- Home
- Karnataka Districts
- Mysuru
- ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ
ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ
ಮೈಸೂರಿನಲ್ಲಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ಇದೇ ವೇಳೆ ಮೃತ ವ್ಯಾಪಾರಿ ಸಲೀಂ ಮೇಲೆ ಅನುಮಾನಗಳು ಹೆಚ್ಚುತ್ತಿದೆ. ಇದಕ್ಕೆ ಕೆಲ ಕಾರಣಗಳು ಇವೆ.

ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ನಿನ್ನೆ (ಡಿ.25) ಕ್ರಿಸ್ಮಸ್ ಹಬ್ಬದ ದಿನ ಸಂಭವಿಸಿದ ಬಲೂನ್ ವ್ಯಾಪಾರಿಯ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಸಾವಿನ ಬೆನ್ನಲ್ಲೇ ಬೆಂಗಳೂರಿನ ನಿವಾಸಿ ಲಕ್ಷ್ಮಿ ಕೂಡ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಲಕಾರಿಯಾಗಿ ಲಕ್ಷ್ಮಿ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೈಸೂರು ಪ್ರವಾಸಕ್ಕೆ ಬಂದಿದ್ದ ಲಕ್ಷ್ಮಿ
ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಲಕ್ಷ್ಮಿ ಕ್ರಿಸ್ಮಸ್ ಹಬ್ಬದ ಕಾರಣ ಕುಟುಂಬ ಸಮೇತ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಬಲೂನ್‌ಗೆ ಹೀಲಿಯಂ ತುಂಬಿಸುತ್ತಿದ್ದ ವೇಳೆ ವ್ಯಾಪಾರಿ ಬಳಿ ಇದ್ದ ಸಿಲಿಂಡರ್ ಸ್ಫೋಟಗೊಂಡು ದುರ್ಘಟನ ನಡೆದಿತ್ತು. ಈ ಘಟನೆಯಲ್ಲಿ ಲಕ್ಷ್ಮಿ ತೀವ್ರವಾಗಿ ಗಾಯಗೊಂಡಿದ್ದರು.
ಮೃತ ವ್ಯಾಪಾರಿ ಸಲೀಂ ಮೇಲೆ ಅನುಮಾನ
ಕ್ರಿಸ್ಮಸ್ ರಜೆ ಸಂದರ್ಭದಲ್ಲಿ ನಡೆದಿರುವ ಈ ಸ್ಪೋಟ ಉದ್ದೇಶಪೂರ್ವಕ ಸ್ಫೋಟಕ್ಕೆ ಸಂಚು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಸಲೀಂ 15 ದಿನಗಳ ಹಿಂದೆ ಉತ್ತರ ಪ್ರದೇಶದಿಂದ ಮೈಸೂರಿಗೆ ಬಂದಿದ್ದ. ಆತನ ಸಹೋದದರು, ಸ್ನೇಹಿತರ ಜೊತೆಗೆ ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ಸಲೀಂ ಉಳಿದುಕೊಂಡಿದ್ದ. ಒಂದು ವಾರದಿಂದಲೂ ಅರಮನೆ ಸುತ್ತಮುತ್ತ ಹೀಲಿಯಂ ಗ್ಯಾಸ್ ತುಂಬಿಸಿ ಬಲೂನ್ ಮಾರುತ್ತಿದ್ದ. ಆದರೆ ನಿನ್ನೆ ಜಯ ಮಾರ್ತಾಂಡ ದ್ವಾರದ ಬಳಿ ಆತ ಬಂದಿದ್ದು, ಬರುತ್ತಿದ್ದಂತೆ ಸಿಲಿಂಡರ್ ಸ್ಪೋಟಗೊಂಡಿದೆ. ಮತ್ತೊಂದೆಡೆ ನಿತ್ಯ ಮೂರು ಜನ ಒಟ್ಟಿಗೆ ಬಲೂನ್ ಮಾರಾಟ ಮಾಡಲು ಬರುತ್ತಿದ್ದವರು, ಗುರುವಾರ ಮಾತ್ರ ಒಬ್ಬನೇ ಬಂದಿರೋದು ಕೂಡ ಹಲವು ಅನುಮಾನ ಹುಟ್ಟುಹಾಕಿದೆ. ಈಗಾಗಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಎನ್.ಐ.ಎ ತನಿಖೆ ನಢಸುವ ಸಾಧ್ಯತೆಗಳು ಹೆಚ್ಚಿದೆ.
ಮೃತ ಸಲೀಂ ವಿರುದ್ಧ ಎಫ್ಐಅರ್
ಹೀಲಿಯಂ ಸಿಲಿಂರ್ ಸ್ಫೋಟ ಪ್ರಕರಣದಲ್ಲಿ ಮೃತ ವ್ಯಾಪಾರಿ ಸಲೀಂ ವಿರುದ್ದ ಎಫ್ಐಎರ್ ದಾಖಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.ಮೃತ ವ್ಯಾಪಾರಿ ಸಲೀಂ ಅರಮನೆಯೊಳಗೆ ಹೋಗಿ ಫೋಟೊ ತೆಗೆಸಿಕೊಂಡಿದ್ದಾನೆ. ವ್ಯಾಪಾರದ ನಡುವೆ ಅರಮನೆಯೊಳಗೆ ಸಲೀಂ ಯಾವಗ ಹೋದ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.
ಮೃತ ಸಲೀಂ ವಿರುದ್ಧ ಎಫ್ಐಅರ್
ಸಲೀಂ ಹಿನ್ನಲೆ ತನಿಖೆ
ಸಲೀಂ ಕೇವಲ ಬಲೂನ್ ಮಾರಾಟ ಮಾಡುತಿದ್ನ ಅಥವಾ ಬೇರೆ ಯಾವ ಕೆಲಸ ಮಾಡುತ್ತಿದ್ದ ಎಂಬ ತನಿಖೆ ನಡೆಯುತ್ತಿದೆ. ನಿನ್ನೆಯೇ ಮೊದಲ ಬಾರಿಗೆ ಅರಮನೆಯ ಬಳಿ ಬಂದು ಬಲೂನ್ ಮಾರಾಟ ಮಾಡುತ್ತಿದ್ದ . ಆದರೆ ಸ್ಪೋಟಕ್ಕೆ ಅರ್ಥ ಗಂಟೆ ಮುಂಚೆ ಅರಮನೆ ಬಳಿ ಬಂದಿದ್ದ . ಜಯಮಾರ್ತಾಂಡ ಗೇಟ್ ಬಳಿ ಬಂದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ.

