- Home
- News
- State
- karnataka news live: ಬಾಗಲಕೋಟೆ - ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಗಾಯಗೊಂಡ ಎಸ್ಪಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ
karnataka news live: ಬಾಗಲಕೋಟೆ - ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಗಾಯಗೊಂಡ ಎಸ್ಪಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ

ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರ ಅನುಕೂಲಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರ ಆರೋಗ್ಯ, ಅಪಘಾತ ಪರಿಹಾರ, ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಪಾವತಿ ಸೇರಿ ಮತ್ತಿತರ ಯೋಜನೆಗಳ ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ -ನಿರ್ದೇಶನದಂತೆ, ಯೋಜನೆಗಳ ಜಾರಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಂಸಘಟಿತ ಕಾರ್ಮಿಕ ಕಲ್ಯಾಣದ ಹೆಚ್ಚುವರಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆ ಕಾರ್ಮಿಕ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾಪ ಮತ್ತು ವಾಣಿಜ್ಯ ತೆರಿಗೆ ಇಲಾಖೆಗೆ ಮನವಿ ಮಾಡಲಾಗಿದೆ.
karnataka news liveಬಾಗಲಕೋಟೆ - ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಗಾಯಗೊಂಡ ಎಸ್ಪಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ
karnataka news liveಕಬ್ಬಿನ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ದೊಣ್ಣೆ ಹಿಡಿದು ಸಾಯಿ ಪ್ರಿಯಾ ಕಾರ್ಖಾನೆ ಕಾವಲಿಗೆ ನಿಂತ ರೈತರು!
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬಿನ ಬಾಕಿ ಮತ್ತು ನ್ಯಾಯಯುತ ಬೆಲೆಗಾಗಿ ಪ್ರತಿಭಟಿಸುತ್ತಿದ್ದ ರೈತರ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿದ್ದು, ಘಟನೆಯಿಂದ ಜಮಖಂಡಿ ಮುಧೋಳ ಭಾಗದ ರೈತರ ನಡುವೆ ಆಕ್ರೋಶ ಭುಗಿಲೆದ್ದಿದೆ.
karnataka news liveವಿಶ್ವದ ಏಕೈಕ ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್ ಖರೀದಿಸಿದ ಟೆಕ್ನಿಕಲ್ ಗುರೂಜಿ
ವಿಶ್ವದ ಏಕೈಕ ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್ ಖರೀದಿಸಿದ ಟೆಕ್ನಿಕಲ್ ಗುರೂಜಿ , ಚಿನ್ನ ಲೇಪಿತ ಈ ಐಫೋನ್ ಹಿಂಭಾಗದಲ್ಲಿ ಶ್ರೀರಾಮ ಹಾಗೂ ಹನುಮಾನ್ ಫೋಟೋ ಫ್ರೇಮ್ ಇದೆ. ಇಷ್ಟೇ ಅಲ್ಲ ಜೈ ಶ್ರೀರಾಮ್ ಎಂದು ಬರೆಯಲಾಗಿದೆ.
karnataka news liveಬೆಂಗಳೂರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ - ಸಫಾರಿ ಬಸ್ ಮೇಲೆ ಚಿರತೆ ಹಠಾತ್ ದಾಳಿ, ಮಹಿಳೆ ಕೈಗೆ ಗಾಯ! ವಿಡಿಯೋ ವೈರಲ್
karnataka news liveಬಾಲಿವುಡ್ ನಟ ಧರ್ಮೇಂದ್ರ ಹೆಲ್ತ್ ಅಪ್‌ಡೇಟ್ ಪ್ರಕರಣ, ಪೊಲೀಸರಿಂದ ಆಸ್ಪತ್ರೆ ಉದ್ಯೋಗಿ ಅರೆಸ್ಟ್
ಬಾಲಿವುಡ್ ನಟ ಧರ್ಮೇಂದ್ರ ಹೆಲ್ತ್ ಅಪ್‌ಡೇಟ್ ಪ್ರಕರಣ, ಪೊಲೀಸರಿಂದ ಆಸ್ಪತ್ರೆ ಉದ್ಯೋಗಿ ಅರೆಸ್ಟ್ , ಅಷ್ಟಕ್ಕೂ ಧರ್ಮೇಂದ್ರ ಆರೋಗ್ಯ ಪ್ರಕರಣಕ್ಕೂ ಆಸ್ಪತ್ರೆ ಸಿಬ್ಬಂದಿ ಅರೆಸ್ಟ್ ಆಗಿದ್ದೇಕೆ? ಈ ಬೆಳವಣಿಗೆಗೆ ಕಾರಣವೇನು?
karnataka news liveಕಾರವಾರ - ಮೆಡಿಕಲ್ ವಿದ್ಯಾರ್ಥಿಗಳ ಬುಲೆಟ್ ಬೈಕ್ ಸ್ಕೂಟಿಗೆ ಡಿಕ್ಕಿ, ಮಗ ಕಣ್ಮುಂದೆ ಸಾವು, ತಾಯಿ ಗಂಭೀರ ಗಾಯ!
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ 15 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಯುವಕನ ತಾಯಿ ಹಾಗೂ ಬುಲೆಟ್ ಸವಾರರಾದ ಮೆಡಿಕಲ್ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
karnataka news liveರೈತ ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಅಡಿಷನಲ್ ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ
ರೈತ ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಅಡಿಷನಲ್ ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ, ರೈತರ ಪ್ರತಿಭಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, 50ಕ್ಕೂ ಹೆಚ್ಚು ಟ್ರಾಕ್ಟರ್ ಬೆಂಕಿಗೆ ಆಹುತಿಯಾಗಿದೆ. ಇತ್ತ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.
karnataka news liveಹಾರ್ನ್ ಮಾಡಿದ್ದಕ್ಕೆ ಟೆಕ್ಕಿಯಿಂದ ಹಿಟ್ ಅಂಡ್ ರನ್, ಆರೋಪಿ ಬಂಧನ, ಸಿಸಿಟೀವಿಲಿ ಶಾಕಿಂಗ್ ದೃಶ್ಯ!
Techie hit and run case ಬೆಂಗಳೂರಿನಲ್ಲಿ ರಸ್ತೆ ಗಲಾಟೆಯಿಂದ ಕುಪಿತಗೊಂಡ ಸಾಫ್ಟ್‌ವೇರ್ ಇಂಜಿನಿಯರ್, ದಂಪತಿ ಹಾಗೂ ಮಗು ಸಂಚರಿಸುತ್ತಿದ್ದ ಬೈಕ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಭಯಾನಕ ಕೃತ್ಯ. ಆತನನ್ನು ಕೊಲೆಯತ್ನ ಪ್ರಕರಣದಡಿ ಬಂಧಿಸಲಾಗಿದೆ.
karnataka news liveಕುಶಾಲನಗರ ಜಾನುವಾರು ಜಾತ್ರೆ - ಕಾರಿನ ಬೆಲೆಯನ್ನು ಮೀರಿಸಿದ ಹಳ್ಳಿಕಾರ್ ಹೋರಿಗಳ ಬೆಲೆ!
ಕುಶಾಲನಗರ ಗಣಪತಿ ರಥೋತ್ಸವದ ಅಂಗವಾಗಿ ನಡೆದ ಜಾನುವಾರು ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹೋರಿಗಳು ಪ್ರದರ್ಶನಗೊಂಡವು. ಮೈಸೂರು, ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ರೈತರು ತಮ್ಮ ಅಮೃತ್ ಮಹಲ್, ಹಳ್ಳಿಕಾರ್ ತಳಿಯ ಹೋರಿಗಳನ್ನು ಪ್ರದರ್ಶಿಸಿದರು.
karnataka news liveಅಬ್ಬಬ್ಬಾ! ಚಾನೆಲ್ ವಿರುದ್ಧವೇ ಗುಡುಗಿದ Bigg Boss ಜಾಹ್ನವಿ - ದೊಡ್ಮನೆಯಲ್ಲಿ ಅಂಥದ್ದೇನಾಯ್ತು ನೋಡಿ!
karnataka news liveನಿಮ್ಮ ಪವರ್ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಪವರ್ ಬ್ಯಾಂಕ್‌ಗಳು ಮೊಬೈಲ್ ಚಾರ್ಜಿಂಗ್‌ಗೆ ಅತ್ಯಗತ್ಯವಾಗಿದ್ದರೂ, ಕೆಲವು ಅಪಾಯಕಾರಿ ಸಂಕೇತಗಳನ್ನು ನೀಡಬಹುದು. ಬ್ಯಾಟರಿ ಊತ, ಅತಿಯಾದ ಬಿಸಿ, ವಾಸನೆ ಅಥವಾ ಔಟ್‌ಪುಟ್ ಸಮಸ್ಯೆಗಳಂತಹ ಚಿಹ್ನೆಗಳು ಕಂಡರೆ, ಅದು ಸ್ಫೋಟದಂತಹ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.ಈ ಲೇಖನದಲ್ಲಿ ವಿವರಿಸಲಾಗಿದೆ.
karnataka news liveಕೈಮೀರಿದ ರೈತ ಪ್ರತಿಭಟನೆ, ಮುಧೋಳದಲ್ಲಿ ಟ್ರಾಕ್ಟರ್‌ಗೆ ಹಚ್ಚಿದ ಬೆಂಕಿಯಿಂದ ನೂರಾರು ಟನ್ ಕಬ್ಬು ನಾಶ
ಕೈಮೀರಿದ ರೈತ ಪ್ರತಿಭಟನೆ, ಮುಧೋಳದಲ್ಲಿ ಟ್ರಾಕ್ಟರ್‌ಗೆ ಹಚ್ಚಿದ ಬೆಂಕಿಯಿಂದ ನೂರಾರು ಟನ್ ಕಬ್ಬು ನಾಶ, ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರ್‌ಗಳಿಗೆ ರೈತರು ಬೆಂಕಿ ಹಚ್ಚಿದ್ದಾರೆ. ಸಮೀರವಾಡಿ ಕಾರ್ಖಾನೆ ಆವರಣದಲ್ಲಿ ಈ ಘಟನೆ ನಡೆದಿದೆ.
karnataka news liveಜೆಡಿಎಸ್‌ನಿಂದ ಶಾಸಕನಾದಾಗ ಕಾಂಗ್ರೆಸ್ ಮುಗಿಸಿದ್ದೆ, ಆ ಸಂದರ್ಭ ಮತ್ತೆ ಬರಬಹುದು, ಸ್ವಪಕ್ಷದ ವಿರುದ್ಧ ರಾಜಣ್ಣ ಮತ್ತೆ ಗುಡುಗು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತುಮಕೂರಿನಲ್ಲಿ ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2004ರಲ್ಲಿ ತಾನು ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ಗೆ 'ವೈಟ್ ವಾಶ್' ಮಾಡಿದ್ದೆ. ಅಂತಹ ಸಂದರ್ಭ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
karnataka news liveಮಧೋಳ ರೈತರ ಕಿಚ್ಚಿಗೆ ಹೊತ್ತಿ ಉರಿದ ಕಬ್ಬು ತುಂಬಿದ ಟ್ರಾಕ್ಟರ್, 20ಕ್ಕೂ ಹೆಚ್ಚು ವಾಹನ ಭಸ್ಮ
ಮಧೋಳ ರೈತರ ಕಿಚ್ಚಿಗೆ ಹೊತ್ತಿ ಉರಿದ ಕಬ್ಬು ತುಂಬಿದ ಟ್ರಾಕ್ಟರ್, 20ಕ್ಕೂ ಹೆಚ್ಚು ವಾಹನ ಭಸ್ಮ, ಸಮೀರವಾಡಿ ಕಬ್ಬು ಕಾರ್ಖಾನೆಯತ್ತ ನೂರಾರು ರೈತರು ನುಗ್ಗಿದ್ದಾರೆ. ಇತ್ತ ಟ್ರಾಕ್ಟರ್ ಹೊತ್ತಿ ಉರಿದಿದೆ.
karnataka news liveBigg Boss ರಕ್ಷಿತಾ ಶೆಟ್ಟಿಯ ಯುಟ್ಯೂಬ್ ಆದಾಯ ಇದೀಗ ರಿವೀಲ್! ಇಷ್ಟು ಸಿಕ್ಕಿದ್ಯಾ?
karnataka news liveಚಿತ್ತಾಪುರ - ಆರೆಸ್ಸೆಸ್‌ಗೆ ಅನುಮತಿ, ನಮಗೇಕಿಲ್ಲ? ಅದೇ ದಿನ ಸೇರುತ್ತೇವೆ ಎಂದ ಭೀಮ್ ಅರ್ಮಿ!
ಕಲಬುರಗಿ ಹೈಕೋರ್ಟ್‌ನಿಂದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಸಿಕ್ಕ ಬೆನ್ನಲ್ಲೇ, ಇದೇ ದಿನದಂದು ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಭೀಮ್ ಆರ್ಮಿ ಸಂಘಟನೆ ಪಟ್ಟು ಹಿಡಿದಿದೆ. ಅನುಮತಿ ಸಿಗದಿದ್ದರೂ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.
karnataka news liveಡೆಮೋ ರೀತಿ ಲಿಂಗ ಬೇಕಾ? ವರ್ಕಿಂಗ್ ರೀತಿ ಬೇಕಾ? ಆಪರೇಷನ್ನ ಶಾಕಿಂಗ್ ಮಾಹಿತಿ ಕೊಟ್ಟ transgender
ತೃತೀಯ ಲಿಂಗಿಯರು ಲಿಂಗ ಪರಿವರ್ತನೆಗೆ ಒಳಗಾಗುವಾಗ ಎದುರಿಸುವ ಸವಾಲುಗಳನ್ನು ಈ ಲೇಖನ ವಿವರಿಸುತ್ತದೆ. ಈ ಶಸ್ತ್ರಚಿಕಿತ್ಸೆಯು ಅತ್ಯಂತ ದುಬಾರಿ ಮತ್ತು ನೋವಿನಿಂದ ಕೂಡಿದ್ದು, ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಅವರು ಅನುಭವಿಸುವ ಸಂಕಷ್ಟಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.
karnataka news live'ಕಾಂಗ್ರೆಸ್‌ನವ್ರಿಗೆ ಸ್ವಲ್ಪವೂ ಮಾನ-ಮಾರ್ಯಾದೆ ಅನ್ನೋದೇ ಇಲ್ಲ' ದೆಹಲಿ ಸ್ಫೋಟದ ಬಗ್ಗೆ ರಾಯರಡ್ಡಿ ಹೇಳಿಕೆಗೆ ಕೆರಳಿದ ಶ್ರೀರಾಮುಲು -
ದೆಹಲಿ ಸ್ಪೋಟದ ಕುರಿತ ಬಸವರಾಜ ರಾಯರಡ್ಡಿ ಅವರ ಹೇಳಿಕೆಗೆ ಮಾಜಿ ಸಚಿವ ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ಗಮನಹರಿಸುವಂತೆ ಕಾಂಗ್ರೆಸ್‌ಗೆ ಸವಾಲು.
karnataka news liveದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ - ತುಮಕೂರಿನಲ್ಲಿ ಶಂಕಿತನ ವಿಚಾರಣೆ, ಯಾರು ಈ ಮುಜಾಯುದ್ದೀನ್?
ದೆಹಲಿಯ ಕೆಂಪುಕೋಟೆ ಬಳಿಯ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಮುಜಾಯುದ್ದೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಿಂದೆ 'ಕಲಿಫತ್' ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಈತನಿಗೆ, ಪ್ರಸ್ತುತ ಸ್ಫೋಟ ಸಂಬಂಧ ವಿಚಾರಣೆ ನಡೆಸಿ ಬಿಟ್ಟುಕಳಿಸಲಾಗಿದೆ.