2028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!

2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅಧಿಕಾರ ಉಳಿಸಿಕೊಳ್ಳಲು ಹೈಕಮಾಂಡ್, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿದ್ದು, ಇಬ್ಬರೂ ತಮ್ಮ ರಣತಂತ್ರಗಳೊಂದಿಗೆ ಅಖಾಡಕ್ಕಿಳಿದಿದ್ದಾರೆ.

Share this Video
  • FB
  • Linkdin
  • Whatsapp

ಈಗಿನ್ನೂ 2026.. ಮುಂದಿನ ವಿಧಾನಸಭೆ ಚುನಾವಣೆ ಇರೋದು 2028ಕ್ಕೆ.. ಎಕ್ಸ್ಯಾಟ್ ಆಗಿ ಹೇಳ್ಬೇಕು ಅಂದ್ರೆ ಮುಂದಿನ ಮಹಾಯುದ್ಧಕ್ಕೆ ಇನ್ನೂ 22 ತಿಂಗಳು ಬಾಕಿಯಿದೆ. ಆದ್ರೆ ಈ ಕದನ ಗೆಲ್ಲೋಕೆ ಜೋಡೆತ್ತುಗಳ ತಯಾರಿ ಜೋರಾಗಿದೆ. 2023ರ ಚುನಾವಣೆಯಲ್ಲಿ ಚರಿತ್ರೆ ಬರೆದಿದ್ದ ಅದೇ ಜೋಡೆತ್ತು ಸೈಲೆಂಟ್ ಆಗಿ ಅಖಾಡಕ್ಕೆ ನುಗ್ಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಡಿ.ಕೆ.ಶಿವಕುಮಾರ್.. ಇಬ್ಬರಿಗೂ ನಿರ್ದಿಷ್ಟ ಗುರಿಯನ್ನ ಫಿಕ್ಸ್ ಮಾಡಿದೆ ಹೈಕಮಾಂಡ್. ಹಾಗಿದ್ರೆ 2028ರ ಕರ್ನಾಟಕ ಕುರುಕ್ಷೇತ್ರಕ್ಕೆ ಹೇಗಿದೆ ಕಾಂಗ್ರೆಸ್ ತಯಾರಿ..? ಅಧಿಕಾರ ಉಳಿಸಿಕೊಳ್ಳೋಕೆ ಕೈ ಪಡೆಯ ಪ್ಲಾನ್ ಏನು..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ಸಿಂಹಾಸನವನಕ್ಕೆ ಅಧಿಪತಿಯಾಗಿದ್ದಾರೆ ಕನಕಾಧಿಪತಿ. ಆದ್ರೆ ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಅವರ ಗುರಿ ದೊಡ್ಡದಿದೆ. ಅವರ ನೆಕ್ಸ್ಟ್ ಟಾರ್ಗೆಟ್ ಕೂಡ ಫಿಕ್ಸ್ ಆಗಿದೆ. ಮುಂದೆಯೂ ಪಕ್ಷವನ್ನ ಅಧಿಕಾರಕ್ಕೆ ತಂದು ಆಡಳಿತ ನಡೆಸೋ ಶಪಥವನ್ನ ಈಗಾಗಲೇ ಮಾಡಿಯಾಗಿದೆ ಡಿ.ಕೆ.ಶಿವಕುಮಾರ್. ಹಾಗಿದ್ರೆ, ಆ ಶಪಥ ನಿಜಕ್ಕೂ ಈಡೇರುತ್ತಾ..? ಅದನ್ನ ಈಡೇರಿಸಿಕೊಳ್ಳೋಕೆ ಅವರು ಹೆಣೆದಿರುವ ರಣವ್ಯೂಹಗಳೇನು?

ಕರ್ನಾಟಕದಲ್ಲಿ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಹೈಕಮಾಂಡ್​ಗೆ ಬಹಳ ಮುಖ್ಯ. ಇದಕ್ಕೆ ಒಂದಿಷ್ಟು ಕಾರಣಗಳು ಸಹ ಇವೆ. ಶತಾಯಗತಾಯ 2028ರಲ್ಲಿಯೂ ಕರ್ನಾಟಕವನ್ನ ಗೆಲ್ಬೇಕು ಅನ್ನೋದು ಕಾಂಗ್ರೆಸ್ ಹೈಕಮಾಂಡ್​ನ ಉದ್ದೇಶ. ಇಲ್ಲಿ ಗೆಲುವು ಅನ್ನೋದು ಕೇವಲ ಅಧಿಕಾರಕ್ಕಾಗಿಯಲ್ಲ. ಮುಂದಿನ ಅವಧಿಗೂ ಅಧಿಕಾರ ತಮ್ಮ ಬಳಿಯೇ ಇರ್ಬೇಕು ಅಂದ್ರೆ 2023ರ ಇತಿಹಾಸ ಮತ್ತೆ ಮರುಕಳಿಸಬೇಕು.. ಆ ಹಿಸ್ಟರಿ ರಿಪೀಟ್ ಆಗ್ಬೇಕು ಅಂದ್ರೆ, ಅಲ್ಲಿ ಜೋಡೆತ್ತು ಮೋಡಿ ಮಾಡ್ಬೇಕು. ಹೀಗಾಗಿಯೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಈಗಾಗಲೇ ನಿರ್ದಿಷ್ಟ ಜವಾಬ್ದಾರಿಯನ್ನ ಹೈಕಮಾಂಡ್ ವಹಿಸಿದೆ. ಒಬ್ಬರು ಅಹಿಂದ ಕೋಟೆಯನ್ನ ರಕ್ಷಿಸೋಕೆ ಅಖಾಡಕ್ಕಿಳಿದ್ರೆ, ಮತ್ತೊಬ್ಬರು ಶತ್ರಪಾಳಯವನ್ನ ಕಬ್ಜಾ ಮಾಡೋಕೆ ಮುನ್ನುಗ್ಗಲಿದ್ದಾರೆ.

Related Video