- Home
- News
- State
- Karnataka News Live: ಕರಾವಳಿ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ
Karnataka News Live: ಕರಾವಳಿ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಬಳ್ಳಾರಿ: ಬ್ಯಾನರ್ ಗಲಭೆ ಖಂಡಿಸಿ ಬಳ್ಳಾರಿ ನಗರದ ಎಪಿಎಂಸಿ ಬಳಿ ಶನಿವಾರ ಬಿಜೆಪಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶಕ್ಕೆ ₹50 ಲಕ್ಷದ ಬಾಂಡ್ ನೀಡುವಂತೆ ಜಿಲ್ಲಾಡಳಿತ ಕೇಳಿದ್ದು, ಈ ಬಗ್ಗೆ ಶುಕ್ರವಾರ ಪಕ್ಷದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ ಅವರಿಗೆ ನೋಟಿಸ್ ನೀಡಲು ಬಂದ ಪೊಲೀಸರನ್ನೇ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಬಳ್ಳಾರಿ ತಾಲೂಕು ತಹಸೀಲ್ದಾರ್ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ಮೂಲಕ ನೋಟಿಸ್ ನೀಡಲಾಗಿದ್ದು, ಪ್ರತಿಭಟನಾ ಸಮಾವೇಶಕ್ಕೆ 20 ಸಾವಿರ ಜನರು ಸೇರುವ ನಿರೀಕ್ಷೆ ಇರುವುದರಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಂಭವವಿದೆ. ಹಾಗಾಗಿ ₹50 ಲಕ್ಷ ಮುಚ್ಚಳಿಕೆ ಬಾಂಡ್ ನೀಡುವಂತೆ ನೋಟಿಸ್ ಕೊಡಲು ಪಿಎಸ್ಐ ರಫೀಕ್ ಆಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಈ ಹಿಂದೆ ಯಾವುದಾದರೂ ಕಾರ್ಯಕ್ರಮಕ್ಕೆ ಬಾಂಡ್ ಬರೆಸಿಕೊಂಡಿದ್ದರೆ ತೆಗೆದುಕೊಂಡು ಬನ್ನಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Karnataka News Live 17 January 2026ಕರಾವಳಿ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ
Karnataka News Live 17 January 2026ಪ್ರಶ್ನೆಪತ್ರಿಕೆ ಲೀಕ್ ಆದರೆ ಪ್ರಿನ್ಸಿಪಾಲ್ ವಿರುದ್ಧ ಕೇಸ್
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ 1ರ ಕೆಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಜ.19ರಿಂದ ಆರಂಭವಾಗಲಿರುವ ಪೂರ್ವ ಸಿದ್ಧತಾ ಪರೀಕ್ಷೆ 2ರಲ್ಲಿ ಮತ್ತೆ ಇಂಥ ಲೋಪಗಳಾಗದಂತೆ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ.
Karnataka News Live 17 January 2026ಇನ್ಮುಂದೆ Zepto, Blinkit, Swiggy 10 ನಿಮಿಷದ ಡೆಲಿವರಿ ಸಿಗಲ್ಲ - ಸರ್ಕಾರದ ಆದೇಶ! ಖುಷಿಯಿಂದ ಒಪ್ಕೊಂಡ ಗ್ರಾಹಕರು
10 Minutes Delivery: ಐದು ನಿಮಿಷದಲ್ಲಿ ಪಾರ್ಸೆಲ್ ಡೆಲಿವರಿ ಮಾಡಬೇಕು, ಬೇಗ ಡೆಲಿವರಿ ಸಿಗಬೇಕು ಎಂದು ಅನೇಕರು ಡೆಲಿವರಿ ಬಾಯ್‌ಗಳ ಜೊತೆಯಲ್ಲಿ ಜಗಳ ಆಡೋದುಂಟು. ಈಗ ಸರ್ಕಾರವೇ ಹತ್ತು ನಿಮಿಷದೊಳಗಡೆ ಡೆಲಿವರಿ ಮಾಡಬೇಕು ಅಂತೇನಿಲ್ಲ ಎಂದು ಹೇಳಿದೆ.
Karnataka News Live 17 January 2026ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು - ಬೆನ್ನಲ್ಲಿರು ವಸ್ತು ನೋಡಿ ಜನರು ಶಾಕ್
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದೊಂದು ಪತ್ತೆಯಾಗಿ ಕುತೂಹಲ ಮೂಡಿಸಿತ್ತು. ತನಿಖೆಯ ನಂತರ, ಇದು ಮಹಾರಾಷ್ಟ್ರ ಅರಣ್ಯ ಇಲಾಖೆಯ ಸಂಶೋಧನಾ ಅಧ್ಯಯನದ ಭಾಗವೆಂದು ತಿಳಿದುಬಂದಿದೆ.
Karnataka News Live 17 January 2026ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್ ಬಳಕೆ
ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕರ್ನಾಟಕ ಸರ್ಕಾರಿ ಸ್ವಾಮ್ಯದ, ಮೈಸೂರು ಕಂಪನಿ ಉತ್ಪಾದಿಸುವ ಇಂಕ್ ಅನ್ನೇ ಮತದಾರರ ಕೈಗೆ ಗುರುತು ಹಾಕಲು ಬಳಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
Karnataka News Live 17 January 2026ಮಾಜಿ ಸಚಿವ ರಾಜಣ್ಣಗೆ ಸಿಹಿ ಸುದ್ದಿ - ಮುಖ್ಯಮಂತ್ರಿ ಸಿದ್ಧರಾಮಯ್ಯ
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಜತೆ ಸಿಹಿ ಸುದ್ದಿನೇ ಇರುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಅವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆ.ಎನ್.ರಾಜಣ್ಣ ಅವರ ಮನೆಯಲ್ಲಿ ಔತಣ ಕೂಟದಲ್ಲಿ ಭಾಗವಹಿಸಿದ್ದರು.
Karnataka News Live 17 January 2026ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ - ಲೋಹದ ಹಕ್ಕಿಯ ಹಾರಾಟ ಆರಂಭ ಯಾವಾಗ?
Karnataka News Live 17 January 2026ದಿಲ್ಲಿ ಗಣರಾಜ್ಯೋತ್ಸವ ಪರೇಡಲ್ಲಿ ಈ ಬಾರಿ ರಾಜ್ಯದ ಸ್ತಬ್ಧಚಿತ್ರ ಇಲ್ಲ
ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ಹತ್ತಾರು ಬಾರಿ ತನ್ನ ಸಂಸ್ಕೃತಿ ಹಾಗೂ ಪರಂಪರೆ ಪ್ರದರ್ಶಿಸಿದ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ಲಭ್ಯವಾಗಿಲ್ಲ. ‘ಮಿಲೆಟ್ಸ್ ಟು ಮೈಕ್ರೋ ಚಿಪ್’ ವಿಷಯಾಧಾರಿತ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಒಪ್ಪದ ಕೇಂದ್ರ