ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸರ್ಕಾರದ ಅನುಮತಿ,, ಕಾಲ್ತುಳಿತದಿಂದ ಸ್ಥಗಿತಗೊಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಮರು ಜೀವ ಸಿಕ್ಕಿದೆ. ಸರ್ಕಾರ ಇದೀಗ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅನುಮತಿ ನೀಡಿದೆ.
ಬೆಂಗಳೂರು (ಜ.17) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಆರ್‌ಸಿಬಿ ಪಂದ್ಯಗಳು, ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಹಲವು ಮಾರ್ಪಟುಗಳೊಂದಿಗೆ ಪಂದ್ಯ ಆಯೋಜನೆಗೆ ಸರ್ಕಾರ ಅಧಿಕೃತ ಆದೇಶ ನೀಡಿದೆ. ಗೃಹ ಸಚಿವ ಪರಮೇಶ್ವರ್ ನೇಮಿಸಿದ ಸಮಿತಿ ನೀಡಿದ ವರದಿ ಆಧರಿಸಿ ಸರ್ಕಾರ ಪಂದ್ಯ ಆಯೋಜನೆಗೆ ಅನುಮತಿ ನೀಡಿದೆ. ಇದೇ ವೇಳೆ ಅಭಿಮಾನಿಗಳು, ಆಟಗಾರರು, ಸಿಬ್ಬಂದಿಗಳ ಸುರಕ್ಷತೆಗೆ ಮಾಡಬೇಕಾದ ಮಾರ್ಪಟುಗಳ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಆದೇಶ ನೀಡಿದೆ. ಸರ್ಕಾರ ಷರತ್ತುಗಳಿಗೆ ಒಪ್ಪಿಕೊಂಡಿರುವ ರಾಜ್ಯ ಕ್ರಿಕೆಟ್ ಸಂಸ್ಥೆ ಸುರಕ್ಷತಾ ಕ್ರಮಗಳು ಕೈಗೊಳ್ಳುವ ಬಗ್ಗೆ ತಯಾರಿ ಆರಂಭಿಸಿದೆ.
ಸರ್ಕಾರದ ಸಮಿತಿಯಿಂದ ಗ್ರೀನ್ ಸಿಗ್ನಲ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲು ವೆಂಕಟೇಶ್ ಪ್ರಸಾದ್ ನೇತೃತ್ವದ ರಾಜ್ಯ ಕ್ರಿಕೆಟ್ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿತ್ತು. ಇದರಂತೆ ಸರ್ಕಾರ ಸಮಿತಿಯನ್ನು ನೇಮಕ ಮಾಡಿತ್ತು. ಪಂದ್ಯ ಆಯೋಜನೆ ಸಾಧಕ ಬಾಧಕ ಕುರಿತು ವರದಿ ನೀಡುವಂತೆ ಸೂಚಿಸಲಾಗಿತ್ತು. ಇದರಂತೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಅವರಧಿ ಆಧರಿಸಿ ಸರ್ಕಾರ ಅನುಮತಿ ನೀಡಿದೆ.
ಆರಂಭಿಕ ಹಂತದಲ್ಲಿ 5 ಪಂದ್ಯಗಳಿಗೆ ಅನುಮತಿ
ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ವರದಿಯಲ್ಲಿನ ಅಂಶಗಳನ್ನು ಜಾರಿಗೊಳಿಸಿ ಪಂದ್ಯ ನಡೆಸಲು ಅನುಮತಿ ನೀಡಲಾಗಿದೆ. ಸ್ಟೇಡಿಯಂನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಪಂದ್ಯಾವಳಿ ನಡೆಸಲು ಕಮಿಟಿ ಸೂಚಿಸಿದೆ. ಸದ್ಯಕ್ಕೆ 5 ಪಂದ್ಯಗಳಿಗೆ ಅನುಮತಿ ನೀಡಿದ ಉನ್ನತ ಸಮಿತಿ ಸೂಚಿಸಿದೆ. ಗೃಹ ಸಚಿವ ಪರಮೇಶ್ವರ್ ರಚಿಸಿದ್ದ ಸಮಿತಿಯಲ್ಲಿ ಗೃಹ ಸಚಿವರು,ಪೊಲೀಸ್ ಅಧಿಕಾರಿಗಳು, PWD, ಅಗ್ನಿಶಾಮಕ ದಳ ಅಧಿಕಾರಿಗಳು ಒಳಗೊಂಡಿದ್ದರು.
ವರದಿ ಆಧಾರಿಸಿ ಐಪಿಎಲ್ ಮ್ಯಾಚ್ ನಡೆಸಲು ಗೃಹ ಇಖಾಲೆ ಕೆಎಸ್ ಸಿಎ ಗೆ ಅನುಮತಿ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡುವ ಕುರಿತು ಸರ್ಕಾರದ ತಜ್ಞರ ಸಮಿತಿಯು ನೀಡಲಾದ ಸೂಚನೆಗಳಂತೆ ಹಾಗೂ ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನಯ ಬೆಂಗಳೂರಿನ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ವಿವರಿಸಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಹಾಗೂ ಮಾರ್ಚ್ ಜುಲೈ 2026 ರಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಷರತ್ತುಬದ್ಧ ಅನುಮತಿಯನ್ನು ನೀಡುವಂತೆ ಉಲ್ಲೇಖ(1)ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಹೋರಿರುತ್ತದೆ. ಅದರಂತೆ ಉಲ್ಲೇಖ(2)ರಲ್ಲಿನ ಸರ್ಕಾರದ ಆದೇಶ ಮತ್ತು ಪತ್ರಗಳನ್ನಯ ರಚಿಸಲಾದ ತಜ್ಞರ ಸಮಿತಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ತೆಗೆದುಕೊಂಡಿರುವ ಕ್ರಮಗಳು ಹಾಗೂ ಅನುಪಾಲನೆ ವಿಧಾನವನ್ನು ಅವಲೋಕಿಸಿ ಸದರಿ ಕ್ರೀಡಾಂಗಣದಲ್ಲಿ ಸಂಸ್ಥೆಯು ಮಾಡುವ ಪ್ರಗತಿಯನ್ನು ಸತತವಾಗಿ ಮೇಲುಸ್ತುವಾರಿ ಮಾಡುವ ಷರತ್ನಿಗೊಳಪಡಿಸಿ ಅನುಮತಿ ನೀಡುವ ಬಗ್ಗೆ, ಕಾಲೇಖಟಾರ ಪತ್ರದಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿರುತ್ತದೆ. ತಜ್ಞರ ಸಮಿತಿಯು ಮಾಡಿರುವ ಶಿಫಾರಸನ್ನು ಗಮನದಲ್ಲಿರಿಸಿಕೊಂಡು ಸಮಿತಿಯು ಸೂಚಿಸಿರುವ ಎಲ್ಲಾ ಕಾಮಗಾರಿಗಳು ಹಾಗೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದೆ. ಇದರಂತೆ ಪಂದ್ಯ ಆಯೋಜನೆಗೆ ಷರತ್ತುಬದ್ದ ಅನುಮತಿ ನೀಡಲು ನಿರ್ದೇಶ ನೀಡಲಾಗಿದೆ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.


