ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?

ಒಂದು ಕಡೆ ಸಚಿವ ಸ್ಥಾನ ಸಿಕ್ಕವರು ನಮಗೆ ಈ ಖಾತೆ ಬೇಡ, ಆ ಖಾತೆ ಬೇಕು ಅಂತ ಕ್ಯಾತೆ ತೆಗೆದುಕೊಂಡು ಕೂತಿದ್ದಾರೆ. ಮತ್ತೊಂದು ಕಡೆ ಮುಂದಿನ ಪಟ್ಟಿಯಲ್ಲಾದ್ರೂ ನಮಗೆ ಸಚಿವ ಸ್ಥಾನ ಬೇಕು ಅಂತ ಮತ್ತೊಂದಿಷ್ಟು ಸಚಿವಾಕಾಂಕ್ಷಿಗಳು ಸರ್ಕಸ್ ಶುರು ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಜೂನ್ 3ಕ್ಕೆ ಪ್ರಮಾಣವಚನ. ಜೂನ್ 5ಕ್ಕೆ ರಾಜೀನಾಮೆ ಸಂಘರ್ಷ..! ಖಾತೆ ಕಿಚ್ಚು. ರಾಮಲಿಂಗಾರೆಡ್ಡಿ ಕೋಪದ ಕಾಡ್ಗಿಚ್ಚು..! ಡಿ.ಕೆ.ಶಿವಕುಮಾರ್ ನೇತೃತ್ವದ ಹೊಸ ಸರ್ಕಾರಕ್ಕೆ ಆರಂಭದಲ್ಲಿಯೇ ಎದುರಾಗಿದೆ ಅಗ್ನಿಪರೀಕ್ಷೆ..! ಹಾಗಿದ್ರೆ ಎರಡೇ ದಿನದ ಅಂತರದಲ್ಲಿ ಆಗಿದ್ದಾದರೂ ಏನು..? ಕೊಟ್ಟ ಮಾತಿನ ಅಸ್ತ್ರ ಝಳಪಿಸಿದ್ದೇಕೆ ರಾಮಲಿಂಗಾರೆಡ್ಡಿ..? ತೆರೆ ಹಿಂದೆ ಎದ್ದ ರಾಜಕೀಯ ಸುನಾಮಿಯ ಸೀಕ್ರೆಟ್ ಏನು? ಈ ಸುನಾಮಿಯನ್ನ ತಡೆದು ನಿಲ್ಲಿಸೋದಕ್ಕೆ ಬಂಡೆ ಉರುಳಿಸಿರುವ ದಾಳವೇನು..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾತೆ ವಿಚಾರವಾಗಿ ರಾಮಲಿಂಗಾರೆಡ್ಡಿ ತಮ್ಮ ಅಸಮಾಧಾನದ ಕಿಚ್ಚನ್ನ ರಾಜೀನಾಮೆ ಮೂಲಕ ಹೊರಹಾಕಿದ್ದಾರೆ. ಆದ್ರೀಗ ಈ ಕಿಚ್ಚು ಕಾಡ್ಗಿಚ್ಚಾಗಿ ಬದಲಾಗೋ ಆತಂಕ ಸರ್ಕಾರಕ್ಕೆ ಎದುರಾಗಿದೆ. ಯಾಕೆಂದ್ರೆ ರಾಮಲಿಂಗಾರೆಡ್ಡಿ ಬೆನ್ನಲ್ಲೇ ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್​ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಸಚಿವ ಸ್ಥಾನ ಸಿಕ್ಕಿದ್ರೂ ಸಹ, ಅವರ ಅತೃಪ್ತಿಗೆ ಕಾರಣ ಏನು..?

Related Video