ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ಪವಿತ್ರಾ ಗೌಡಗೆ ಕೋರ್ಟ್ ಅನುಮತಿ ನೀಡಿದರೂ ಮನೆಯೂಟ ಸಿಗುತ್ತಿಲ್ಲ. ಜೈಲಾಧಿಕಾರಿಗಳು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸಿದ್ದು, ಪವಿತ್ರಾ ಜೈಲಿನಲ್ಲೇ ಪರದಾಡುವಂತಾಗಿದೆ.  

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ-1 ಆಗಿರೋ ನಟಿ ಪವಿತ್ರಾ ಗೌಡಗೆ ಮನೆ ಊಟ ನೀಡೋದಕ್ಕೆ ಕೋರ್ಟ್ ಅಸ್ತು ಅಂದಿತ್ತು. ಆದ್ರೆ ಕೋರ್ಟ್ ಆದೇಶ ಕೊಟ್ರು ಪವಿತ್ರಾಗೆ ಮನೆಯೂಟ ಸಿಕ್ತಾ ಇಲ್ಲ. ದಿನವೂ ಮನೆಯಿಂದ ಊಟ ಬಂದರೂ ಅದು ಪವಿತ್ರಾ ತಟ್ಟೆಗೆ ಬರ್ತಾ ಇಲ್ಲ. ತುತ್ತು ಅನ್ನ ತಿನ್ನೋಕೆ ಪವಿತ್ರಾ ಪರದಾಡುವಂತೆ ಆಗಿದೆ.

ದಿಂಬು ಕೊಡಿ ಒರಗೋಕೆ ದಾಸನ ಒದ್ದಾಟ

ಯೆಸ್ ರೇಣುಕಾಸ್ವಾಮಿ ಕೊಲೆ ಕೇಸ್ ಎ-1 ಅಂಡ್ ಎ-2 ಆಗಿರೋ ಪವಿತ್ರಾ ಗೌಡ ಮತ್ತು ದರ್ಶನ್​ರ ಜೈಲು ಪರದಾಟ ಮುಂದುವರೆದಿದೆ. ದಿಂಬು, ಹಾಸಿಗೆಗೋಸ್ಕರ ದರ್ಶನ್ ಕೋರ್ಟ್ ಕಟಕಟೆಯಲ್ಲಿ ಪದೇ ಪದೇ ವಿನಂತಿ ಮಾಡಿದ್ದು ಗೊತ್ತೇ ಇದೆ. ಚಳಿ ತಡೆಯೋದಕ್ಕೆ ಆಗ್ತಿಲ್ಲ ಮನೆಯಿಂದ ತಂದ ಕಂಬಳಿ ಕೊಡಿ ಅಂತ ದರ್ಶನ್ ವಕೀಲರ ಮೂಲಕ ಪದೇ ಪದೇ ಮನವಿ ಮಾಡಿಸಿದ್ರು. ಇತ್ತ ಪರಪ್ಪನ ಅಗ್ರಹಾರ ಮಹಿಳಾ ಬ್ಯಾರಕ್‌ನಲ್ಲಿರೋ ಪವಿತ್ರಾದು ಕೂಡ ಅದೇ ಕಥೆ ಆಗಿದೆ. ಈ ಹಿಂದೆ ಪವಿತ್ರಾ ಪರ ವಕೀಲರು ಪವಿತ್ರಾಗೆ ಮನೆಯೂಟ ಕೊಡಿಸಿ ಅಂತ ಮನವಿ ಮಾಡಿದ್ರು. ಅದಕ್ಕೆ ಕೋರ್ಟ್ ಅಸ್ತು ಅಂದಿತ್ತು. ಆದ್ರೆ ಇದೂವರೆಗೂ ಪವಿತ್ರಾಗೆ ಮನೆಯೂಟ ದಕ್ಕಿಲ್ಲ.

ದಿನವೂ ಬರುತ್ತೆ ಪವಿತ್ರಾ ಮನೆಯಿಂದ ಊಟ..!

ಹೌದು ಕೋರ್ಟ್ ಅನುಮತಿ ಕೊಟ್ಟ ಮೇಲೆ ಪವಿತ್ರಾಗೆ ದಿನವೂ ಮನೆಯಿಂದ ಊಟ ಬರ್ತಾ ಇದೆ. ಆದ್ರೆ ಜೈಲು ಅಧಿಕಾರಿಗಳು ಇದೂವರೆಗೂ ಮನೆಯೂಟಕ್ಕೆ ಅನುಮತಿ ಕೊಡದ ಹಿನ್ನೆಲೆ ಪವಿತ್ರಾಗೆ ಜೈಲೂಟವೇ ಗತಿಯಾಗಿದೆ. ಮನೆ ಊಟ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಜೈಲಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆಗಳನ್ನ ಮಾಡಲಾಗಿದೆ. ಜೈಲು ಅಧಿಕಾರಿಗಳಿಂದ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಜೈಲಿನಲ್ಲಿ ಒಬ್ಬರಿಗೆ ಮನೆಯೂಟ ಕೊಟ್ರೆ ಎಲ್ಲರೂ ಇದೇ ಆದೇಶ ತರಲು ಆರಂಭಿಸ್ತಾರೆ. ಮನೆಯಿಂದ ಬರುವ ಊಟ ಪರೀಕ್ಷೆ ಮಾಡಿ ಕೈದಿಗಳಿಗೆ ಕೊಡೋದು ದೊಡ್ಡ ಚಾಲೆಂಜ್ ಆಗುತ್ತೆ. ಜೈಲ್ಲಿನಲ್ಲಿ ಅಷ್ಟೊಂದು ಸಿಬ್ಬಂದಿ ಇಲ್ಲದ ಕಾರಣ ಯಾರಿಗೂ ಮನೆಯೂಟ ಬೇಡ ಅಂತ ಜೈಲಾಧಿಕಾರಿಗಳು ತೀರ್ಮಾನ ಮಾಡಿದ್ದಾರಂತೆ.

ಇತ್ತ ದರ್ಶನ್ ಪಾಡೂ ಅಷ್ಟೇ. ಮನೆಯಿಂದ ಕಳಿಸಿದ ಬ್ಲಾಂಕೆಟ್ ಬದಲು ಜೈಲಲ್ಲಿ ಎಲ್ಲರಿಗೂ ಕೊಡುವ ಬ್ಲಾಂಕೆಂಟ್ ಅನ್ನೇ ದಾಸನಿಗೆ ನೀಡಲಾಗಿದೆ. ಒಟ್ನಲ್ಲಿ ಹೊರಗೆ ದರ್ಬಾರ್ ಮಾಡಿಕೊಂಡಿದ್ದ ದರ್ಶನ್-ಪವಿತ್ರಾ ಜೈಲಲ್ಲಿ ತುತ್ತು ಅನ್ನ ತಿನ್ನೋಕೆ, ಕಂಬಳಿ ಹೊದೆಯೋಕೆ. ಮತ್ತೆ ಮತ್ತೆ ಕೈಯೊಡ್ಡೋ ಸ್ಥಿತಿ ಬಂದುಬಿಟ್ಟಿದೆ.

  • ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್