ಪ್ರಧಾನಿ ಮೋದಿ ನೋಡಲು ಅತ್ಯಂತ ಸುಂದರ ವ್ಯಕ್ತಿ. ವೇರಿ ನೈಸ್ ಪರ್ಸನ್. ಆದರೆ ರಾಜತಾಂತ್ರಿಕ ವಿಚಾರ ಬಂದರೆ ಮೋದಿ ಅತ್ಯಂತ ಕಠಿಣ ಸ್ವಭಾವದವರು. ಚಾಣಾಕ್ಷ ಸಂಧಾನಕಾರ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಮಾತು ಭಾರಿ ವೈರಲ್ ಆಗಿದೆ.
ಫ್ರಾನ್ಸ್ (ಜೂ.17) ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಮೋದಿ ಜೊತೆಗಿನ ಮಾತುಕತೆ ಬಳಿಕ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಇದೀಗ ಭಾರಿ ವೈರಲ್ ಆಗಿದೆ. ಮೋದಿ ಎದುರಿಗೆ ಮಾಧ್ಯಮದ ಜೊತೆ ಮಾತನಾಡಿದ ಟ್ರಂಪ್, ಮೋದಿ ನೋಡಲು ಅತ್ಯಂತ ಸುಂದರವಾದ ವ್ಯಕ್ತಿ. ಅವರು ಲುಕ್ ಎಷ್ಟು ಉತ್ತಮ ಹಾಗೂ ಆಕರ್ಷಕವಾಗಿ ಎಂದರೆ ನನಗೆ ಏಂಜಲ್ ರೀತಿ ಕಾಣಿಸುತ್ತಾರೆ. ದ್ವಿಪಕ್ಷೀಯ ಮಾತುಕತೆ, ವ್ಯಾಪಾರ ವ್ಯಹಾರ ಮಾತುಕತೆ ವಿಚಾರಕ್ಕೆ ಬಂದರೆ ಮೋದಿ ಅತ್ಯಂತ ಕಠಿಣ. ಖಡಕ್ ಆಗಿ ನಿರ್ಧಾರಗಳನ್ನು ಹೇಳುತ್ತಾರೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎದುರಾಳಿ ಮಣಿಸುವ ಕಿಲ್ಲರ್
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯನ್ನು ಡೋನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಮೋದಿ ವ್ಯಕ್ತಿತ್ವ, ಟ್ರೇಡ್ ಡೀಲ್ ವಿಚಾರದಲ್ಲಿ ಅತ್ಯಂತ ಕಠೋರ ವ್ಯಕ್ತಿ ಎಂದಿದ್ದಾರೆ. ಮೋದಿ ನೋಡಲು ಎಷ್ಟು ಗುಡ್ ಲುಕಿಂಗ್ ಇದ್ದಾರೋ , ರಾಜತಾಂತ್ರಿಕವಾಗಿ ಎದುರಾಳಿಯನ್ನು ಮಣಿಸುವ ಕಿಲ್ಲರ್ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ನೆಗೋಶಿಯೇಶನ್ ವಿಚಾರ ಬಂದಾಗ ಮೋದಿ ಅತ್ಯಂತ ಕಠೋರವಾಗುತ್ತಾರೆ. ಚಾಣಾಕ್ಷ ಸಂಧಾನಕಾರ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೀಗ ಡೋನಾಲ್ಡ್ ಟ್ರಂಪ್ ಮೋದಿ ಕುರಿತು ಹೇಳಿದ ಮಾತುಗಳು ಭಾರಿ ವೈರಲ್ ಆಗುತ್ತಿದೆ.
ಮೋದಿ ಶಾಂತವಾಗಿ ಎಲ್ಲವನ್ನು ಎದುರಿಸುತ್ತಾರೆ. ಇದೇ ವೇಳೆ ದೃಢವಾದ ಮುಖಭಾಗ, ಚಾಣಾಕ್ಷ ಸಂಧಾನದ ಮೂಲಕ ತಮ್ಮ ದೇಶದ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಗಳನ್ನು ಮುಂದಿಡುತ್ತಾರೆ. ಮೋದಿ ದೇವದೂತನ ರೀತಿ ಕಾಣುತ್ತಾರೆ ಎಂದು ಟ್ರಂಪ್ ಹೋಲಿಕೆ ಮಾಡಿದ್ದಾರೆ. ಮೋದಿ ಟಫ್ ನೆಗೋಶಿಯೇಟರ್ ಅನ್ನೋ ಮಾತನ್ನು ಟ್ರಂಪ್ ಹಲವು ಬಾರಿ ಉಚ್ಚರಿಸಿದ್ದಾರೆ. ದ್ವಿಪಕ್ಷೀಯ ಟ್ರೇಡ್ ಡೀಲ್ ವಿಚಾರದಲ್ಲಿ ಮೋದಿ ಮಣಿಯುವುದಿಲ್ಲ, ತಮ್ಮ ಯಾವುದೇ ಸಂಧಾನಕ್ಕೂ ಜಗ್ಗುವುದಿಲ್ಲ ಅನ್ನೋ ಮಾತನ್ನು ಟ್ರಂಪ್ ಈ ಹಿಂದೆಯೂ ಹೇಳಿದ್ದಾರೆ. ಹಲವು ರಾಷ್ಟ್ರಗಳ ನಾಯಕರ ಜೊತೆ ಡೀಲ್ ಮಾಡಲಾಗಿದೆ. ಆದರೆ ಮೋದಿಯಷ್ಟು ಟಫ್ ಯಾರಿಲ್ಲ ಎಂದಿದ್ದರು.
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೋನಾಲ್ಡ್ ಟ್ರಂಪ್ ಹಲವು ದ್ವಿಪಕ್ಷೀಯ ವ್ಯಾಪರ ವಹಿವಾಟಿನ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ಭಾರತೀಯ ನಾವಿಕರು ಸುರಶಕ್ಷತೆ ಕುರಿತು ಖಡಕ್ ಸಂದೇಶ ರವಾನಿಸಿದ್ದಾರೆ. ಭಾರತೀ ನಾವಿಕರ ಜೀವಗಳನ್ನು ಕೇವಲವಾಗಿ ನೋಡಬೇಡಿ. ಸಾವಿರಾರು ಭಾರತೀಯ ನಾವಿಕರು ವಿವಿದ ಸಮುದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಅವರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ನಾವಿಕರ ಸುರಕ್ಷತೆ ಕುರಿತು ಭರವಸೆ ನೀಡಿರುವ ಡೋನಾಲ್ಡ್ ಟ್ರಂಪ್ ಹೊರ್ಮುಜ್ ಶೀಘ್ರದಲ್ಲೇ ಶಾಂತವಾಗಲಿದೆ ಎಂದಿದ್ದಾರೆ.


