ಪವರ್ ಬ್ಯಾಂಕ್‌ಗಳು ಮೊಬೈಲ್ ಚಾರ್ಜಿಂಗ್‌ಗೆ ಅತ್ಯಗತ್ಯವಾಗಿದ್ದರೂ, ಕೆಲವು ಅಪಾಯಕಾರಿ ಸಂಕೇತಗಳನ್ನು ನೀಡಬಹುದು. ಬ್ಯಾಟರಿ ಊತ, ಅತಿಯಾದ ಬಿಸಿ, ವಾಸನೆ ಅಥವಾ ಔಟ್‌ಪುಟ್ ಸಮಸ್ಯೆಗಳಂತಹ ಚಿಹ್ನೆಗಳು ಕಂಡರೆ, ಅದು ಸ್ಫೋಟದಂತಹ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.ಈ ಲೇಖನದಲ್ಲಿ ವಿವರಿಸಲಾಗಿದೆ.
ಪವರ್ ಬ್ಯಾಂಕ್‌ಗಳು: ಇಂದಿನ ದಿನಗಳಲ್ಲಿ ಪವರ್ ಬ್ಯಾಂಕ್‌ಗಳು ನಮ್ಮ ಜೀವನದ ಅಂಗವಾಗಿವೆ. ಮೊಬೈಲ್ ಚಾರ್ಜಿಂಗ್‌ನ ಚಿಂತೆಯನ್ನು ತೊಡೆದುಹಾಕುವ ಈ ಸಣ್ಣ ಉಪಕರಣ ಕೆಲವೊಮ್ಮೆ ಆಪತ್ತಿಗೆ ಮೂಲವಾಗುತ್ತೆ. ದೀರ್ಘಕಾಲ ಬಳಸಿದರೆ ಅಥವಾ ಪವರ್ ಬ್ಯಾಂಕ್ ಬಳಸುವಾಗ ಅಸಾಧಾರಣ ಚಿಹ್ನೆಗಳು ಕಾಣಿಸಿದರೆ ಎಚ್ಚರಿಕೆಯಿಂದ ಇರಬೇಕು. ಈ ಸೂಕ್ಷ್ಮ ಸಂಕೇತಗಳು ದೊಡ್ಡ ಅನಾಹುತಕ್ಕೆ ಮುನ್ಸೂಚನೆಯಾಗಿರಬಹುದು.
1. ಬ್ಯಾಟರಿ ಊತ:
ಪವರ್ ಬ್ಯಾಂಕ್‌ನ ಮೇಲ್ಮೈ ಸ್ವಲ್ಪ ಊದಿಕೊಂಡಿದ್ದರೆ ಅಥವಾ ಮಧ್ಯೆ ಉದ್ದಕ್ಕೆ ಉಬ್ಬು ಕಂಡರೆ, ಒಳಗಿನ ಬ್ಯಾಟರಿ ಹಾನಿಯಾಗಿದೆ ಎಂದರ್ಥ. ಅತಿಯಾದ ಬಿಸಿಯಿಂದ ಸ್ಫೋಟಕ್ಕೆ ಕಾರಣವಾಗಬಹುದು.
2. ಚಾರ್ಜಿಂಗ್ ಸಮಯದಲ್ಲಿ ಅತಿಯಾದ ಬಿಸಿ:
ಮೊಬೈಲ್ ಚಾರ್ಜ್ ಮಾಡುವಾಗ ಪವರ್ ಬ್ಯಾಂಕ್ ಇದ್ದಕ್ಕಿದ್ದಂತೆ ಬಿಸಿಯಾದರೆ, ಅದು ಆಪತ್ತಿನ ಸಂಕೇತ. ಸಹಜವಾಗಿ ಸ್ವಲ್ಪ ಬಿಸಿಯಾಗುವುದು ಸಾಧಾರಣ, ಆದರೆ ಕೈಗೆ ಹಿಡಿಯಲು ಕಷ್ಟವಾದರೆ ತಕ್ಷಣ ಚಾರ್ಜರ್ ತೆಗೆಯಿರಿ. ನಿರ್ಲಕ್ಷ್ಯವಹಿಸಿದರೆ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು.
3. ಔಟ್‌ಪುಟ್ ಸಮಸ್ಯೆ ಅಥವಾ ಹಠಾತ್ ಸ್ಥಗಿತ:
ನಿಮ್ಮ ಫೋನ್ ಚಾರ್ಜ್ ಮಾಡುವಾಗ ಪವರ್ ಬ್ಯಾಂಕ್ ಪದೇ ಪದೇ ಸಂಪರ್ಕ ಕಡಿತಗೊಂಡರೆ, ಸರ್ಕ್ಯೂಟ್ ಹಾನಿಯ ಸೂಚನೆ. ಇದು ಸ್ಪಾರ್ಕ್‌ಗಳು ಮತ್ತು ಓವರ್‌ಲೋಡ್‌ಗೆ ಕಾರಣವಾಗಿ ಅನಾಹುತಕ್ಕೆ ಕಾರಣವಾಗಬಹುದು.
4. ವಾಸನೆ ಅಥವಾ ಹೊಗೆ
ಮೊಬೈಲ್ ಚಾರ್ಜಿಂಗ್ ಮಾಡುವಾಗ ಪವರ್ ಬ್ಯಾಂಕ್ ಸುಡುವಂತಹ ವಾಸನೆ ಅಥವಾ ಸ್ವಲ್ಪ ಹೊಗೆ ಬರುವುದು ಕಂಡರೆ ತಕ್ಷಣ ಬಳಕೆ ನಿಲ್ಲಿಸಿ. ಇದು ಶಾರ್ಟ್ ಸರ್ಕ್ಯೂಟ್ ಅಥವಾ ಅತಿ ಬಿಸಿಯ ಸಂಕೇತವಾಗಿದ್ದು, ಸ್ಫೋಟಕ್ಕೆ ಕಾರಣವಾಗಬಹುದು.
5. ಪವರ್‌ಬ್ಯಾಂಕ್ ಲೈಟ್ ಮಿನುಗುವಿಕೆ ಅಥವಾ ಕೆಲಸ ಮಾಡದಿರುವುದು:
ಮೊಬೈಲ್ ಚಾರ್ಜ್ ಮಾಡುವಾಗ ಇಂಡಿಕೇಟರ್ ದೀಪಗಳು ಮಿನುಗುತ್ತಿದ್ದರೆ ಅಥವಾ ಕೆಲಸ ಮಾಡದಿದ್ದರೆ, ಸರ್ಕ್ಯೂಟ್‌ನಲ್ಲಿ ದೋಷವಿದೆ. ಇದು ಅನಾಹುತಕ್ಕೆ ಮುನ್ಸೂಚನೆ ಆಗಿರಬಹುದು, ತಕ್ಷಣ ನಿಲ್ಲಿಸಿ.
ಈ ಚಿಹ್ನೆಗಳು ಕಂಡರೆ ಏನು ಮಾಡಬೇಕು?
ಅಂತಹ ಪವರ್ ಬ್ಯಾಂಕ್ ಅನ್ನು ತಕ್ಷಣ ಆಫ್ ಮಾಡಿ, ಚಾರ್ಜರ್ ಸಂಪರ್ಕ ಕಡಿತಗೊಳಿಸಿ. ತಂಪು, ಒಣ ಸ್ಥಳದಲ್ಲಿ ಇರಿಸಿ; ಹೊಡೆಯುವುದು ಅ55ಥವಾ ಅಲುಗಿಸುವುದು ತಪ್ಪಿಸಿ. ಇ-ವೇಸ್ಟ್ ಕೇಂದ್ರದಲ್ಲಿ ಸುರಕ್ಷಿತವಾಗಿ ತ್ಯಜಿಸಿ. ಪವರ್ ಬ್ಯಾಂಕ್ ಉಪಯುಕ್ತವಾದರೂ, ಸಣ್ಣ ಅಜಾಗರೂಕತೆಯಿಂದ ಸ್ಫೋಟಗೊಳ್ಳಬಹುದುದ.
