ಲೈಂಗಿಕ ಕಿರುಕುಳ: ದೆಹಲಿ ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ರಮ್ಯಾ ಹೆಸರು!

ಕಾಂಗ್ರೆಸ್ ಸೊಶಿಯಲ್ ಮೀಡಿಯಾ ಸೆಲ್‌ನಲ್ಲಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆಲ್‌ನ ಮುಖ್ಯಸ್ಥೆ, ನಟಿ ರಮ್ಯಾಗೆ ಇದೀಗ ಕಂಟಕ ಎದುರಾಗಿದೆ. ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ರಮ್ಯಾ ಹೆಸರನ್ನು ಕೂಡಾ ಸೇರಿಸಲಾಗಿದೆ. 

Share this Video
  • FB
  • Linkdin
  • Whatsapp

ಕಾಂಗ್ರೆಸ್ ಸೊಶಿಯಲ್ ಮೀಡಿಯಾ ಸೆಲ್‌ನಲ್ಲಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆಲ್‌ನ ಮುಖ್ಯಸ್ಥೆ, ನಟಿ ರಮ್ಯಾಗೆ ಇದೀಗ ಕಂಟಕ ಎದುರಾಗಿದೆ. ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ರಮ್ಯಾ ಹೆಸರನ್ನು ಕೂಡಾ ಸೇರಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಜು. 3ರಂದು ಸೋಶಿಯಲ್ ಮೀಡಿಯಾ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದರು. ಕೆಲಸದ ವೇಳೆ ಚಿರಾಗ್ ಪಟ್ನಾಯಕ್ ಎಂಬಾತ ಹಿಂದಿನಿಂದ ಬಂದು ತಮ್ಮನ್ನು ಮುಟ್ಟುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದನ್ನೇ ಆತ ತನ್ನ ಕಾಯಕ ಮಾಡಿಕೊಂಡಿದ್ದ ಎಂದು ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆದಿದ್ದ ಆ ಮಹಿಳೆ, ಪಕ್ಷದ ಸೋಶಿಯಲ್ ಮಿಡಿಯಾ ಸೆಲ್‌ನಲ್ಲಿ ನಡೆಯುತ್ತಿರುವ ಇಂತಹ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದರು. ಅಲ್ಲದೇ ಈ ಕುರಿತು ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್‌ನ ಮುಖ್ಯಸ್ಥೆ ದಿವ್ಯ ಸ್ಪಂದನ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದರು. ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ರಮ್ಯಾ ಹೆಸರನ್ನು ಕೂಡಾ ಆರೋಪಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಾರೆ. 

Related Video