- Home
- Entertainment
- TV Talk
- Bigg Boss ಸ್ಪರ್ಧಿಗಳ ಪರ ಅಖಾಡಕ್ಕಿಳಿದ ಸಚಿವರು ಶಾಸಕರು! ಯಾರಿಗೆ ಯಾವ ರಾಜಕಾರಣಿ ಬೆಂಬಲ?
Bigg Boss ಸ್ಪರ್ಧಿಗಳ ಪರ ಅಖಾಡಕ್ಕಿಳಿದ ಸಚಿವರು ಶಾಸಕರು! ಯಾರಿಗೆ ಯಾವ ರಾಜಕಾರಣಿ ಬೆಂಬಲ?
ಬಿಗ್ಬಾಸ್ ಕನ್ನಡ 12ರ ಫಿನಾಲೆ ಅಭೂತಪೂರ್ವ ಪ್ರಚಾರಕ್ಕೆ ಸಾಕ್ಷಿಯಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಸೇರಿದಂತೆ ಫೈನಲಿಸ್ಟ್‌ಗಳ ಪರವಾಗಿ ಶಾಸಕರು ಮತ್ತು ಮಾಜಿ ಸಚಿವರೇ ಅಖಾಡಕ್ಕಿಳಿದು ಬೆಂಬಲ ವ್ಯಕ್ತಪಡಿಸುತ್ತಿದ್ದು, ಇದು ಬಿಗ್ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಎನ್ನಲಾಗಿದೆ.

ಇತಿಹಾಸ ಸೃಷ್ಟಿ
ಬಿಗ್ಬಾಸ್ ಕನ್ನಡ (Bigg Boss Kannada 12) ಹಿಂದಿನ ಸೀಸನ್ಗಳಿಗಿಂತಲೂ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ. 22 ಮಂದಿಯಲ್ಲಿ ಆರು ಮಂದಿ ಫಿನಾಲೆಗೆ ಬಂದಿದ್ದಾರೆ. ಅದರಲ್ಲಿ ಗಿಲ್ಲಿ ನಟ (Gilli Nata) , ಅಶ್ವಿನಿ ಗೌಡ ಅವರ ನಡುವೆ ನೆಕ್ ಟು ನೆಕ್ ಫೈಟ್ ಇದೆ. ಇದೊಂದು ರೀತಿಯಲ್ಲಿ ಸಾರ್ವತ್ರಿಕ ಚುನಾವಣೆಯ ರಂಗು ಪಡೆದುಕೊಳ್ಳುತ್ತಿದೆ.
ಹೆಚ್ಚುತ್ತಿದೆ ಪ್ರಚಾರ
ಈ ಪರಿ ಅದ್ಯಾವ ರೀತಿಯಲ್ಲಿ ಬಿಗ್ಬಾಸ್ ಹುಚ್ಚು ಹೆಚ್ಚಾಗಿದೆ ಎಂದರೆ, ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲಬೇಕು ಎಂದು ಅಭಿಮಾನಿಗಳು ಪ್ರಚಾರ ಮಾಡ್ತಿರೋದು ಒಂದೆಡೆಯಾದರೆ, ಖುದ್ದು ರಾಜಕೀಯ ನಾಯಕರೇ ಅಖಾಡಕ್ಕೆ ಇಳಿದುಬಿಟ್ಟಿದ್ದಾರೆ! ಕೆಲವರು ನೇರವಾಗಿ ಪ್ರಚಾರ ಮಾಡಿದರೆ, ಮತ್ತೆ ಕೆಲವರು ಶುಭ ಕೋರುವ ಮೂಲಕ ತಾವು ಅವರ ಪರ ಎಂದು ತೋರಿಸಿಕೊಳ್ಳುತ್ತಿದ್ದಾರೆ.
ಬಿಗ್ಬಾಸ್ನ ಇತಿಹಾಸದಲ್ಲಿಯೇ ಮೊದಲು
ಇದು ಬಹುಶಃ ಬಿಗ್ಬಾಸ್ನ ಇತಿಹಾಸದಲ್ಲಿಯೇ ಮೊದಲು ಎನ್ನಬಹುದೇನೋ. ವಿವಿಧ ಸಂಘನೆಗಳವರು ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲಲಿ ಎಂದು ಪ್ರಚಾರ ಮಾಡುವುದು ಒಂದೆಡೆಯಾದರೆ, ಇದೀಗ ರಾಜಕೀಯ ಮುಖಂಡರು ಕೂಡ ಸ್ಪರ್ಧಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ರಾಜಕೀಯ ಧುರೀಣರು
ಸದ್ಯ ಫಿನಾಲೆಯಲ್ಲಿ, ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್ ಮತ್ತು ಮ್ಯೂಟಂಟ್ ರಘು ಇದ್ದಾರೆ. ಇವರ ಪರವಾಗಿ ಈಗ ರಾಜಕೀಯ ಧುರೀಣರು ಪ್ರಚಾರ ಮಾಡುತ್ತಿದ್ದಾರೆ.
ಶಾಸಕರು, ಸಚಿವರು!
ಗಿಲ್ಲಿ ನಟನ ಪರವಾಗಿ ಇದಾಗಲೇ ನಟ ಶಿವರಾಜ್ಕುಮಾರ್ ಒಳ್ಳೆಯ ಮಾತು ಆಡಿದ್ದಾರೆ. ಮಾಜಿ ಸಚಿವ ಡಿ.ಸಿ ತಮ್ಮಣ್ಣ, ಮಳವಳ್ಳಿಯ ಶಾಸಕ ನರೇಂದ್ರ ಸ್ವಾಮಿ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಅಶ್ವಿನಿ ಗೌಡ ಅವರ ಪರವಾಗಿ ಕನ್ನಡ ಸಂಘನೆಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದಾಗಲೇ ಕರವೇ ಅಧ್ಯಕ್ಷರು ಸುದೀಪ್ ಅವರನ್ನು ಭೇಟಿಯಾದದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು.
ರಕ್ಷಿತಾ, ಕಾವ್ಯಾ ಪರ...
ಅದೇ ರೀತಿ, ರಕ್ಷಿತಾ ಶೆಟ್ಟಿ (Rakshita Shetty) ಪರ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಪ್ರಚಾರ ಮಾಡುತ್ತಿದ್ದರೆ, ಕಾವ್ಯಾ ಶೈವ ಅವರನ್ನು ಗೆಲ್ಲಿಸುವಂತೆ ಮಾಜಿ ಸಚಿವ ಕೆ.ಸಿ ನಾರಾಯಣ ಗೌಡ, ಕೆಆರ್ ಪೇಟೆಯ ಎಚ್.ಟಿ ಮಂಜು ಕೋರಿಕೊಳ್ಳುತ್ತಿದ್ದಾರೆ. ಮ್ಯೂಟಂಟ್ ರಘು ಪರವಾಗಿ ಮಾಜಿ ಸಚಿವ ಬಿಸಿ ಪಾಟೀಲ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

