ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!

Suvarna Special: ರಾಜ್ಯ ರಾಜಕೀಯದಲ್ಲೀಗ ದೊಡ್ಡದೊಂದು ಸುನಾಮಿಯೇ ಭುಗಿಲೆದ್ದಿದೆ.. ಪರಿಷತ್ ಚುನಾವಣೆ, ರಾಜಕಾರಣ ರಣರಂಗದಲ್ಲಿ ಭೂಕಂಪನವನ್ನೇ ಸೃಷ್ಟಿಸಿದೆ.. ಕಾಂಗ್ರೆಸ್ ವಿರುದ್ಧ ಸೆಣಸಾಡಬೇಕು ಅನ್ನೋ ಏಕಮಾತ್ರ ಉದ್ದೇಶ.

Share this Video
  • FB
  • Linkdin
  • Whatsapp

ರಾಜ್ಯ ರಾಜಕೀಯದಲ್ಲೀಗ ದೊಡ್ಡದೊಂದು ಸುನಾಮಿಯೇ ಭುಗಿಲೆದ್ದಿದೆ.. ಪರಿಷತ್ ಚುನಾವಣೆ, ರಾಜಕಾರಣ ರಣರಂಗದಲ್ಲಿ ಭೂಕಂಪನವನ್ನೇ ಸೃಷ್ಟಿಸಿದೆ.. ಕಾಂಗ್ರೆಸ್ ವಿರುದ್ಧ ಸೆಣಸಾಡಬೇಕು ಅನ್ನೋ ಏಕಮಾತ್ರ ಉದ್ದೇಶದಿಂದಲೇ, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಕೈಜೋಡಿಸಿದ್ವು.. ಆದ್ರೆ ಈಗ ನೋಡಿದ್ರೆ, ಈ ಪಕ್ಷದೊಳಗಿರೋ ನಾಯಕರೇ, ಹಸ್ತಪಾಳಯದ ಕೈಹಿಡಿತಾ ಇರೋದು ಜಗಜ್ಜಾಹಿರಾಗಿದೆ.. ಬಿಜೆಪಿ ನಾಯಕರೇ ಕಾಂಗ್ರೆಸ್ ಪರವಾಗಿ ನಿಲ್ಲೋದು ಅಂದ್ರೆ, ಅದನ್ನ ಕಲ್ಪನೆಯಾದ್ರೂ ಮಾಡಿಕೊಳ್ಳೋಕೆ ಸಾಧ್ಯನಾ? ಬಟ್, ನಮ್ ರಾಜ್ಯದಲ್ಲಿ ಅದೂ ಸಾಧ್ಯವಾಗಿದೆ.. ಈ ಒಂದು ಸಂಗತಿ, ನಾವು ರಾಜ್ಯ ರಾಜಕಾರಣವನ್ನ, ಅದ್ಯಾವ ಭೂತಗನ್ನಡಿಯಿಂದ ನೋಡ್ಬೇಕು ಅನ್ನೋದನ್ನ ಕಲಿಸಿಕೊಡ್ತಾ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಆಗಿದ್ದೇನು? ಈ ಪ್ರಶ್ನೆ.. ಇದೇ ಪ್ರಶ್ನೆಯೇ ಈಗ ರಾಷ್ಟ್ರ ಮಟ್ಟದಲ್ಲಿ ಕುತೂಹಲ ಮೂಡಿಸಿರೋದು.. ಆದ್ರೆ, ಇದಕ್ಕಿಂತಾ ಮುಖ್ಯವಾದ ಮತ್ತೊಂದು ಪ್ರಶ್ನೆಯೂ ಕಾಡ್ತಾ ಇದೆ. ರಾಷ್ಟ್ರ ಮಟ್ಟದಲ್ಲಿ ತನ್ನ ವ್ಯೂಹ-ತಂತ್ರಗಳ ಮೂಲಕ, ವಿಪಕ್ಷಗಳ ಪಾಲಿಗೆ ಕಬ್ಬಿಣದ ಸರಪಳಿಯಾಗಿತ್ತು, ಕೇಸರಿ ಪಾಳಯ.. ಆದ್ರೆ ಈಗ ನೋಡಿದ್ರೆ, ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳೇ ವಿಚಿತ್ರ ತಿರುವುಗಳಿಗೆ ಸಾಕ್ಷಿಯಾಗಿದೆ.. ಏನಿದರ ಕತೆ? ತಪ್ಪು ಮಾಡಿದವರು ಸಿಕ್ಕಿದರೆ, ತಕ್ಕ ಶಾಸ್ತಿಯಾಗುತ್ತೆ ಅಂತಾರೆ, ಕೇಸರಿ ಪಡೆಯ ಕಟ್ಟಾಳುಗಳು.. ಆದ್ರೆ ಮುಂದಿನ ಚುನಾಚಣೆಗೆ, ಎದುರಾಳಿತನ್ನ ಕಟ್ಟಿಹಾಕೋಕೆ ಯಾರ ಬಳಿ ಯಾವ ವ್ಯೂಹವಿದೆ? 

Related Video