ವಿಶ್ವದ ಏಕೈಕ ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಅನಾವರಣ ಮಾಡಿದ ಟೆಕ್ನಿಕಲ್ ಗುರೂಜಿ , ಚಿನ್ನ ಲೇಪಿತ ಈ ಐಫೋನ್‌ ಹಿಂಭಾಗದಲ್ಲಿ ಶ್ರೀರಾಮ ಹಾಗೂ ಹನುಮಾನ್ ಫೋಟೋ ಫ್ರೇಮ್ ಇದೆ. ಇಷ್ಟೇ ಅಲ್ಲ ಜೈ ಶ್ರೀರಾಮ್ ಎಂದು ಬರೆಯಲಾಗಿದೆ.

ನವದೆಹಲಿ (ನ.13) ಆ್ಯಪಲ್ ಐಫೋನ್ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಅತ್ಯಂತ ಬೇಡಿಕೆಯ ಫೋನ್. ಹೀಗಾಗಿ ಪ್ರತಿ ಸೀರಿಸ್ ಬಿಡುಗಡೆಯಾದಾಗಲೂ ಜನ ಸರದಿ ಸಾಲಿನಲ್ಲಿ ನಿಂತು ಖರೀದಿಸುತ್ತಾರೆ. ಬೆಲೆ ಲಕ್ಷ ರೂಪಾಯಿ ದಾಟಿದ್ದರೂ ಬಹುತೇಕರು ಐಫೋನ್ ಬಯಸುತ್ತಾರೆ. ವಿಶೇಷ ಅಂದರೆ ಇದೇ ಆ್ಯಪಲ್ ಐಫೋನ್ ಭಾರತೀಯರಿಗೆ ಅತ್ಯಂತ ಸ್ಪೆಷಲ್ ಎಡಿಶನ್ ಫೋನ ಒಂದನ್ನು ಲಾಂಚ್ ಮಾಡಿದೆ. ಇದು ಜೈ ಶ್ರೀರಾಮ್ ಎಡಿಶನ್. ಆದರೆ ಇದು ಕೇವಲ ಒಂದೇ ಒಂದು ಫೋನ್ ಮಾತ್ರ ಲಭ್ಯವಿದೆ. ಈ ಫೋನ್‌ನ್ನು ಯೂಟ್ಯೂಬರ್ ಟೆಕ್ನಿಕಲ್ ಗೂರೂಜಿ ಖರೀದಿಸಿ ಅನಾವರಣ ಮಾಡಿದ್ದಾರೆ. ವಿಶೇಷ ಅಂದರೆ ಟೆಕ್ನಿಕಲ್ ಗೂರೂಜಿ ಗೌರವ್ ಚೌಧರಿ ಕಸ್ಟಮೈಸ್ ಸೂಚಿಸಿ ತಯಾರಿಸಿದ ಫೋನ್ ಇದಾಗಿದೆ.

ಜೈಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್

ಐಫೋನ್ 17 ಪ್ರೋ ಮ್ಯಾಕ್ಸ್ ಫೋನ್ ಕಸ್ಟಮೈಸ್ ಮಾಡಿಸಲಾಗಿದೆ. ಖುದ್ದು ಐಫೋನ್ ಇದನ್ನು ತಿಂಗಳುಕಾಲ ತೆಗೆದುಕೊಂಡು ಉತ್ಪಾದನೆ ಮಾಡಿದೆ. ಚಿನ್ನ ಲೇಪಿತ ಫೋನ್ ಮಾತ್ರವಲ್ಲ, ಶ್ರೀರಾಮ ಹಾಗೂ ಹನುಮಾನ ಅಪ್ಪುಗೆಯ ಫೋಟೋ, ಕ್ಯಾಮೆರಾ ಇರುವ ಭಾಗದಲ್ಲಿ ಜೈ ಶ್ರೀರಾಮ್ ಎಂದು ಬರೆಯಾಗಿದೆ. ಜೊತೆಗೆ ಕೆಳ ಭಾಗದಲ್ಲಿ ರಾಮಾಯಣ ಶ್ಲೋಕವನ್ನು ಬರೆಯಲಾಗಿದೆ. ಅದ್ಭುತ ಹಾಗೂ ಅತ್ಯಾಕರ್ಷಕ ಈ ಫೋನ್‌ನ್ನು ಗೌರವ್ ಚೌಧರಿ ಅನ್‌ಬಾಕ್ಸ್ ಮಾಡಿದ್ದಾರೆ. ಭಗವಾ ಧ್ವಜ ಬಣ್ಣದಲ್ಲೇ ಜೈ ಶ್ರೀರಾಮ್ ಬರೆಯಾಗಿದೆ.

ಇದರ ಬೆಲೆ ಎಷ್ಟು?

ಈ ಸ್ಪೆಷಲ್ ಎಡಿಶನ್ ಫೋನ್ ಬೆಲೆ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. ಅನ್‌ಬಾಕ್ಸ್ ವೇಳೆ ಫೋನ್ ವಿಶೇಷತೆ, ಇತರ ಐಫೋನ್ 17 ಪ್ರೋ ಮ್ಯಾಕ್ಸ್ ಹಾಗೂ ಜೈ ಶ್ರೀರಾಮ್ ಎಡಿಶನ್ ಫೋನ್‌ನಲ್ಲಿರುವ ಬಾಹ್ಯ ಬದಲಾವಣೆಗಳ ಕುರಿತು ಗೌರವ್ ವಿವರಿಸಿದ್ದಾರೆ. ಆದರೆ ಇದರ ಬೆಲೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಅತೀ ದುಬಾರಿ ಮೌಲ್ಯದ ಫೋನ್ ಎಂದು ಹೇಳಲಾಗುತ್ತಿದೆ. ಚಿನ್ನ ಲೇಪಿತ ಕಾರಣ ಇದರ ಬೆಲೆ ದುಬಾರಿಯಾಗಿದೆ.

ಹ್ಯಾಂಡ್ ಕ್ರಾಫ್ಟ್ ಫೋನ್

ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್ ಫೋನ್ ಕವರ್ ಸಂಪೂರ್ಣವಾಗಿ ಹ್ಯಾಂಡ್ ಕ್ರಾಫ್ಟ್. ಕೈಗಳಿಂದಲೇ ಈ ಫೋನ್ ಕವರ್ ತಯಾರಿಸಲಾಗಿದೆ. ಫೋನ್ ಬಟನ್‌ಗಳನ್ನೂ ಬದಲಿಸಲಾಗಿದೆ. ವಿಶೇಷ ಅಂದರೆ ಇದು ಕೇವಲ ಒಂದೇ ಒಂದು ಫೋನ್ ಉತ್ಪಾದನೆ ಮಾಡಲಾಗಿದೆ.

View post on Instagram