Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದಾರೆ. ಗಿಲ್ಲಿ ನಟ ಅವರು ಏನು ಅಂದುಕೊಂಡಿರೋದೆಲ್ಲ ಆಗುತ್ತಿದೆ. ಇದಕ್ಕೆ ಕಾರಣ ಏನು? ಇದರ ಹಿಂದಿನ ಮಂತ್ರ ಯಾವುದು?
ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂದು ಗಿಲ್ಲಿ ನಟ ( Gilli Nata ) ಅಂದುಕೊಂಡಿದ್ದರು. ಅದರಂತೆ ಅವರು ಇಂದು ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ರಿಯಾಲಿಟಿ ಶೋಗಳನ್ನು ಮಾಡುತ್ತಿದ್ದ ಗಿಲ್ಲಿ ನಟ ಈಗ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿಯೇ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಗಿಲ್ಲಿ ನಟ ಅವರು ಅಂದುಕೊಂಡಿರೋದೆಲ್ಲ ಆಗುತ್ತಿರೋದು ಹೇಗೆ? ಇದರ ಹಿಂದಿನ ಮಂತ್ರ ಏನು ಎನ್ನೋದನ್ನು ನೋಡೋಣ.
ಅತಿಥಿ ಆಗಿ ಹೋಗಬೇಕು
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಸತೀಶ್ ನೀನಾಸಂ ಬಗ್ಗೆ ಮಾತನಾಡಿದ್ದರು. ನಾನು ಕಾಲೇಜಿನಲ್ಲಿದ್ದಾಗ ಸತೀಶ್ ನೀನಾಸಂ ಅವರು ಒಂದು ಕಾರ್ಯಕ್ರಮಕ್ಕೆ ಅತಿಥಿ ಆಗ ಬರಬೇಕಿತ್ತು. ಅವರನ್ನು ಮೊದಲೇ ಭೇಟಿ ಮಾಡಿ, ನಿಮ್ಮ ಜೊತೆ ನನ್ನನ್ನು ಕರೆದುಕೊಂಡು ಹೋಗಿ, ಶೂಟಿಂಗ್‌ಗೆ ಬರುವೆ ಎಂದು ಹೇಳೋಣ ಅಂದುಕೊಂಡಿದ್ದೆ. ಅದಕ್ಕಾಗಿ ಮಳವಳ್ಳಿ ಎಂಟ್ರೆನ್ಸ್ ಬಳಿ ಕೂತಿದ್ದೆ. ಎಷ್ಟು ಗಂಟೆಯಾದರೂ ಸತೀಶ್ ಅವರು ಬರಲೇ ಇಲ್ಲ. ಆಗ ನನಗೂ ಕೂಡ ನಾನು ಒಂದಿನ ಮಳವಳ್ಳಿಗೆ ಅತಿಥಿ ಆಗಿ ಬರಬೇಕು ಎಂದು ಆಲೋಚಿಸಿದ್ದೆ, ಕನಸು ಕಂಡಿದ್ದೆ ಎಂದಿದ್ದಾರೆ.
ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಅವರು ಅತಿಥಿ ಆಗಿ ಹೋಗಿದ್ದಾಗಿದೆ. ಆದರೆ ಇಷ್ಟುದಿನದವರೆಗೆ ಒಂದು ಲೆಕ್ಕ, ಇನ್ಮುಂದೆ ಇನ್ನೊಂದು ಲೆಕ್ಕ ಎನ್ನೋ ಥರ ಆಗಿದೆ. ಇನ್ಮುಂದೆ ಗಿಲ್ಲಿ ನಟ ಅವರಿಗೆ ಹೋಗೋಕೆ ಆಗೋದಿಲ್ಲ, ಅಷ್ಟರಮಟ್ಟಿಗೆ ಕಾರ್ಯಕ್ರಮಗಳ ಆಹ್ವಾನಗಳು ಬರುವುದರಲ್ಲಿ ಯಾವುದೇ ಡೌಟ್ ಇಲ್ಲ.
ಇನ್‌ಸ್ಟಾಗ್ರಾಮ್ ಫಾಲೋವರ್ಸ್
ಬಿಗ್ ಬಾಸ್ ಮನೆಯಲ್ಲಿದ್ದ ಗಿಲ್ಲಿ ನಟ ಅವರು ಒಂದು ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಆದರೆ ಎಂದು ಕಾವ್ಯ ಶೈವ ಬಳಿ ಹೇಳಿದ್ದುಂಟು. ಆಗಾಗ ಅವರು ಇದನ್ನು ಹೇಳಿದ್ದಾರೆ. ಅದರಂತೆ ಈಗ ಒಂದೂವರೆ ಮಿಲಿಯನ್ ಫಾಲೋವರ್ಸ್ ಕೂಡ ಇದ್ದಾರೆ.
ಬಟ್ಟೆ ಅಷ್ಟು ಇರಲಿಲ್ಲ
ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಎಲ್ಲರೂ ಡಿಸೈನರ್ ಬಟ್ಟೆಗಳನ್ನು ಹಾಕುತ್ತಿದ್ದರು. ಗಿಲ್ಲಿ ಅವರಿಗೆ ಅಷ್ಟು ಬಟ್ಟೆ ಇರಲಿಲ್ಲ. ಅವರು ಬೇರೆ ಸ್ಪರ್ಧಿಗಳ ಬಟ್ಟೆ ಕೇಳಿದ್ದರು. ಕೆಲವು ವಾರಗಳಿಂದ ಅವರಿಗೆ ಹಾಕೋಕೆ ಆಗುತ್ತಿಲ್ಲ, ಅಷ್ಟರ ಮಟ್ಟಿಗೆ ಅವರಿಗೆ ಪ್ರೀತಿಯಿಂದ ಕೆಲವರು ಬಟ್ಟೆ, ಶೂಗಳನ್ನು ಕಳಿಸಿಕೊಡುತ್ತಿದ್ದಾರೆ.
ಜನರ ಪ್ರೀತಿ
ಮನಿ ಇವತ್ತು ಇರಬಹುದು, ಅಭಿಮಾನಿ ಎಲ್ಲೂ ಹೋಗೋದಿಲ್ಲ ಎಂದು ಗಿಲ್ಲಿ ಹೇಳುತ್ತಿರುತ್ತಾರೆ. ಅದರಂತೆ ಇಂದು ಅವರನ್ನು ದೊಡ್ಡ ಮಟ್ಟದಲ್ಲಿ ಜನರು ಇಷ್ಟಪಟ್ಟಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಈ ರೀತಿ ಕ್ರೇಜ್ ಯಾರಿಗೂ ಇರಲಿಲ್ಲ. ಗಿಲ್ಲಿ ಫೋಟೋವನ್ನು ಕೈಮೇಲೆ ಹಾಕಿಸಿಕೊಂಡವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ.
ಸಿನಿಮಾ ಮಾಡೋ ಹುಚ್ಚು
ಗಿಲ್ಲಿ ನಟನಿಗೆ ಸಿನಿಮಾ ಹುಚ್ಚಿದೆ. ಈಗ ಅವರ ಜೊತೆ ಸಿನಿಮಾ ಮಾಡಲು ಕೆಲ ನಿರ್ಮಾಪಕರು ರೆಡಿ ಆಗಿದ್ದಾರೆ. ಇದನ್ನು ಕೆಲವರು ಕ್ಯಾಮರಾ ಮುಂದೆ ಕೂಡ ಹೇಳಿದ್ದುಂಟು.
ಹೇಗೆ ಸಾಧ್ಯ ಆಗ್ತಿದೆ?
ಗಿಲ್ಲಿ ನಟ ಅವರು Manifestation ಮಾಡುತ್ತಿದ್ದಾರೆ. ಹೌದು, ಏನಾಗಬೇಕು ಎಂದು ಕನಸು ಇರುತ್ತದೆಯೋ, ಅದನ್ನು ಅವರು ಮನಸ್ಸಿಟ್ಟು ಬಯಸುತ್ತಿದ್ದಾರೆ, ಕನಸು ಕಾಣುತ್ತಿದ್ದಾರೆ, ಆಗಿದೆ ಎಂದು ಅಂದುಕೊಳ್ಳುತ್ತಿದ್ದಾರೆ. ಈ ಪದ್ಧತಿ ಪುರಾಣಕಾಲದಿಂದಲೂ ಬಂದಿದೆ, ಈಗಿನವರು ಇದನ್ನು ಮ್ಯಾನಿಫೆಸ್ಟೇಶನ್ ಎಂದು ಕರೆಯುತ್ತಿದ್ದಾರೆ ಅಷ್ಟೇ.
ಕನಸು ಕಾಣೋದು ಒಂದೇ ಅಲ್ಲ, ಗಿಲ್ಲಿ ನಟ ಅವರು ಅದನ್ನು ಸಾಕಾರಗೊಳಿಸುವಲ್ಲಿ ಅವರು ಕೆಲಸ ಕೂಡ ಮಾಡುತ್ತಾರೆ. ಗಿಲ್ಲಿ ನಟ ಅವರು ಈಗಾಗಲೇ ಸಾಕಷ್ಟು ಕಷ್ಟಪಟ್ಟಿದ್ದಾರೆ, ಇದಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಮ್ಯಾನಿಫೆಸ್ಟೇಶನ್ ಎನ್ನೋದನ್ನು ಗಿಲ್ಲಿ ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಗಿಲ್ಲಿ ಯೋಚನೆಗಳೇ ಮ್ಯಾನಿಫೆಸ್ಟೇಶನ್ ಆಗಿವೆ.


