10:52 PM (IST) Jun 17

Karnataka News Live 17 June 2026RSS ಬಿಟ್ಟು ಪ್ರಿಯಾಂಕ್‌ ಖರ್ಗೆ ಖಾತೆ ನಿರ್ವಹಿಸಲಿ - ಸಂಸದ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ

RSS: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವನ್ನು ಬಿಟ್ಟು, ಕೊಟ್ಟಿರುವ ಗೃಹ ಖಾತೆಯನ್ನು ಸಮರ್ಥವಾಗಿ ನಡೆಸಿದರೆ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Read Full Story
10:24 PM (IST) Jun 17

Karnataka News Live 17 June 2026Guarantee Schemes - ಗ್ಯಾರಂಟಿ ಯೋಜನೆ ನಿಲ್ಲುತ್ತದೆಯೇ? ಎಚ್‌.ಎಂ.ರೇವಣ್ಣ ಕೊಟ್ಟ ಉತ್ತರ ವೈರಲ್!

Guarantee Schemes: ಗ್ಯಾರಂಟಿ ಯೋಜನೆಯ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ. ಪರಿಷ್ಕರಣೆಯ ನಂತರ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸವಲತ್ತುಗಳು ಸಿಗಲಿವೆ ಎಂದು ಎಚ್‌.ಎಂ.ರೇವಣ್ಣ ಹೇಳಿದರು.

Read Full Story
09:29 PM (IST) Jun 17

Karnataka News Live 17 June 2026Black Milk - ಕಪ್ಪು ಬಣ್ಣದ ಹಾಲು ಕೊಡುವ ಪ್ರಾಣಿ ಯಾವುದು ಗೊತ್ತಾ? 90% ಜನರಿಗೆ ಉತ್ತರ ತಿಳಿದಿಲ್ಲ!

Black Milk: ಹಾಲು ಅಂದ ತಕ್ಷಣ ನಮಗೆಲ್ಲಾ ನೆನಪಾಗೋದು ಬಿಳಿ ಬಣ್ಣ. ಹಸು, ಎಮ್ಮೆ, ಮೇಕೆ, ಒಂಟೆ ಹೀಗೆ ನಾವು ನೋಡುವ ಪ್ರಾಣಿಗಳ ಹಾಲು ಬಿಳಿಯಾಗಿಯೇ ಇರುತ್ತೆ. ಆದರೆ ಜಗತ್ತಿನಲ್ಲಿ ಒಂದು ಪ್ರಾಣಿ ಕಪ್ಪು ಬಣ್ಣದ ಹಾಲು ಕೊಡುತ್ತೆ ಅನ್ನೋದು ನಿಮಗೆ ಗೊತ್ತಾ? ಹಾಗಿದ್ರೆ ಆ ಪ್ರಾಣಿ ಯಾವುದು? ಬನ್ನಿ ನೋಡೋಣ.

Read Full Story
08:57 PM (IST) Jun 17

Karnataka News Live 17 June 2026ಮೋದಿ ನೋಡಲು ಅತ್ಯಂತ ಸುಂದರ ವ್ಯಕ್ತಿ, ಆದರೆ ರಾಜತಾಂತ್ರಿಕತೆಯಲ್ಲಿ ಕಿಲ್ಲರ್, ಟ್ರಂಪ್ ಹೇಳಿಕೆ ವೈರಲ್

ಪ್ರಧಾನಿ ಮೋದಿ ನೋಡಲು ಅತ್ಯಂತ ಸುಂದರ ವ್ಯಕ್ತಿ. ವೇರಿ ನೈಸ್ ಪರ್ಸನ್. ಆದರೆ ರಾಜತಾಂತ್ರಿಕ ವಿಚಾರ ಬಂದರೆ ಮೋದಿ ಅತ್ಯಂತ ಕಠಿಣ ಸ್ವಭಾವದವರು. ಚಾಣಾಕ್ಷ ಸಂಧಾನಕಾರ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಮಾತು ಭಾರಿ ವೈರಲ್ ಆಗಿದೆ.

Read Full Story
07:42 PM (IST) Jun 17

Karnataka News Live 17 June 2026Gangavathi - ಅಪ್ರಾಪ್ತ ಬಾಲಕಿಯ ಮದುವೆ ಪ್ರಕರಣಕ್ಕೆ 8 ವರ್ಷಗಳ ಬಳಿಕ ತೀರ್ಪು - ನಾಲ್ವರಿಗೆ 2 ವರ್ಷ ಜೈಲು

Gangavathi ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ 2018ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವರ ಸೇರಿ ನಾಲ್ವರಿಗೆ ದಂಡ ವಿಧಿಸಲಾಗಿದೆ.

Read Full Story
07:35 PM (IST) Jun 17

Karnataka News Live 17 June 2026ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಕ್ಯಾಟ್-I’ ರನ್‌ವೇ ಲೈಟಿಂಗ್ ಆರಂಭ - ಗೋಪುರದ ಮೇಲೆ ಏಷ್ಯಾದ 2ನೇ ಅತ್ಯಾಧುನಿಕ ಸೌಲಭ್ಯ!

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (MIA) DGCA ಅನುಮೋದನೆಯೊಂದಿಗೆ 'ನಿಖರ ಸಂಪರ್ಕ ಬೆಳಕಿನ' (PAL) ವರ್ಗ-1 ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ಟೇಬಲ್ ಟಾಪ್ ರನ್‌ವೇಯಲ್ಲಿ ಕಡಿಮೆ ಗೋಚರತೆಯ ಸಂದರ್ಭದಲ್ಲೂ ಪೈಲಟ್‌ಗಳಿಗೆ ನಿಖರ ದೃಶ್ಯ ಮಾರ್ಗದರ್ಶನ ನೀಡಿ, ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ ಅನ್ನು ಖಚಿತಪಡಿಸುತ್ತದೆ.
Read Full Story
07:12 PM (IST) Jun 17

Karnataka News Live 17 June 2026Chanakya Niti - ಹುಡುಗರೇ.. ಹುಡುಗಿಯರ ಮನ ಗೆಲ್ಲಬೇಕಾ? ಚಾಣಕ್ಯ ಹೇಳಿದ ರಹಸ್ಯ ಗುಣಗಳಿವು!

Chanakya Niti: ಹುಡುಗಿಯರಿಗೆ ಕೇವಲ ಆಸ್ತಿ, ಸೌಂದರ್ಯ ಇರೋ ಹುಡುಗ್ರು ಮಾತ್ರ ಇಷ್ಟ ಆಗ್ತಾರೆ ಅಂತಾ ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಲ್ಲಿ ಯಾವ ಗುಣಗಳನ್ನು ಹೆಚ್ಚು ಇಷ್ಟಪಡುತ್ತಾರೆ ಗೊತ್ತಾ?

Read Full Story
06:33 PM (IST) Jun 17

Karnataka News Live 17 June 2026Davanagere - ಬಾಲಭವನದಲ್ಲಿ ಮತ್ತೆ ಕೂಗಿತು ರೈಲು! ಸಂಸದರ ಪ್ರಯತ್ನದಿಂದ ‘ಟಾಯ್ ಟ್ರೈನ್’ ಪುನಾರಂಭ

ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯ ಬಾಲಭವನದಲ್ಲಿ ಸ್ಥಗಿತಗೊಂಡಿದ್ದ ಆಟದ ರೈಲು ಸಂಚಾರವು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಯತ್ನದಿಂದ ಪುನರಾರಂಭಗೊಂಡಿದೆ. ಕೋವಿಡ್ ನಂತರ ದುರಸ್ತಿಗೊಳಗಾಗಿದ್ದ ರೈಲಿನ ಹಳಿಗಳನ್ನು ₹3.09 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಮಂಗಳವಾರದಿಂದ ಮಕ್ಕಳು ಮತ್ತು ಪೋಷಕರಿಗಾಗಿ ಸಂಜೆ ವೇಳೆ ಸಂಚಾರ ಆರಂಭಿಸಿದೆ.
Read Full Story
06:02 PM (IST) Jun 17

Karnataka News Live 17 June 2026Ballari - ತಹಶೀಲ್ದಾರ್ ಕಚೇರಿಯಲ್ಲಿ ತಾಯಿ-ಮಗನ ಲಂಚದ ಆಟ! ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ

ಬಳ್ಳಾರಿಯ ಸಿರುಗುಪ್ಪ ತಹಶೀಲ್ದಾರ್ ಕಚೇರಿಯಲ್ಲಿ, ಜಮೀನಿನ ಪಟ್ಟಾ ಬದಲಾವಣೆಗೆ ಪ್ರಥಮ ದರ್ಜೆ ಸಹಾಯಕಿ (FDA) ಸುವರ್ಣ ಮತ್ತು ಆಕೆಯ ಮಗ ದೀಪಕ್ ₹1,10,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ದೂರುದಾರರ ದೂರಿನ ಮೇರೆಗೆ, ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ತಾಯಿ-ಮಗ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
Read Full Story
05:44 PM (IST) Jun 17

Karnataka News Live 17 June 2026ಬೆಳಗಾವಿ - ವಿಧವೆ ಜತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಚಟ್ಟ ಕಟ್ಟಿದ ಗಂಡ! ಬಳೆಚೂರು, ಪ್ರಸಾದ, ಇಲಿಪಾಷಾಣ!

ಬೆಳಗಾವಿ ಜಿಲ್ಲೆಯಲ್ಲಿ, ವಿಧವೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದಾನೆ. ದೇವಸ್ಥಾನದ ಪ್ರಸಾದವೆಂದು ವಿಷ ಬೆರೆಸಿದ ಪಾನೀಯ ನೀಡಿ, ನಂತರ ಕತ್ತು ಹಿಸುಕಿ ಕೊಂದು, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
Read Full Story
05:12 PM (IST) Jun 17

Karnataka News Live 17 June 2026ಬೆಂಗಳೂರಿನ ಗೇಮ್ಸ್‌ಕ್ರಾಫ್ಟ್ ಸಂಸ್ಥಾಪಕರ ಇಡಿ ಬಂಧನ ಕಾನೂನುಬಾಹಿರ - ತಕ್ಷಣ ಬಿಡುಗಡೆಗೆ ಹೈಕೋರ್ಟ್ ಆದೇಶ

ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಸಂಸ್ಥಾಪಕರನ್ನು ಇಡಿ ಕಾನೂನುಬಾಹಿರವಾಗಿ ಬಂಧಿಸಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯವು ಈ ಬಂಧನವನ್ನು ರದ್ದುಗೊಳಿಸಿ, ಮೂವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಮುಚ್ಚಲ್ಪಟ್ಟಿದ್ದ ಎಫ್‌ಐಆರ್ ಆಧಾರದ ಮೇಲೆ ಇಸಿಐಆರ್ ತನಿಖೆ ಮುಂದುವರಿಸಿದ್ದು ಕಾನೂನುಬಾಹಿರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
Read Full Story
04:29 PM (IST) Jun 17

Karnataka News Live 17 June 2026ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ! ಕೊಂಕಣ ಮಾರ್ಗದಲ್ಲಿ 4 ತಿಂಗಳು ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ

ಮಳೆಗಾಲದ ಸುರಕ್ಷತಾ ಕ್ರಮವಾಗಿ ಪಾಲಕ್ಕಾಡ್ ರೈಲ್ವೆ ವಿಭಾಗವು ಪಶ್ಚಿಮ ಕರಾವಳಿ ಮತ್ತು ಕೊಂಕಣ ಮಾರ್ಗದ ಆಯ್ದ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಜೂನ್ 15 ರಿಂದ ಅಕ್ಟೋಬರ್ 20 ರವರೆಗೆ ಜಾರಿಯಲ್ಲಿರುವ ಈ ಬದಲಾವಣೆಯು, ಪ್ರಮುಖ ರೈಲುಗಳಾದ ಕೊಯಮತ್ತೂರು-ಹಿಸಾರ್ ಎಕ್ಸ್‌ಪ್ರೆಸ್ ಮತ್ತು ಸೂರತ್-ಮಂಗಳೂರು ಎಕ್ಸ್‌ಪ್ರೆಸ್ ಮೇಲೆ ಪರಿಣಾಮ ಬೀರಲಿದೆ.
Read Full Story
04:23 PM (IST) Jun 17

Karnataka News Live 17 June 2026Doddanna - ಶಂಕರ್‌ನಾಗ್‌ಗೆ ಟೆನ್ಷನ್‌, ರಾಜ್‌ಕುಮಾರ್‌ಗೆ ಶಿಸ್ತು - ದೊಡ್ಡಣ್ಣ ಹೇಳಿದ ರಹಸ್ಯ ಘಟನೆ ವೈರಲ್‌!

Doddanna: 160 ಕೆಜಿ ತೂಕದ ಬಗ್ಗೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್‌ಕುಮಾರ್‌ ಮತ್ತು ಶಂಕರ್ ನಾಗ್‌ ಅವರ ಶಿಸ್ತು, ಸಮಯಪಾಲನೆ ಹಾಗೂ 'ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್‌ ವೇಳೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.

Read Full Story
01:46 PM (IST) Jun 17

Karnataka News Live 17 June 2026ಕೆಆರ್‌ಎಸ್‌ ನೀರಿನ ಮಟ್ಟ ಕುಸಿತಕ್ಕೆ ಅತ್ತ ರೈತರಲ್ಲಿ ಆತಂಕ, ಇತ್ತ ಪ್ರವಾಸಿಗರು ಖುಷ್‌ ಆಗಿರೋದ್ಯಾಕೆ ಗೊತ್ತಾ?

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ಮೂರು ವರ್ಷಗಳ ನಂತರ ಮುಳುಗಡೆಯಾಗಿದ್ದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಗೋಚರಿಸಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೆ, ದುರ್ಬಲ ಮುಂಗಾರಿನಿಂದಾಗಿ ರೈತರು ಬೆಳೆ ನಷ್ಟ ಮತ್ತು ನೀರಿನ ಕೊರತೆಯ ಆತಂಕದಲ್ಲಿದ್ದಾರೆ.

Read Full Story
01:12 PM (IST) Jun 17

Karnataka News Live 17 June 2026Prakash Raj - ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ್ದೇನೆ, ಅವರು ಅದ್ಭುತ ಮನುಷ್ಯ..

ಧರ್ಮಸ್ಥಳ ಷಡ್ಯಂತ್ರ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಳಿಕ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ತಾವು ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸುವುದಾಗಿಯೂ, ತಮ್ಮ ಹೋರಾಟ ಸೌಜನ್ಯ ಹಾಗೂ ಇತರ ಹೆಣ್ಣುಮಕ್ಕಳ ಸಾವಿನ ನ್ಯಾಯಕ್ಕಾಗಿಯೇ ಹೊರತು ಧರ್ಮಸ್ಥಳದ ವಿರುದ್ಧವಲ್ಲ ಎಂದು ಹೇಳಿದ್ದಾರೆ.
Read Full Story
12:57 PM (IST) Jun 17

Karnataka News Live 17 June 2026Mandya - ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಕ್ಕೆ ಸ್ನೇಹಿತನನ್ನ ಸ್ಥಳಕ್ಕೆ ಕರೆಸಿಕೊಂಡ ಪತಿ ಮುಂದೇನಾಯ್ತು ನೋಡಿ!

Mandya ಪತ್ನಿಗೆ ಮೆಸೇಜ್ ಮಾಡುತ್ತಿದ್ದನೆಂದು ಸಂಶಯಗೊಂಡು ವ್ಯಕ್ತಿಯೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ.

Read Full Story
12:52 PM (IST) Jun 17

Karnataka News Live 17 June 2026Prakash Raj - ಚಿನ್ನಯ್ಯನಿಗೆ ತಬ್ಬಿಕೊಳ್ತೆನೇ ಅಂತಾ ಹೇಳಿದ್ದು ನಿಜ, ಆದರೆ...

ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದಲ್ಲಿ ತಮ್ಮ ಹೆಸರು ತಳುಕು ಹಾಕಿದ್ದಕ್ಕೆ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಬಂದ ಫೋನ್ ಕರೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾಗಿ ಸ್ಪಷ್ಟಪಡಿಸಿದ ಅವರು, ತಮ್ಮ ಹೋರಾಟ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಮಾತ್ರ ಎಂದಿದ್ದಾರೆ.

Read Full Story
12:41 PM (IST) Jun 17

Karnataka News Live 17 June 2026ಗ್ಯಾರಂಟಿ ಪರಿಷ್ಕರಣೆ ಮಧ್ಯೆ ರಾಜ್ಯದ 16 ಲಕ್ಷ ಜನರ ಪಿಂಚಣಿ ಸ್ಥಗಿತ! ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ವೃದ್ಧರು!

ಕರ್ನಾಟಕ ಸರ್ಕಾರವು ಪರಿಶೀಲನೆಯ ನೆಪದಲ್ಲಿ ಸುಮಾರು 16 ಲಕ್ಷ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರಂತಹ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಕಳೆದ ಮೂರು ತಿಂಗಳಿಂದ ನಿಂತುಹೋಗಿದ್ದು, ಬಡವರು ಮತ್ತು ಅಸಹಾಯಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
Read Full Story
12:38 PM (IST) Jun 17

Karnataka News Live 17 June 2026ಹೆಣ್ಮಕ್ಕಳ ಅ*ಶ್ಲೀ*ಲ ವಿಡಿಯೋ ಮಾಡಿ, ಒಪ್ಪಿಗೆ ಇಲ್ಲದೇ ಶೇರ್‌ ಮಾಡಿದ್ರೆ ಜೈಲೂಟ ಫಿಕ್ಸ್! ನಮ್ಮ ರಾಜ್ಯದಲ್ಲಿ ಹೊಸ ಮಾರ್ಗಸೂಚಿ

ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋ ಅಥವಾ ವಿಡಿಯೋ ಪ್ರಸಾರ ಮಾಡುವ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್‌ ದಾಖಲಿಸಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆಯು ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ದೂರು ದಾಖಲಿಸಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ.
Read Full Story
12:11 PM (IST) Jun 17

Karnataka News Live 17 June 2026Mysuru - ವೈದ್ಯರಿಲ್ಲದೆ ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.

Read Full Story