ರಾಹುಲ್ ಕಣ್ಣು ಹೊಡೆದಿದ್ದು ಯಾರಿಗೆ? ಯಾಕೆ?

ಭಾಷಣದ ಬಳಿಕ ರಾಹುಲ್ ಕಣ್ಣು ಹೊಡೆದಿದ್ದು ಯಾರಿಗೆ?ರಾಹುಲ್ ಕಣ್ಣು ಹೊಡೆಯುತ್ತಿರುವ ವಿಡಿಯೋ ವೈರಲ್ಮೋದಿ ಅಪ್ಪಿಕೊಂಡ ಖುಷಿಯಲ್ಲಿ ಕಣ್ಣು ಹೊಡೆದರು ರಾಹುಲ್

Share this Video
  • FB
  • Linkdin
  • Whatsapp

ನವದೆಹಲಿ(ಜು.20): ಲೋಕಸಭೆ ಇಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪರ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಭಾಷಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರತ್ತ ತೆರಳಿ ಅವರನ್ನು ತಬ್ಬಿಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರ ಈ ನಡೆಯನ್ನು ಇಡೀ ಲೋಕಸಭೆ ಮೂಕವಿಸ್ಮಿತವಾಗಿ ನೋಡಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ರಾಹುಲ್ ಅವರನ್ನು ಮತ್ತೆ ವಾಪಸ್ ಕರೆಯಿಸಿ ಶಬ್ಬಾಸಗಿರಿ ನೀಡಿದ್ದಾರೆ. ಇದಾದ ಬಳಿಕ ರಾಹುಲ್ ತಮ್ಮ ಆಸನದಲ್ಲಿ ಹೋಗಿ ಕುಳಿತುಕೊಂಡರು. ಆಗ ಕಾಂಗ್ರೆಸ್ ಸದಸ್ಯರೆಲ್ಲಾ ರಾಹುಲ್ ಅವರನ್ನು ಅಭಿನಂದಿಸಿದರು.

ಈ ವೇಳೆ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂದ್ಯಾ ರಾಹುಲ್ ಅವರಿಗೆ ಅಭಿನಂದಿಸಿದಾಗ ರಾಹುಲ್ ಸಿಂದ್ಯಾ ಅವರತ್ತ ಕಣ್ಣು ಮಿಟುಕಿಸಿದ್ದಾರೆ. ಸಿಂಧ್ಯಾ ಅವರಿಗೆ ಕಣ್ಣೋಟದಲ್ಲೇ ಏನೋ ಹೇಳಿದ ರಾಹುಲ್ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಸುದ್ದಿಗಳನ್ನೂ ಓದಿ-ಅವಿಶ್ವಾಸ ನಿರ್ಣಯ ಮಂಡನೆ ಇತಿಹಾಸ ಕೆದಕುತ್ತಾ...!

ಲೋಕಸಭೆಯಲ್ಲಿ ಪ್ರಧಾನಿ ತಬ್ಬಿಕೊಂಡ ರಾಹುಲ್!

Related Video