- Home
- Entertainment
- TV Talk
- ಅಬ್ಬಬ್ಬಾ! ಚಾನೆಲ್ ವಿರುದ್ಧವೇ ಗುಡುಗಿದ Bigg Boss ಜಾಹ್ನವಿ: ದೊಡ್ಮನೆಯಲ್ಲಿ ಅಂಥದ್ದೇನಾಯ್ತು ನೋಡಿ!
ಅಬ್ಬಬ್ಬಾ! ಚಾನೆಲ್ ವಿರುದ್ಧವೇ ಗುಡುಗಿದ Bigg Boss ಜಾಹ್ನವಿ: ದೊಡ್ಮನೆಯಲ್ಲಿ ಅಂಥದ್ದೇನಾಯ್ತು ನೋಡಿ!
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಜಾಹ್ನವಿ, ವಾಹಿನಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸ್ಪಂದನಾ ಸೋಮಣ್ಣ ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವೀಕ್ಷಕರ ವೋಟ್ ಇಲ್ಲದೆ ವಾಹಿನಿಯೇ ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದು, ಈ ಹೇಳಿಕೆಯು ಇದೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಜಾಹ್ನವಿ ಆರೋಪ
ಬಿಗ್ಬಾಸ್ (Bigg Boss) ಮನೆಯಲ್ಲಿ, ಜಾಹ್ನವಿ ಅವರು ಮಾಡಿರುವ ಆರೋಪ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ. ನಿರೂಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿರೋ ಜಾಹ್ನವಿ ಅವರು ತಮ್ಮ ಪರ್ಸನಲ್ ಲೈಫ್ನಿಂದ ಭಾರಿ ಹಲ್ಚಲ್ ಸೃಷ್ಟಿಸಿದವರು. ಪತಿಗೆ ಡಿವೋರ್ಸ್ ಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಅವರು ನೀಡಿರೋ ಹೇಳಿಕೆ, ಬಳಿಕ ಇವರ ವಿರುದ್ಧ ಪತಿ ಮೀಡಿಯಾಗಳಲ್ಲಿ ಮಾಡಿರುವ ವೈಯಕ್ತಿಯ ನಿಂದನೆ ಎಲ್ಲವೂ ಭಾರಿ ಸುದ್ದಿಯಾಗುತ್ತಲೇ ಇದೀಗ ತಣ್ಣಗಾಗಿದೆ.
ಮತ್ತೊಂದು ವಿವಾದ
ಈ ಸುದ್ದಿ ತಣ್ಣಗಾಗುವ ನಡುವೆಯೇ, ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಜಾಹ್ನವಿ. ಬಿಗ್ಬಾಸ್ನಲ್ಲಿ ಅವಕಾಶ ಕೊಟ್ಟಿರೋ ಚಾನೆಲ್ ವಿರುದ್ಧವೇ ಅವರು ಇದೀಗ ಗಂಭೀರ ಆರೋಪ ಮಾಡಿರುವುದು ವೀಕ್ಷಕರ ಕೆಂಗಣ್ಣಿಗೂ ಗುರಿಯಾಗಿದೆ!
ಸೇವ್ ಮಾಡಲಾಗ್ತಿದೆ
ಅಷ್ಟಕ್ಕೂ ಆಗಿದ್ದು ಏನೆಂದರೆ, ತಮ್ಮ ದೃಷ್ಟಿಯಲ್ಲಿ ಯಾರು ಎಲಿಮಿನೇಟ್ ಆಗಬೇಕಿತ್ತೋ ಅವರು ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನುವುದು ಜಾಹ್ನವಿ ಅವರ ಆರೋಪ. ಅವರನ್ನು ವಾಹಿನಿಯೇ ಸೇವ್ ಮಾಡುತ್ತಿದೆ ಎಂದು ಮಾತನಾಡಿದ್ದಾರೆ! ಅದರಲ್ಲಿಯೂ ಸ್ಪಂದನಾ ಸೋಮಣ್ಣ, ಸೂರಜ್ ಹಾಗೂ ರಾಶಿಕಾ ಎಲ್ಲರನ್ನೂ ಸೇವ್ ಮಾಡಲಾಗುತ್ತಿದೆ ಎನ್ನುವುದು ಅವರ ಆರೋಪವಾಗಿದೆ!
ವೀಕ್ ಅವಳು
ಪ್ರತಿವಾರವೂ ಎಲಿಮಿನೇಷನ್ ನಡೆಯುತ್ತದೆ. ವೀಕ್ಷಕರು ಹಾಕುವ ವೋಟ್‌ಗಳ ಆಧಾರದ ಮೇಲೆ ಇದು ನಡೆಯುತ್ತದೆ ಎನ್ನುತ್ತದೆ ಬಿಗ್ಬಾಸ್. ಎಲಿಮಿನೇಷನ್ ಪ್ರೊಸೀಜರ್ ಹೇಗೆ ಇರುತ್ತದೆ ಎನ್ನುವುದು ಅಲ್ಲಿರುವ ಸ್ಪರ್ಧಿಗಳಿಗೂ ಅರ್ಥವಾಗಿರುತ್ತದೆ. ಆದರೆ ತಾವು ಅಂದುಕೊಂಡಿರುವ ಸ್ಪರ್ಧಿಗಳು ಹೊರಕ್ಕೆ ಹೋಗುತ್ತಿಲ್ಲ ಎನ್ನುವುದೇ ಜಾಹ್ನವಿ ಅವರಿಗೆ ಇರುವ ನೋವು. ಅದನ್ನು ವಾಹಿನಿಯ ಮೇಲೆ ಎತ್ತಾಕಿದ್ದಾರೆ!
ಸ್ಪಂದನಾ ಮೇಲೆ ಕಣ್ಣು
ಅದರಲ್ಲಿಯೂ ಜಾಹ್ನವಿಯ ಕಣ್ಣು ಇರುವುದು ಸ್ಪಂದನಾ ಅವರ ಮೇಲೆ. ಸ್ಪಂದನಾ ಅವರು ವೀಕ್ ಸ್ಪರ್ಧಿಯಾಗಿದ್ದರೂ ಚಾನೆಲ್ ಕಡೆಯವರು ಎನ್ನುವ ಕಾರಣಕ್ಕೆ ಆಕೆಯನ್ನು ಸೇವ್ ಮಾಡಲಾಗುತ್ತಿದೆ ಎನ್ನುವುದು ಅವರ ಆರೋಪ. ಇದನ್ನು ಅವರ ಮಾತಿನಲ್ಲಿಯೇ ಹೇಳುವುದಾದರೆ, ಅವಳಿಗೆ ಮಾತಾಡೋಕೆ ಬರಲ್ಲ. ಟಾಸ್ಕ್‌ನಲ್ಲೂ ಇಲ್ಲ. ಆದರೂ ಪ್ರತಿಬಾರಿ ಸೇವ್ ಆಗುತ್ತಿದ್ದಾಳೆ. ಅದಕ್ಕೆ ಕಾರಣ, ಆಕೆ ಚಾನೆಲ್ ಕಡೆಯವಳು. ಅದಕ್ಕಾಗಿ ಉಳಿಸಿಕೊಳ್ತಿದ್ದಾರೆ ಎಂದಿದ್ದಾರೆ!
ಸೂರಜ್ ಎಚ್ಚರ
ಈ ಸಂದರ್ಭದಲ್ಲಿ ಸೂರಜ್ ಜಾಹ್ನವಿ ಅವರನ್ನು ಎಚ್ಚರಿಸಿದರು ಕೂಡ. ನಿಮ್ಮ ಹಳ್ಳ ನೀವೇ ತೋಡಿಕೊಳ್ಳಬೇಡಿ ಎಂದರು ಕೂಡ. ಆದರೆ ಜಾಹ್ನವಿ ಗರಂ ಆಗಿದ್ದರು. ಅವರ ಆರೋಪ ಮುಂದುವರೆದಿತ್ತು.
ಪರ-ವಿರೋಧ ಚರ್ಚೆ
ಇದೀಗ ಈ ವಿಷಯ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಜಾಹ್ನವಿ ಹೀಗೆಲ್ಲಾ ಹೇಳಬಾರದಿತ್ತು. ಇಲ್ಲಿ ಏನಿದ್ದರೂ ನಡೆಯುವುದು ಜನರ ವೋಟಿಂಗ್ ಮೇಲೆ ಎಂದು ಹಲವರು ಈಕೆಯ ವಿರುದ್ಧ ಮಾತನಾಡಿದರೆ, ಕನ್ನಡ ಸ್ಪರ್ಧಿಗಳ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದೆಯಾ ಎಂದು ಮತ್ತೆ ಕೆಲವರು ಸಂದೇಹವನ್ನೂ ವ್ಯಕ್ತಪಡಿಸುತ್ತಿದ್ದಾರೆ.