ಚೀನಾದ ಜನಪ್ರಿಯ ಕಾರು ಕಂಪನಿ ಚೆರಿ, ಸಿನ್ನಾಕ್ಸ್ ಬ್ರಾಂಡ್ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ. ಇದು ವಿಶ್ವದ ಮೊದಲ AI ಚಾಲಿತ ರೇಂಜ್-ಎಕ್ಸ್‌ಟೆಂಡೆಡ್ ಇಂಟೆಲಿಜೆಂಟ್ ಕ್ರೂಸರ್ ಬೈಕ್ ಅನ್ನು ಪರಿಚಯಿಸಿದ್ದು, ಇದು 200 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಎಂಜಿನ್ ಮೂಲಕ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಹೊಂದಿರುವ ಈ ಬೈಕ್‌ಗೆ ಚಾರ್ಜಿಂಗ್ ಸ್ಟೇಷನ್‌ಗಳ ಅಗತ್ಯವಿಲ್ಲ.
Chery Automobile Co. Ltd ಚೀನಾದ ಜನಪ್ರಿಯ ಕಂಪನಿ. ಕಾರು ಹಾಗೂ ಎಸ್‌ಯುವಿನಲ್ಲಿ ಸಂಚಲನ ಸೃಷ್ಟಿಸಿರುವ ಚೆರಿ ಈಗ, ದ್ವಿಚಕ್ರ ವಾಹನಗಳ ವಿಚಾರದಲ್ಲಿ ಅದೃಷ್ಟಕ್ಕೆ ಇಳಿದಿದೆ. ಎರಡು ವಿಶೇಷ ಮಾಡೆಲ್‌ಗಳನ್ನ ಬಿಡುಗಡೆ ಮಾಡಿದ್ದು, ಎಲೆಕ್ಟ್ರಿಕ್ ಬೈಕ್‌ಗಳ ಮೂಲಕ ದ್ವಿಚಕ್ರ ಮಾರುಕಟ್ಟೆಗೂ ಎಂಟ್ರಿ ಕೊಟ್ಟಿದೆ ಚೆರಿ.
ಚೆರಿ ಎಲೆಕ್ಟ್ರಿಕ್ ವಾಹನದ ವಿಶೇಷತೆ ಏನು ಅಂದ್ರೆ ಬ್ಯಾಟರಿ ಹಾಗೂ ಪೆಟ್ರೋಲ್ ಎಂಜಿನ್ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಎಲೆಕ್ಟ್ರಿಕ್ ಕ್ರೂಸರ್ ಆಗಿದೆ. ಪ್ರಸ್ತುತ ಕಂಪನಿಯು ತನ್ನ ಸಾಹಸಿ ಬೈಕ್ ಅನ್ನು ಪ್ರದರ್ಶನ ಮಾಡಿದೆ. ಇದು ಒಮ್ಮೆ ಚಾರ್ಜ್ ಮಾಡಿದ್ರೆ 200 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯ ಪ್ಲಾನ್ ಕೇವಲ ಸ್ಕೂಟರ್ ಮಾತ್ರ ಬಿಡುಗಡೆ ಮಾಡೋದಲ್ಲ. ಮುಂದಿನ ದಿನಗಳಲ್ಲಿ ಬೈಕ್‌ಗಳನ್ನೂ ಮಾರುಕಟ್ಟೆಗೆ ಪರಿಚಯಿಸುವ ಗುರಿ ಹೊಂದಿದೆ. ಚೀನಾದ ವುಹುನಲ್ಲಿ ಇತ್ತೀಚೆಗೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಚೆರಿ, ಸಿನ್ನಾಕ್ಸ್ ಬ್ರಾಂಡ್ ಅಡಿಯಲ್ಲಿ ಎರಡು ಹೊಸದಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣ ಮಾಡಿದೆ. ಅದರಲ್ಲಿ ಗೋ ಸಿ3 ಎಂಬ ಎಲೆಕ್ಟ್ರಿಕ್ ಕ್ರೋಸರ್ ಮತ್ತು ಅಡ್ವೆಂಚರ್ ವಿನ್ಯಾಸ ಹೊಂದಿರುವ ಸ್ಕೂಟರ್ ಕೂಡ ಸೇರಿದೆ.
AI ಚಾಲಿತ ಬೈಕ್
ಇನ್ನೊಂದು ವಿಶೇಷ ಅಂದ್ರೆ ಇದು ಎಐ ಚಾಲಿತ ಬೈಕ್ ಆಗಿದೆ. ಅಂದರೆ ವಿಶ್ವದ ಮೊದಲ ಎಐ ಚಾಲಿತ ರೇಂಜ್-ಎಕ್ಸ್‌ಟೆಂಡೆಡ್ ಇಂಟೆಲಿಜೆಂಟ್ ಕ್ರೂಸರ್ ಎಂದು ಕರೆಯುತ್ತಿದೆ. ಈ ಬಗ್ಗೆ ಸ್ವತಃ ಕಂಪನಿಯೇ ಹೇಳಿಕೆ ನೀಡಿದೆ. EREV ತಂತ್ರಜ್ಞಾನ ಬಳಸಲಾಗಿದೆ. ವಿದ್ಯುತ್ ಮೋಟಾರ್ ಚಕ್ರಗಳಿಗೆ ಶಕ್ತಿಯನ್ನ ನೀಡುತ್ತದೆ. ಇನ್ನು ಪೆಟ್ರೋಲ್ ಎಂಜಿನ್‌ನನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ. ಅಂದರೆ ಈ ಬ್ಯಾಟರಿಯು ಬೈಕ್‌ನಿಂದಲೇ ಉತ್ಪಾದಿಸಲ್ಪಡುವ ವಿದ್ಯುತ್ ಚಾಲಿತವಾಗಿದೆ. ಇದರಿಂದ ದೂರ ಪ್ರಯಾಣಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನ ಅವಲಂಬಿಸುವ ಅಗತ್ಯ ಇಲ್ಲ ಎಂದು ಕಂಪನಿ ಹೇಳಿದೆ.







