08:50 AM (IST) Oct 26

Karnataka News Live 26 October 2026 ದಸರಾ ರಜೇಲಿ ಕುಂಚಗಳ ಮೂಲಕವೇ ಶಾಲೆಯ ಮೆರುಗು ಹೆಚ್ಚಿಸುವ ಶಿಕ್ಷಕ ಪರಶುರಾಮ ನಗನೂರು

ಲಿಂಗಸುಗೂರಿನ ಅಡವಿಬಾವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಪರಶುರಾಮ ನಗನೂರು ಅವರು ದಸರಾ ರಜೆಯಲ್ಲಿ ಸ್ವಂತ ಖರ್ಚಿನಲ್ಲಿ ಶಾಲೆಯ ಗೋಡೆಗಳಿಗೆ ಆಕರ್ಷಕ ಚಿತ್ರಗಳನ್ನು ಬಿಡಿಸಿದ್ದಾರೆ. ಇವರ ಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಶಾಲೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದೆ.
Read Full Story
08:32 AM (IST) Oct 26

Karnataka News Live 26 October 2026 ನನ್ನನ್ನು ಮಂತ್ರಿ ಮಾಡುವಷ್ಟು ತಾಕತ್ತು, ಯೋಗ್ಯತೆ ನಿನಗೆ ಇದೆಯಾ? MP ರೇಣುಕಾಚಾರ್ಯ

ದಾವಣಗೆರೆಯಲ್ಲಿ ಸ್ವಪಕ್ಷದ ಶಾಸಕ ಬಿ.ಪಿ. ಹರೀಶ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬ್ಲ್ಯಾಕ್‌ಮೇಲ್, ಹೊಂದಾಣಿಕೆ ರಾಜಕೀಯದ ಆರೋಪಗಳ ಜೊತೆಗೆ ಸಚಿವ ಮಲ್ಲಿಕಾರ್ಜುನ್ ಭೇಟಿಯ ಹಿಂದಿನ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಸ್ಟಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮತ್ತು ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ.
Read Full Story
08:19 AM (IST) Oct 26

Karnataka News Live 26 October 2026 Fetus in Fetu - 2 ತಿಂಗಳ ಮಗುವಿನ ಹೊಟ್ಟೇಲಿ ಮತ್ತೊಂದು ಭ್ರೂಣ - ರಾಜ್ಯದ 3ನೇ ಕೇಸ್

A Rare Medical Case in Karnataka: ಸಿಂಧನೂರಿನ ಸಹನಾ ಆಸ್ಪತ್ರೆಗೆ ದಾಖಲಾದ 2 ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆ ನಡೆದಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು 'ಫೀಟಸ್ ಇನ್ ಫೀಟು' ಎನ್ನಲಿದ್ದು, ಇದು ಕರ್ನಾಟಕದ 3ನೇ ಪ್ರಕರಣವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Read Full Story
07:45 AM (IST) Oct 26

Karnataka News Live 26 October 2026 Tumakuru - 5 ಲಕ್ಷ ಸಾಲಕ್ಕೆ 4 ಕೋಟಿ ಜಮೀನು ಹರಾಜು - ಬ್ಯಾಂಕೆದುರು ರೈತರಿಂದ ಹೋರಾಟ

5 ಲಕ್ಷ ರೂ. ಸಾಲಕ್ಕಾಗಿ ದಲಿತ ರೈತನ 4 ಕೋಟಿ ರೂ. ಬೆಲೆಯ ಜಮೀನನ್ನು ಕರ್ಣಾಟಕ ಬ್ಯಾಂಕ್ ಅಕ್ರಮವಾಗಿ ಹರಾಜು ಮಾಡಿದೆ. ಇದನ್ನು ಖಂಡಿಸಿ ನವೆಂಬರ್ 2ರಂದು ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತನಿಗೆ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘ ಎಚ್ಚರಿಸಿದೆ.

Read Full Story
07:34 AM (IST) Oct 26

Karnataka News Live 26 October 2026 KRS Dam water level - ಕಾವೇರಿ ಒಡಲಲ್ಲಿ ದಿಢೀರ್ ಬದಲಾವಣೆ - ಕೊಂಚ ದೂರವಾಯ್ತು ಆತಂಕ

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯದ ಒಳಹರಿವು ದಿಢೀರ್ ಹೆಚ್ಚಳವಾಗಿದೆ. ಇದರಿಂದಾಗಿ ಅಣೆಕಟ್ಟೆಯ ನೀರಿನ ಮಟ್ಟ ಮೂರು ಅಡಿಗಳಷ್ಟು ಏರಿಕೆ ಕಂಡಿದ್ದು, 103.52 ಅಡಿಗೆ ತಲುಪಿದೆ. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ ಎದುರಾಗಿದ್ದ ಆತಂಕ ಸದ್ಯ ಕೊಂಚ ದೂರವಾಗಿದೆ.
Read Full Story
07:25 AM (IST) Oct 26

Karnataka News Live 26 October 2026 ಪರಿಶುದ್ಧ ಪರೀಕ್ಷಾ ವ್ಯವಸ್ಥೆಗಾಗಿ KPSCಗೆ ಹೊಸ ರೂಪ ಖಚಿತ - ಸಿಎಂ ಡಿಕೆ ಶಿವಕುಮಾರ್

ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹೊಸ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ ಚಾಮರಾಜನಗರದ ಮೂಢನಂಬಿಕೆಗಳನ್ನು ತಳ್ಳಿಹಾಕಿರುವ ಅವರು, ವಾಯವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಡುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.
Read Full Story
07:11 AM (IST) Oct 26

Karnataka News Live 26 October 2026 ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ - ಹಾರಂಗಿ ಜಲಾಶಯ ಮಟ್ಟ ಏರಿಕೆ, ರೈತರಲ್ಲಿ ಸಂತಸ

ವಾಯುಭಾರ ಕುಸಿತದಿಂದ ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದ ಬೇಸಿಗೆಯ ನೀರಿನ ಸಮಸ್ಯೆಯ ಆತಂಕದಲ್ಲಿದ್ದ ರೈತರು ಹಾಗೂ ಜನರಿಗೆ ನಿರಾಳತೆ ಸಿಕ್ಕಿದೆ. ಆದರೆ, ನಿರಂತರ ಮಳೆಯಿಂದಾಗಿ ಜಿಲ್ಲೆಯ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.
Read Full Story
06:57 AM (IST) Oct 26

Karnataka News Live 26 October 2026 ಮನ್‌ ಕಿ ಬಾತ್‌ನಲ್ಲಿ ಕಲಬುರಗಿ ತೊಗರಿ ಘಮ; ವಿದೇಶಕ್ಕೆ ರಫ್ತು, ಶೇ.30ಕ್ಕೂ ಅಧಿಕ ಲಾಭ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಕಲಬುರಗಿಯ ತೊಗರಿ ಬೇಳೆ ಮಾಲ್ಡೀವ್ಸ್‌ಗೆ ರಫ್ತಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಐ ಮಾನ್ಯತೆ ಪಡೆದ ಈ ತೊಗರಿ ಬೇಳೆಯ ಜಾಗತಿಕ ಬೇಡಿಕೆಯಿಂದಾಗಿ ರೈತರಿಗೆ ಶೇ.30ಕ್ಕೂ ಅಧಿಕ ಲಾಭ ದೊರೆಯುತ್ತಿದೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಗಗನಕ್ಕೇರಿದೆ.
Read Full Story
06:43 AM (IST) Oct 26

Karnataka News Live 26 October 2026 ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಸಾರಿಗೆ ಸಂಸ್ಥೆ - ಸಿಎಂ ಡಿಕೆ ಶಿವಕುಮಾರ್ ಘೋಷಣೆ

ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿತ್ತೂರು ಕೋಟೆ ಆವರಣದಲ್ಲಿ ₹40 ಕೋಟಿ ವೆಚ್ಚದ 'ಫ್ರೀಡಂ ಪಾರ್ಕ್' ನಿರ್ಮಾಣವನ್ನು ಘೋಷಿಸಿದ್ದಾರೆ. ಅಲ್ಲದೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 'ಕಿತ್ತೂರು ರಾಣಿ ಚೆನ್ನಮ್ಮ' ಹೆಸರನ್ನು ಮರುನಾಮಕರಣ ಮಾಡುವುದಾಗಿ ಮತ್ತು ₹520 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

Read Full Story
06:30 AM (IST) Oct 26

Karnataka News Live 26 October 2026 ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ₹ 215.37 ಕೋಟಿ ಅಭಿವೃದ್ಧಿ ಕಾಮಗಾರಿಗಳ ಕೊಡುಗೆ Belagavi

ಸವದತ್ತಿಯ ರೇಣುಕಾ ಯಲ್ಲಮ್ಮಾ ದೇವಸ್ಥಾನದಲ್ಲಿ ₹215.37 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಕ್ಟೋಬರ್ 26ರಂದು ಶಂಕುಸ್ಥಾಪನೆ ನೆರವೇರಲಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಸಚಿವರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.
Read Full Story
06:16 AM (IST) Oct 26

Karnataka News Live 26 October 2026 ಸ್ಟಿಂಗ್‌ ಕೇಸಿಗೆ ಹೊಸ ತಿರುವು; ಹೇಳಿಕೊಟ್ಟಿರೋದನ್ನು ಹೇಳಿದೆ ಅಷ್ಟೇ ಎಂದ ಮಹಿಳೆ!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ವಿಡಿಯೋದಲ್ಲಿದ್ದ ಮಹಿಳೆ ತನಗೆ ಸಿದ್ದರಾಮಯ್ಯ ಪರಿಚಯವಿಲ್ಲ ಹಾಗೂ ಹೇಳಿಕೊಟ್ಟಂತೆ ಮಾತನಾಡಿದ್ದೆ ಎಂದು ಸಿಸಿಬಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದು, ತನಗೆ ಸ್ಟಿಂಗ್ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.

Read Full Story
06:08 AM (IST) Oct 26

Karnataka News Live 26 October 2026 ಕಬ್ಬು ಬೆಳೆಗಾರರ ಜತೆ ಬೆಳಗಾವಿಯಲ್ಲಿ ಇಂದು ಡಿಕೆಶಿ ಮಹತ್ವದ ಸಭೆ; ವಿಫಲವಾದರೆ ನಾಳೆ ರಾಜ್ಯ ಬಂದ್‌?

ಪ್ರತಿ ಟನ್‌ ಕಬ್ಬಿಗೆ ₹5,500 ದರ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿಯಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಮಂಗಳವಾರ ಕರ್ನಾಟಕ ಬಂದ್ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
Read Full Story
05:50 AM (IST) Oct 26

Karnataka News Live 26 October 2026 ಪುಲಕೇಶಿನಗರ ಸ್ಫೋಟದ ರಹಸ್ಯ ಬಯಲು - ರಾಯಚೂರು To ಬೆಂಗಳೂರು, ಬಸ್‌ನಲ್ಲಿ IED ಸಾಗಾಟ

ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ನನ್ನು ಹತ್ಯೆ ಮಾಡಲು ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬಯಲಾಗಿದೆ.
Read Full Story
05:39 AM (IST) Oct 26

Karnataka News Live 26 October 2026 Bengaluru - ಉದ್ಘಾಟನೆಯಾದ 4 ತಿಂಗಳಲ್ಲೇ 631 ಕೋಟಿ ವೆಚ್ಚದ ಕೃಷ್ಣ ರಸ್ತೆ ಗುಂಡಿಮಯ

ಬಿಡಿಎ 631 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ ಎಸ್.ಎಂ. ಕೃಷ್ಣ ರಸ್ತೆಯು ಉದ್ಘಾಟನೆಯಾದ ಕೇವಲ ನಾಲ್ಕು ತಿಂಗಳಲ್ಲೇ ಗುಂಡಿ ಹಾಗೂ ತಗ್ಗುಗಳಿಂದ ಹಾಳಾಗಿದೆ. ಚಲ್ಲಘಟ್ಟ ಮೆಟ್ರೋ ಡಿಪೋ ಕೆಳಗಿನ ಸುರಂಗದಲ್ಲಿ ನೀರು ಸೋರಿಕೆಯಾಗುತ್ತಿದ್ದು, ರಸ್ತೆ ನಿರ್ವಹಣೆ ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆಯೂ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
Read Full Story