ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಸಫಾರಿ ವೇಳೆ ಚಿರತೆಯೊಂದು ಸಫಾರಿ ಬಸ್ ಮೇಲೆ ಹಾರಿ ದಾಳಿ ಮಾಡಿದೆ. ಈ ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು (ನ.13): ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಗುರುವಾರ ಮಧ್ಯಾಹ್ನ ವನ್ಯಜೀವಿ ಸಫಾರಿ ವೇಳೆ ಅನಿರೀಕ್ಷಿತ, ಘಟನೆ ಸಂಭವಿಸಿದ್ದು, ಚಿರತೆಯೊಂದು ಸಫಾರಿ ಬಸ್ ಮೇಲೆ ಹಾರಿ ದಾಳಿ ಮಾಡಿದೆ. ಈ ಘಟನೆಯಲ್ಲಿ ಸಫಾರಿಗೆ ಬಂದಿದ್ದ ಚೆನ್ನೈ ಮೂಲದ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬನ್ನೇರುಘಟ್ಟ ಸಫಾರಿ ವೇಳೆ ಚಿರತೆ ಹಠಾತ್ ದಾಳಿ:
ಚಿರತೆ ಬಸ್ ಮೇಲೆ ದಾಳಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ನಡೆಸುವ ಸಫಾರಿ ಬಸ್‌ನಲ್ಲಿ ಒಂದು ಡಜನ್‌ಗೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಪ್ರಯಾಣಿಕರ ಪೈಕಿ ವಾಹಿತ್ ಬಾನು (50) ಅವರೂ ಇದ್ದರು, ಅವರು ತಮ್ಮ ಪತಿ ಮತ್ತು ಮಗನೊಂದಿಗೆ ಸಫಾರಿಗೆ ಬಂದಿದ್ದರು.. ಬಸ್ ಸಫಾರಿ ವಲಯದ ಮೂಲಕ ಸಾಗುತ್ತಿರುವಾಗ, ಪ್ರಯಾಣಿಕರು ಕಿಟಕಿಯ ಮೂಲಕ ಸುತ್ತಮುತ್ತಲ ಪ್ರಾಣಿಗಳನ್ನು ಗಮನಿಸುತ್ತಿದ್ದರು. ಈ ವೇಳೆ ಹಠಾತ್ತಾಗಿ ಚಿರತೆ ಬಸ್ ಮೇಲೆ ಹಾಳಿ ದಾಳಿ ಮಾಡಿದೆ.
ಚಿರತೆ ದಾಳಿಗೆ ಬೆಚ್ಚಿಬಿದ್ದ ಪ್ರಾಯಾಣಿಕರು:
ಜಾಲರಿ ಕಿಟಕಿಯ ಮೂಲಕ ಒಳಗೆ ನುಗ್ಗಲು ಚಿರತೆ ಪ್ರಯತ್ನಿಸಿದೆ. ಹಠಾತ್ ದಾಳಿಯಿಂದಾಗಿ ವಾಹಿತ್ ಬಾನು ಅವರ ಕೈಗೆ ಪರಚಿದೆ. ಈ ವೇಳೆ ಪ್ರಯಾಣಿಕರೆಲ್ಲರೂ ಭಯಭೀತರಾಗಿ ಬೆಚ್ಚಿಬೀಳುವಂತೆ ಮಾಡಿತು. ಚಿರತೆ ಸ್ವಲ್ಪ ಸಮಯದ ನಂತರ ಸ್ಥಳದಿಂದ ಹೊರಟುಹೋಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್:
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಚಿರತೆ ಬಸ್ ಮೇಲೆ ಹಾರಿ, ಕಿಟಕಿಯ ಮೂಲಕ ಬಸ್‌ನೊಳಗೆ ನುಗ್ಗಲು ಪ್ರಯತ್ನಿಸಿರುವುದು ಕಂಡುಬಂದಿದೆ. ಸಫಾರಿ ವೇಳೆ ವಾಹನದಿಂದ ಹೊರಗೆ ಯಾವುದೇ ಕಾರಣಕ್ಕೂ ಇಳೆಯಬೇಡಿ, ಕಿಟಕಿಗಳನ್ನು ಸ್ಪರ್ಶಿಸಬೇಡಿ ಅಥವಾ ಪ್ರಾಣಿಗಳನ್ನು ಆಕರ್ಷಿಸುವಂತೆ ಕರೆಯಬೇಡಿ, ಸುರಕ್ಷತಾ ಸೂಚನೆಗಳನ್ನು ಎಚ್ಚರಿಕೆಯಿಂದ ಪಾಲಿಸಿ
