MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Mysuru: ವೈದ್ಯರಿಲ್ಲದೆ ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು, ಸಾರ್ವಜನಿಕರ ಆರೋಪ

Mysuru: ವೈದ್ಯರಿಲ್ಲದೆ ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು, ಸಾರ್ವಜನಿಕರ ಆರೋಪ

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.

2 Min read
Author : Santosh Naik
| Updated : Jun 17 2026, 12:25 PM IST
Share this Photo Gallery
  • FB
  • TW
  • Linkdin
  • Whatsapp
17
ಒಂದೇ ದಿನ 11 ರೋಗಿಗಳ ಸಾವು; ಆಸ್ಪತ್ರೆಯಲ್ಲಿ ರೋಗಿ ಸಂಬಂಧಿಗಳ ಗಲಾಟೆ
Image Credit : Asianet News

ಒಂದೇ ದಿನ 11 ರೋಗಿಗಳ ಸಾವು; ಆಸ್ಪತ್ರೆಯಲ್ಲಿ ರೋಗಿ ಸಂಬಂಧಿಗಳ ಗಲಾಟೆ

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಿನೇ ದಿನೆ ರೋಗಿಗಳ ಸಾವು ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 11 ರೋಗಿಗಳು ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಗಿಗಳ ಸಂಬಂಧಿಕರು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಸಂಬಂಧಿಕರು ವೈದ್ಯರನ್ನು ತಕ್ಷಣ ಕರೆಸುವಂತೆ ಗಲಾಟೆ ಮಾಡಿದ್ದಲ್ಲದೆ, "ಇಷ್ಟೊಂದು ದೊಡ್ಡ ಆಸ್ಪತ್ರೆಯಲ್ಲಿ ಒಬ್ಬರೂ ಡಾಕ್ಟರ್ ಇಲ್ವಾ?" ಎಂದು ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ವೈದ್ಯರ ನಿರ್ಲಕ್ಷ್ಯದ ಆರೋಪ ಸತ್ಯಕ್ಕೆ ದೂರ ಎಂದ ಆಸ್ಪತ್ರೆ ಅಧೀಕ್ಷಕರು
Image Credit : Asianet News

ವೈದ್ಯರ ನಿರ್ಲಕ್ಷ್ಯದ ಆರೋಪ ಸತ್ಯಕ್ಕೆ ದೂರ ಎಂದ ಆಸ್ಪತ್ರೆ ಅಧೀಕ್ಷಕರು

ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂಬ ಸಾರ್ವಜನಿಕರ ಆರೋಪದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಜಯದೇವ ಆಸ್ಪತ್ರೆಯ ಅಧೀಕ್ಷಕರಾದ ಡಾ. ಸದಾನಂದ ಅವರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. "ವೈದ್ಯರ ನಿರ್ಲಕ್ಷ್ಯದಿಂದ ಸಾವುಗಳಾಗಿವೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ನಿಜ, ಆದರೆ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Related Articles

Related image1
ಪ್ರಯಾಣಿಕರೇ ಗಮನಿಸಿ; ಜೂನ್ 18, 23 ರಂದು ಮೈಸೂರು-ಅರಸೀಕೆರೆ-ತಾಳಗುಪ್ಪ ಮಾರ್ಗದ ಪ್ರಮುಖ ರೈಲುಗಳ ಸಂಚಾರ ರದ್ದು!
Related image2
ಮೈಸೂರು ರೆಸ್ಟೋ ಪಬ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್, ಮೈ ಪೂರ್ತಿ ಸುಟ್ಟ ಗಾಯದಿಂದ ಆಸ್ಪತ್ರೆ ಸೇರಿದ ಸ್ಯಾಂಡಲ್‌ವುಡ್‌ ಹಿರೋ!
37
ಐದು ಜಿಲ್ಲೆಗಳ ರೋಗಿಗಳಿಗೆ ಆಸರೆ; ಕೊನೆಯ ಕ್ಷಣದಲ್ಲಿ ಬರುವ ಗಂಭೀರ ಪ್ರಕರಣಗಳು
Image Credit : Asianet News

ಐದು ಜಿಲ್ಲೆಗಳ ರೋಗಿಗಳಿಗೆ ಆಸರೆ; ಕೊನೆಯ ಕ್ಷಣದಲ್ಲಿ ಬರುವ ಗಂಭೀರ ಪ್ರಕರಣಗಳು

ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ವಿವರಿಸಿದ ಡಾ. ಸದಾನಂದ, "ನಮ್ಮ ಆಸ್ಪತ್ರೆಗೆ ಕೇವಲ ಮೈಸೂರಷ್ಟೇ ಅಲ್ಲದೆ ಸುತ್ತಮುತ್ತಲಿನ ಐದು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಸಾಮಾನ್ಯ ಹೃದ್ರೋಗ ಪ್ರಕರಣಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಆದರೆ, ಪರಿಸ್ಥಿತಿ ಅತ್ಯಂತ ಗಂಭೀರವಾದಾಗ ಮಾತ್ರ ರೋಗಿಗಳನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗುತ್ತದೆ. ನಿನ್ನೆ ಮೃತಪಟ್ಟ 11 ರೋಗಿಗಳು ಕೂಡ ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲೇ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು" ಎಂದು ತಿಳಿಸಿದ್ದಾರೆ.

47
ಮೃತಪಟ್ಟವರೆಲ್ಲಾ ತೀವ್ರ ಹೃದಯಾಘಾತ ಹಾಗೂ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದವರು
Image Credit : Asianet News

ಮೃತಪಟ್ಟವರೆಲ್ಲಾ ತೀವ್ರ ಹೃದಯಾಘಾತ ಹಾಗೂ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದವರು

ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ 11 ಮಂದಿ ಮೃತಪಟ್ಟಿರುವುದು ನಿಜ ಎಂದು ಒಪ್ಪಿಕೊಂಡಿರುವ ಅಧೀಕ್ಷಕರು, ಸಾವಿಗೆ ನಿಖರ ಕಾರಣ ಬಿಚ್ಚಿಟ್ಟಿದ್ದಾರೆ. "ಮೃತಪಟ್ಟವರೆಲ್ಲರೂ ತೀವ್ರ ಹೃದಯಾಘಾತ (Severe Heart Attack), ಹೃದಯ ವೈಫಲ್ಯ (Heart Failure) ಹಾಗೂ ವಯೋಸಹಜ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ" ಎಂದು ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

57
24 ಗಂಟೆಯೂ ಕೆಲಸ ಮಾಡಿದ ವೈದ್ಯರು; ವಿಶ್ರಾಂತಿ ವೇಳೆ ವಿಡಿಯೋ ಮಾಡಿ ಅಪಪ್ರಚಾರ
Image Credit : Asianet News

24 ಗಂಟೆಯೂ ಕೆಲಸ ಮಾಡಿದ ವೈದ್ಯರು; ವಿಶ್ರಾಂತಿ ವೇಳೆ ವಿಡಿಯೋ ಮಾಡಿ ಅಪಪ್ರಚಾರ

ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಅಧೀಕ್ಷಕರು, "ನಿನ್ನೆ ಇಡೀ 24 ಗಂಟೆಯೂ ವೈದ್ಯರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಇಬ್ಬರು ಡಿಎಎಂ (DM) ವೈದ್ಯರು ಕರ್ತವ್ಯದಲ್ಲಿದ್ದು, ರೋಗಿಗಳ ಸಂಬಂಧಿಕರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದರು. ವೈದ್ಯರು ಸತತ ಕೆಲಸದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದಾಗ ಸಂಬಂಧಿಕರು ಅದನ್ನು ಚಿತ್ರೀಕರಿಸಿ ವಿಡಿಯೋ ಹರಿಬಿಟ್ಟಿದ್ದಾರೆ. ಸತ್ಯ ತಿಳಿಯಲು ಬೇಕಿದ್ದರೆ ಆಸ್ಪತ್ರೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಬಹುದು" ಎಂದು ಸವಾಲು ಹಾಕಿದ್ದಾರೆ.

67
ಕಳೆದ 17 ದಿನಗಳಲ್ಲಿ 64 ಮಂದಿ ಸಾವು
Image Credit : Asianet News

ಕಳೆದ 17 ದಿನಗಳಲ್ಲಿ 64 ಮಂದಿ ಸಾವು

ನಿನ್ನೆ ಒಂದೇ ದಿನ 11 ಮಂದಿ ರೋಗಿಗಳ ಸಾವಿನೊಂದಿಗೆ ಜಯದೇವ ಆಸ್ಪತ್ರೆಯಲ್ಲಿ ಕಳೆದ 17 ದಿನದಲ್ಲಿ ನಿಧನರಾದ ಹೃದ್ರೋಗಿಗಳ ಸಂಖ್ಯೆ 64ಕ್ಕೆ ಏರಿದೆ. ಜೂನ್‌ ತಿಂಗಳ ಅಂಕಿ ಅಂಶವನ್ನು ಸ್ವತಃ ಆಸ್ಪತ್ರೆ ಬಿಡುಗಡೆ ಮಾಡಿದೆ. ಮಂಗಳವಾರ ಆಸ್ಪತ್ರೆಗೆ ಒಟ್ಟು 77 ಒಳರೋಗಿಗಳು ದಾಖಲಾಗಿದ್ದರು. ಇದೇ ತಿಂಗಳು 9ರಂದು 65 ಒಳ ರೋಗಿಗಳ ಪೈಕಿ 8 ರೋಗಿಗಳ ಸಾವು. ಆಸ್ಪತ್ರೆಯ ನಿತ್ಯದ ಮಾರ್ಟಾಲಿಟಿ ರೇಟ್ 6ರಿಂದ7. ನಿನ್ನೆ ಹೆಚ್ಚು ಪ್ರಮಾಣ ರೋಗಿಗಳ ಸಾವು ದಾಖಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

77
ಒಂದು ವರ್ಷದಲ್ಲಿ 1245 ರೋಗಿಗಳ ಸಾವು
Image Credit : X

ಒಂದು ವರ್ಷದಲ್ಲಿ 1245 ರೋಗಿಗಳ ಸಾವು

ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದು ವರ್ಷದಲ್ಲಿ 1245 ರೋಗಿಗಳು ಸಾವು ಕಂಡಿದ್ದಾರೆ. 2025ರಲ್ಲಿ ಆಸ್ಪತ್ರೆಗೆ 21,577 ರೋಗಿಗಳು ದಾಖಲಾಗಿದ್ದು, ಇದರಲ್ಲಿ 1,245 ಮಂದಿ ಸಾವು ಕಂಡಿದ್ದಾರೆ. ಒಂದು ವರ್ಷದಲ್ಲಿ ಸಾವಿಗೀಡಾದ ರೋಗಿಗಳ ಶೇಕಡಾವಾರು ಸಂಖ್ಯೆ 5.77 ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಮೈಸೂರು
ಆಸ್ಪತ್ರೆ
ಕರ್ನಾಟಕ ಸುದ್ದಿ
ಆರೋಗ್ಯ
ಹೃದಯಾಘಾತ

Latest Videos
Recommended Stories
Recommended image1
ಚಾಮರಾಜನಗರ: ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದವ ಅರೆಸ್ಟ್
Recommended image2
ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!
Recommended image3
ಚಿಕ್ಕಬಳ್ಳಾಪುರ: ಗುತ್ತಿಗೆದಾರರ ನಿರ್ಲಕ್ಷ್ಯ, ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು!
Related Stories
Recommended image1
ಪ್ರಯಾಣಿಕರೇ ಗಮನಿಸಿ; ಜೂನ್ 18, 23 ರಂದು ಮೈಸೂರು-ಅರಸೀಕೆರೆ-ತಾಳಗುಪ್ಪ ಮಾರ್ಗದ ಪ್ರಮುಖ ರೈಲುಗಳ ಸಂಚಾರ ರದ್ದು!
Recommended image2
ಮೈಸೂರು ರೆಸ್ಟೋ ಪಬ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್, ಮೈ ಪೂರ್ತಿ ಸುಟ್ಟ ಗಾಯದಿಂದ ಆಸ್ಪತ್ರೆ ಸೇರಿದ ಸ್ಯಾಂಡಲ್‌ವುಡ್‌ ಹಿರೋ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved