ಲೋಕಸಭೆಯಲ್ಲಿ ಪ್ರಧಾನಿ ತಬ್ಬಿಕೊಂಡ ರಾಹುಲ್!
ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ಲೋಸಕಭೆ
ಲೋಕಸಭೆಯಲ್ಲಿ ಇತಿಹಾಸ ಬರೆದ ರಾಹುಲ್ ಗಾಂಧಿ
ಅವಿಶ್ವಾಸ ನಿರ್ಣಯ ಮಂಡನೆ ಪರ ರಾಹುಲ್ ಭಾಷಣ
ಪ್ರಧಾನಿ ಮೋದಿ ಬಿಗಿದಪ್ಪಿದ ರಾಹುಲ್ ಗಾಂಧಿ
ಭಾಷಣದ ಬಳಿಕ ಮೋದಿ ತಬ್ಬಿಕೊಂಡ ರಾಹುಲ್
ನವದೆಹಲಿ(ಜು.20): ಲೋಕಸಭೆ ಇಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಈ ವೇಳೆ ಅವಿಶ್ವಾಸ ನಿರ್ಣಯ ಮಂಡನೆ ಪರ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಮೋಧಿ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.
ಆದರೆ ತಮ್ಮ ಭಾಷಣ ಮುಗಿಸುತ್ತಿದ್ದಂತೇ ತಮ್ಮ ಸ್ಥಾನದಿಂದ ಎದ್ದು ಬಂದ ರಾಹುಲ್, ನೇರವಾಗಿ ಪ್ರಧಾನಿ ನರೇಂದ್ರ ಮೋಧಿ ಅವರ ಬಳಿ ತೆರಳಿ ಅವರನ್ನು ಬಿಗಿದಪ್ಪಿಕೊಂಡರು. ರಾಹುಲ್ ಮೋದಿ ಅವರತ್ತ ತೆರಳಿ ಅವರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯವನ್ನು ಇಡೀ ಲೋಕಸಭೆ ಮೂಕವಿಸ್ಮಿತವಾಗಿ ನೋಡಿತು.
ಮೋದಿ ಅವರನ್ನು ರಾಹುಲ್ ಬಿಗಿದಪ್ಪಿಕೊಳ್ಳುತ್ತಿರುವುದನ್ನು ವಿರೋಧ ಪಕ್ಷ, ಆಡಳಿತ ಪಕ್ಷದ ಎಲ್ಲ ಸದಸ್ಯರು ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತಿದ್ದರು. ಇನ್ನು ಮೋದಿ ಅವರನ್ನು ತಬ್ಬಿಕೊಂಡ ಬಳಿಕ ಹೊರಡಲು ಸಜ್ಜಾದ ರಾಹುಲ್ ಅವರನ್ನು ಕೂಗಿ ಕರೆದ ಪ್ರಧಾನಿ ಮೋದಿ, ನಿಮ್ಮ ಭಾಷಣ ತುಂಬಾ ಚೆನ್ನಾಗಿತ್ತು ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.
ಈ ಸುದ್ದಿಗಳನ್ನು ಓದಿ-ರಾಹುಲ್ ಕಣ್ಣು ಹೊಡೆದಿದ್ದು ಯಾರಿಗೆ? ಯಾಕೆ?