ಕೇಂದ್ರ ಸರ್ಕಾರದ ಸಬ್ಸಿಡಿ ಹೆಸರಿನಲ್ಲಿ ಎಲೆಕ್ಟಿಕ್ ಬೈಕ್ ನೀಡುವುದಾಗಿ ನಂಬಿಸಿ, 'ಆಪೈ ಇವಿ' ಮತ್ತು 'ಬಿಲ್ಕರ್ ಟೆಕ್ನೋಲಜಿ' ಎಂಬ ಬೈಕ್ ಶೋರೂಂಗಳು ಸಾವಿರಾರು ಗ್ರಾಹಕರಿಗೆ ವಂಚಿಸಿವೆ. ಗ್ರಾಹಕರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ಸುಮಾರು 35 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.

ಬ್ಸಿಡಿಯಡಿ ಎಲೆಕ್ಟಿಕ್ ಬೈಕ್ ವಿತರಿಸುವ ಆಮಿಷವೊಡ್ಡಿ ಮೋಸ

ಬೆಂಗಳೂರು: ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಎಲೆಕ್ಟಿಕ್ ಬೈಕ್ ವಿತರಿಸುವ ಆಮಿಷವೊಡ್ಡಿ ಬೈಕ್ ಶೋರೂಮ್‌ನವರು ನೂರಾರು ಗ್ರಾಹಕರಿಗೆ ಕೋಟ್ಯಂತರ ರು. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಈ ಸಂಬಂಧ ಪೀಣ್ಯ ಮತ್ತು ಬಾಗಲಗುಂಟೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಆಪೈ ಇವಿ ಶೋ ರೂಮ್ ಮತ್ತು ಬಿಲ್ಕರ್ ಟೆಕ್ನೋಲಜಿ ಎಂಬ ಬೈಕ್ ಶೋ ರೂಮ್‌ನ ಮಾಲೀಕರಾದ ರಾಕೇಶ್, ಹನುಮಂತ ಬಿಲ್ಕರ್ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು 35 ಕೋಟಿ ರು. ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. '

ಇದನ್ನೂ ಓದಿ: ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಕಚ್ಚಾತೈಲ ಖರೀದಿ ಹೆಚ್ಚಿಸುವ ಅನಿವಾರ್ಯತೆ: ಮತ್ತೆ ಸುಂಕ ಹೇರಲಿದೆಯಾ ಅಮೆರಿಕಾ

ಆಪೈ ಇವಿ' ಶೋರೂಂ ಮಾಲೀಕರು ಸುಮಾರು 3,250 ಜನರಿಗೆ ಸಬ್ಸಿಡಿ ಆಸೆ ತೋರಿಸಿ ಲೋನ್ ಸುಳಿಗೆ ಸಿಲುಕಿಸಿದ್ದಾರೆ. ಕೇವಲ 20 ಸಾವಿರ ರು. ಡಿಪಾಸಿಟ್ ಮಾಡಿದರೆ ಸಾಕು, ಉಳಿದ ಹಣ ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಪಾವತಿಯಾಗುತ್ತದೆ ಎಂದು ಗ್ರಾಹಕರನ್ನು ಆರೋಪಿಗಳು ನಂಬಿಸಿದ್ದಾರೆ.

ಗ್ರಾಹಕರ ಪ್ರತಿಭಟನೆ

ತಮ್ಮ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಸಾಲ ಇರುವುದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕರು ಮಂಗಳವಾರ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಬ್ಯಾಂಕಿನ ಕೇಂದ್ರ ಕಚೇರಿಯ ಎಂ.ಜಿ. ರಸ್ತೆವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ನೂರಾರು ಗ್ರಾಹಕರು ಭಾಗವಹಿಸಿದ್ದರು.

ಇದನ್ನೂ ಓದಿ: ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್, ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ: ಸಿಕ್ತು 29 ಲಕ್ಷ ರೂ ವಧುದಕ್ಷಿಣೆ

ದ್ವಿಚಕ್ರ ನೀಡುವ ನೆಪದಲ್ಲಿ ಗ್ರಾಹಕರಿಂದ ಆಧಾರ್, ಪಾನ್ ಕಾರ್ಡ್ ಪಡೆದ ಶೋರೂಂ ಮಾಲೀಕರು, ಗ್ರಾಹಕರಿಗೆ ತಿಳಿಯದಂತೆ ಬ್ಯಾಂಕ್ ಮೂಲಕ ಲೋನ್ ಮಾಡಿಸಿದ್ದಾರೆ. ಎನ್ನಲಾಗಿದೆ. ಕೇವಲ 35 ಸಾವಿರ ಬೆಲೆಬಾಳುವ ಸಾಧಾರಣ ಇ.ವಿ ಬೈಕ್‌ಗೆ ಬರೋಬ್ಬರಿ 1.50 ಲಕ್ಷ ಲೋನ್ ಮಾಡಿಸಿ ಬ್ಯಾಂಕ್‌ನಿಂದ ಹಣ ಪಡೆದುಕೊಳ್ಳಲಾಗಿದೆ.