- Home
- Entertainment
- TV Talk
- Bigg Bossನಲ್ಲಿ ಈ ಬಾರಿ ದಾಖಲೆಯ 37 ಕೋಟಿ ವೋಟ್ ಪಡೆದೋರು ಯಾರು? ಕಿಚ್ಚನಿಂದ ಅಚ್ಚರಿಯ ವಿಷ್ಯ ರಿವೀಲ್
Bigg Bossನಲ್ಲಿ ಈ ಬಾರಿ ದಾಖಲೆಯ 37 ಕೋಟಿ ವೋಟ್ ಪಡೆದೋರು ಯಾರು? ಕಿಚ್ಚನಿಂದ ಅಚ್ಚರಿಯ ವಿಷ್ಯ ರಿವೀಲ್
ಕನ್ನಡ ಬಿಗ್ಬಾಸ್ ಈ ಬಾರಿ 37 ಕೋಟಿಗೂ ಅಧಿಕ ಮತಗಳನ್ನು ಪಡೆದು ಹೊಸ ಇತಿಹಾಸ ಸೃಷ್ಟಿಸಿದೆ. ಈ ವಿಷಯವನ್ನು ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳ ನಡುವೆ ಅತಿ ಕಡಿಮೆ ಮತಗಳ ಅಂತರವಿದೆ ಎಂದು ತಿಳಿಸಿದ್ದಾರೆ.

ನೆಕ್ ಟು ನೆಕ್ ಫೈಟ್
ಅಬ್ಬಬ್ಬಬ್ಬಾ ಎನ್ನುವಂಥ ವಿಷಯವೊಂದು ಈ ಬಾರಿಯ ಕನ್ನಡದ ಬಿಗ್ಬಾಸ್ ಸೃಷ್ಟಿಸಿದೆ. ಇದೊಂದು ರೀತಿಯಲ್ಲಿ ಇತಿಹಾಸವೇ ಆಗಿದೆ. ಬಹುಶಃ ಬೇರೆ ಭಾಷೆಗಳಿಗೆ ಹೋಲಿಸಿದರೂ ಇದು ದಾಖಲೆ ಎನ್ನಬಹುದೇನೋ. ಅದೇನೆಂದರೆ, ನಿನ್ನೆ ಮಧ್ಯರಾತ್ರಿ 12 ಗಂಟೆಯವರೆಗೆ ವಿನ್ನರ್ಗೆ ಬಂದಿರುವ ವೋಟ್ 37 ಕೋಟಿ!
ಕಿಚ್ಚ ರಿವೀಲ್
ಈ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ರಿವೀಲ್ ಮಾಡಿದ್ದಾರೆ. ಕಳೆದ ವರ್ಷ ವಿನ್ನರ್ಗೆ ಐದು ಕೋಟಿ ವೋಟ್ ಬಂದಿತ್ತು. ಈ ಬಾರಿ ಎಷ್ಟು ವೋಟ್ ಬಂದಿರಬಹುದು ಎಂದು ಪ್ರಶ್ನಿಸಲಾಗಿದೆ.
37 ಕೋಟಿ ವೋಟ್
ಅದಕ್ಕೆ ರಘು ಅವರು 12 ರಿಂದ 13 ಕೋಟಿ ಅಂದಿದ್ದರೆ, ಗಿಲ್ಲಿ 8-10 ಕೋಟಿ ಎಂದಿದ್ದಾರೆ. ಆದರೆ ಸುದೀಪ್ ಅವರು ರಿವೀಲ್ ಮಾಡಿದ್ದು 37 ಕೋಟಿ ಪ್ಲಸ್. ನಿನ್ನೆ ಮಧ್ಯರಾತ್ರಿ 12 ಗಂಟೆಯ ವರೆಗೆ ಇಷ್ಟು ವೋಟ್ ಬಂದಿದೆ ಎಂದಾಗ ಎಲ್ಲರೂ ದಂಗಾಗಿದ್ದಾರೆ.
ಅಚ್ಚರಿಯ ವಿಷ್ಯ ರಿವೀಲ್
ಇದೇ ವೇಳೆ ಇನ್ನೊಂದು ಅಚ್ಚರಿಯ ವಿಷಯವನ್ನೂ ಸುದೀಪ್ ರಿವೀಲ್ ಮಾಡಿದ್ದಾರೆ. ಮೊದಲ ಸ್ಥಾನ ಮತ್ತು ಎರಡನೆಯ ಸ್ಥಾನಕ್ಕೆ ಬಹಳ ಕಡಿಮೆ ಅಂತರವಿದೆ ಎಂದಿದ್ದಾರೆ. ಅಲ್ಲಿಗೆ ವಿನ್ನರ್ ಮತ್ತು ಮೊದಲ ರನ್ನರ್ ಅಪ್ ನಡುವೆ ಸಿಕ್ಕಾಪಟ್ಟೆ ಕಡಿಮೆ ಅಂತರವಿದೆ.
ಯಾರಿವರು?
ಹಾಗಿದ್ದರೆ ವಿನ್ ಆಗುವವರು ಯಾರು, ರನ್ನರ್ಸ್ ಅಪ್ ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಅಷ್ಟಕ್ಕೂ ಈಗಿರುವ ಕ್ರೇಜ್ ನೋಡಿದರೆ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಈ ಫೈಟ್ ಇರಬಹುದು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

