೇಡಿ ಜಯದೇವ್?
ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಈಗ ಮತ್ತೊಮ್ಮೆ ತನ್ನ ಕೇಡಿ ಬುದ್ಧಿ ಪ್ರದರ್ಶನ ಮಾಡಿದ್ದಾನೆ. ಅಜ್ಜಿ ಅವಳ ಆಸ್ತಿಯನ್ನು ಗೌತಮ್‌ಗೆ ಬರೆದಮೇಲೆ ಅವನಿಗೆ ಆಕಾಶ್ ಎಂಬ ಅಸ್ತ್ರ ಸಿಕ್ಕಿದೆ. ಮೋಸದಿಂದ ಅವನು ಆಕಾಶ್‌ನನ್ನು ಮನೆಗೆ ಕರೆದುಕೊಂಡು ಬಂದು, ಇನ್ನಷ್ಟು ಆಸ್ತಿ ಕಬಳಿಸುವ ಪ್ಲ್ಯಾನ್ ಮಾಡಿದ್ದಾನೆ.

ಗೌತಮ್‌ನನ್ನು ಸೇರುವ ಆಸೆ ಇತ್ತು
ಗೌತಮ್ ತನ್ನ ಜೊತೆಗಿದ್ದರೆ ನಾನು ಖುಷಿಯಾಗಿರ್ತೀನಿ, ಅವರು ಖುಷಿಯಾಗಿರ್ತಾರೆ ಎಂದು ಭೂಮಿಕಾಗೆ ಅರ್ಥ ಆಗಿದೆ. ಅಜ್ಜಿ, ಅತ್ತೆ, ಆನಂದ್, ಅಪರ್ಣಾ ಕೂಡ ತಮ್ಮಿಬ್ಬರನ್ನು ಜೊತೆಯಾಗಿ ನೋಡಲು ಬಯಸ್ತಾಳೆ ಎನ್ನೋದು ಅವಳಿಗೆ ಅರ್ಥ ಆಗಿದೆ. ಹೀಗಾಗಿ ಅವಳು ಗೌತಮ್‌ನನ್ನು ಸೇರುವ ಆಲೋಚನೆ ಮಾಡಿದ್ದಳು. ಸಂಜೆ ಗೌತಮ್ ಜೊತೆ ಪರ್ಸನಲ್ ಆಗಿ ಮಾತಾಡಿ ಒಂದಾಗಿ ಬದುಕಲು ನೋಡಿದ್ದಳು.
ಮಲ್ಲಿಗೆ ಅಪಾಯದ ಎಚ್ಚರವಿತ್ತು
ಅದೇ ಟೈಮ್‌ಗೆ ಸರಿಯಾಗಿ ಜಯದೇವ್, ಗೌತಮ್ ದಿವಾನ್‌ರನ್ನು ಕಿಡ್ನ್ಯಾಪ್ ಮಾಡಿಸಿದ್ದಾನೆ. ಇದು ಭೂಮಿಕಾಗೆ ಗೊತ್ತಾಗಿದೆ. ತುಂಬ ದಿನಗಳಿಂದ ಜಯದೇವ್ ನಮ್ಮನ್ನು ಹುಡುಕಾಡುತ್ತಿದ್ದಾನೆ, ಇದು ಕೂಡ ಮಲ್ಲಿಗೆ ಗೊತ್ತಿತ್ತು. ಭೂಮಿಗೆ ಈ ವಿಷಯ ಗೊತ್ತಾದರೆ ಬೇಸರ ಆಗುತ್ತದೆ ಎಂದು ಅವಳು ಕೂಡ ಸುಮ್ಮನೆ ಇದ್ದಳು. ಅಪಾಯ ಬಂದಿದೆ ಎಂದು ಗೊತ್ತಿದರೂ ಕೂಡ ಅದನ್ನು ಲೈಟ್ ಆಗಿ ತಗೊಂಡಿದ್ದು ಸರಿ ಅಲ್ಲ ಎಂದು ಭೂಮಿ, ಮಲ್ಲಿಗೆ ವಾರ್ನ್ ಮಾಡಿದ್ದಾಳೆ.
ಆಕಾಶ್‌ಗೆ ಮನೆ ಸತ್ಯ ಗೊತ್ತಾಯ್ತು
ತನ್ನ ಮನೆಗೆ ಬಂದ ಆಕಾಶ್ ಬಳಿ ಜಯದೇವ್ ಒಂದಿಷ್ಟು ಸತ್ಯವನ್ನು ಹೇಳಿದ್ದಾನೆ. “ಇದು ನಿನ್ನ ಮನೆ, ನಿನ್ನ ಅಪ್ಪ ಗೌತಮ್ ದಿವಾನ್ ಮನೆ, ಒಂದಷ್ಟು ವರ್ಷಗಳ ಹಿಂದೆ ನಾನು ಈ ಮನೆಯನ್ನು ನಿನ್ನ ಅಪ್ಪನಿಂದ ಕಿತ್ತುಕೊಂಡಿದ್ದೇನೆ” ಎಂದೆಲ್ಲ ಹೇಳಿದ್ದಾನೆ. ಅದನ್ನು ಕೇಳಿ ಆಕಾಶ್‌ಗೆ ಭಯ ಶುರುವಾಗಿದೆ. ತನ್ನ ಚಿಕ್ಕಿಯನ್ನು ಜಯದೇವ್ ಕಿಡ್ನ್ಯಾಪ್ ಮಾಡಿದ್ದಾನೆ, ಅವಳನ್ನು ಕರೆದುಕೊಂಡು ಹೋಗಬೇಕು ಎನ್ನೋದು ಆಕಾಶ್ ತಲೆಯಲ್ಲಿತ್ತು. ಆದರೆ ಅಸಲಿಗೆ ಮಲ್ಲಿ ಕಿಡ್ನ್ಯಾಪ್ ಆಗಿರಲಿಲ್ಲ, ವಠಾರದಲ್ಲಿದ್ದಳು.
ಜಯದೇವ್ ಎದುರು ಭೂಮಿ ಮಾತಾಡ್ತಾಳಾ?
ಭೂಮಿ ಜೊತೆ ಜಯದೇವ್ ಮಾತನಾಡಿ, ಅವಳನ್ನು ಮನೆಗೆ ಕರೆಸಿಕೊಂಡಿದ್ದಾನೆ. ಗೌತಮ್ ಹೆಸರಿನಲ್ಲಿರುವ ಆಸ್ತಿಯಲ್ಲಿ ತನಗೆ ಬಿಡಿಗಾಸು ಬೇಡ ಎಂದು ಭೂಮಿ ವಿಲ್ ಬರೆದುಕೊಡಬಹುದು. ಆಗ ಜಯದೇವ್ ಸುಮ್ಮನಾದರೂ ಸುಮ್ಮನಾಗಬಹುದು. ಇಷ್ಟುದಿನ ಭಯದಲ್ಲಿ ಹೆದರಿ ಒಂಟಿಯಾಗಿ ಬದುಕುತ್ತಿದ್ದ ಭೂಮಿ, ಈಗ ಜಯದೇವ್ ಎದುರು ನಿಂತು ಮಾತನಾಡುತ್ತಾಳಾ ಎಂದು ಕಾದು ನೋಡಬೇಕಿದೆ.
ಜಯದೇವ್, ಗೌತಮ್ ಮುಖಾಮುಖಿ ಆಗ್ತಾರಾ?
ಮಗನನ್ನು ಜಯದೇವ್ ಕಿಡ್ನ್ಯಾಪ್ ಮಾಡಿರುವ ವಿಚಾರ ಏನಾದರೂ ಗೌತಮ್‌ಗೆ ಗೊತ್ತಾದರೆ, ಅವನು ತನ್ನ ಮನೆಗೆ ಬಂದು ಜಯದೇವ್‌ಗೆ ಬುದ್ಧಿ ಕಲಿಸಿದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಜಯದೇವ್ ಹಾಗೂ ಗೌತಮ್ ಇಷ್ಟುಬೇಗ ಮುಖಾಮುಖಿ ಆಗುವುದು ಡೌಟ್ ಎನ್ನಬಹುದು.
ಗೌತಮ್-ಭೂಮಿ ಇನ್ನಷ್ಟು ದೂರ?
ಗೌತಮ್ ಜೊತೆಗೆ ಇದ್ದರೆ ನಾನು ನನ್ನ ಮಗನನ್ನು, ನನ್ನವರನ್ನು ಕಳೆದುಕೊಳ್ಳಬೇಕಾಗಿ ಬರಬಹುದು ಎಂಬ ಭಯದಲ್ಲಿ ಭೂಮಿ ಅವನನ್ನು ಸೇರುವ ಬದಲು, ಅವನಿಂದ ಇನ್ನಷ್ಟು ದೂರ ಆಗುವ ಆಲೋಚನೆ ಮಾಡಿದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಗೌತಮ್-ಭೂಮಿಕಾ ಇನ್ನಷ್ಟು ದೂರ ಆಗುವ ಸಾಧ್ಯತೆ ಹೆಚ್ಚು ಕಾಣ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

