- Home
- Karnataka Districts
- Karnataka News Live: ತುರುವೇಕೆರೆ - ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!
Karnataka News Live: ತುರುವೇಕೆರೆ - ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಅವರ ಆಪ್ತ ಶಾಸಕರು ಬ್ಯಾಟಿಂಗ್ ಮುಂದುವರಿಸಿದ್ದಾರೆ. ಜನವರಿ 6ರಂದು ಡಿ.ಕೆ.ಶಿವಕುಮಾರ್ಗೆ ಸಿಎಂ ಪಟ್ಟಾಭಿಷೇಕವಾಗುವ ವಿಶ್ವಾಸವಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದರೆ, ಡಿಕೆಶಿ ಸದ್ಯದಲ್ಲೇ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಭವಿಷ್ಯ ನುಡಿದಿದ್ದಾರೆ. ಇನ್ನೊಂದೆಡೆ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ, ಡಿಕೆಶಿಯವರು ನಮ್ಮ ಆರಾಧ್ಯದೈವ ಎಂಬುದರಲ್ಲಿ ಎರಡು ಮಾತಿಲ್ಲ. ಜನವರಿ 6 ಅಥವಾ 9ಕ್ಕೆ ಅವರು ಪ್ರಮಾಣವಚನ ಸ್ವೀಕರಿಸಿದರೆ, ಸಂಭ್ರಮ ಪಡುವುದರಲ್ಲಿ ನಾನೇ ಮೊದಲಿಗ ಎಂದಿದ್ದಾರೆ.
Karnataka News Liveತುರುವೇಕೆರೆ - ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!
Karnataka News Liveದಾವಣಗೆರೆ - ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ - ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ದಾವಣಗೆರೆಗೆ ತರಲಾಗುತ್ತಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕೆ ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ. ಕಲ್ಲೇಶ್ವರ ಮಿಲ್ ಆವರಣದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ.
Karnataka News Live'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕಿಸಿದ ವಿಪಕ್ಷಗಳಿಗೆ ಗೃಹಸಚಿವ ಪರಂ ತಿರುಗೇಟು!
ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕೇವಲ ರಸ್ತೆ, ಚರಂಡಿ ನಿರ್ಮಾಣದಿಂದ ಬಡವರ ಉದ್ದಾರ ಸಾಧ್ಯವಿಲ್ಲ, ಸಾವಿರಾರು ವರ್ಷಗಳ ಶೋಷಣೆ ಕೊನೆಗಾಣಿಸಲು ಗ್ಯಾರಂಟಿಗಳು ಅವಶ್ಯಕ ಎಂದರು.
Karnataka News Liveಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೋಕಾಚರಣೆ ಹಾಗೂ ನಾಯಕರ ಗೌರವಾರ್ಥ ಶಾಲೆಗಳಿಗೆ ರಜೆ ನೀಡಲಾಗಿದೆ.
Karnataka News Liveಶಾಮನೂರು ಶಿವಶಂಕರಪ್ಪ ನಿಧನ - ಕಾಶಿ ಜಗದ್ಗುರು ಶ್ರೀಗಳ ಸಂತಾಪ,ವೀರಭದ್ರೇಶ್ವರ ಜಾತ್ರಾ ಮಹೋತ್ಸವ ರದ್ದು!
Karnataka News Liveಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ, ಸಣ್ಣ ಸೇತುವೆಗೆ ಡಿಕ್ಕಿ ಹೊಡೆದ ಕಾರು ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ. ತಹಶಿಲ್ದಾರ್ ಕಚೇರಿ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
Karnataka News Liveಶಾಮನೂರು ಶಿವಶಂಕರಪ್ಪ ನಿಧನ; ತಿರುಪತಿ ಪ್ರಯಾಣ ರದ್ದುಗೊಳಿಸಿ ತಕ್ಷಣವೇ ವಾಪಸ್ ಬರುತ್ತಿರುವ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಕುಟುಂಬ!
ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ತಿರುಪತಿ ಯಾತ್ರೆಯಲ್ಲಿದ್ದ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪ್ರಯಾಣ ರದ್ದುಗೊಳಿಸಿ ಹಿಂತಿರುಗುತ್ತಿದ್ದು, ಪಾರ್ಥಿವ ಶರೀರ ದಾವಣಗೆರೆಗೆ ರವಾನಿಸಲು ಸಿದ್ಧತೆ
Karnataka News Liveಹೊಸಕೋಟೆಗೆ ಕಾಂಗ್ರೆಸ್ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದರೊಂದಿಗೆ, ನಮ್ಮ ಮೆಟ್ರೋ ಜಾಲವನ್ನು 175 ಕಿ.ಮೀ.ಗೆ ವಿಸ್ತರಿಸಲಾಗುತ್ತಿದ್ದು, ಗುಲಾಬಿ, ನೀಲಿ ಸೇರಿದಂತೆ ಹೊಸ ಮಾರ್ಗಗಳಲ್ಲಿ ಚಾಲಕ ರಹಿತ ರೈಲುಗಳನ್ನು ಪರಿಚಯಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.
Karnataka News Liveಬಿಗ್ ಬಾಸ್ - ಮೇಕಪ್ ಮಾಡ್ಕೊಳ್ಳೋ ಗ್ಯಾಪ್‌ನಲ್ಲಿ ಕಾವ್ಯಾಗೆ 'ಲವ್ ಪ್ರಪೋಸ್' ಮಾಡೇಬಿಟ್ಟ ಗಿಲ್ಲಿ ನಟ!
ಬಿಗ್ ಬಾಸ್ ಮನೆಯಲ್ಲಿ ಕ್ಯೂಟ್ ಜೋಡಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಸಂಬಂಧದ ಬಗ್ಗೆ ಎಲ್ಲರಿಗೂ ಗೊಂದಲವಿದೆ. ಇದೀಗ ಗಿಲ್ಲಿ ನಟ ಮೇಕಪ್ ಕೋಣೆಯಲ್ಲಿ ಕಾವ್ಯಾಗೆ 'ಐ ಲವ್ ಯು' ಎಂದು ಹೇಳಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾವ್ಯಾ ಅಚ್ಚರಿ ಮತ್ತು ನಗುವಿನಿಂದ ಪ್ರತಿಕ್ರಿಯಿಸಿದ್ದಾರೆ.
Karnataka News Liveಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!
ಹಾವೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕುಲಶಾಸ್ತ್ರ ಅಧ್ಯಯನವಿಲ್ಲದೆ ಸೇರ್ಪಡೆ ಸಾಧ್ಯವೇ? ಒಬಿಸಿಯಿಂದ ಎಸ್‌ಟಿಗೆ ಬರುವಾಗ ಅವರ ಮೀಸಲಾತಿ ಪಾಲನ್ನೂ ತರಬೇಕು ಎಂಬ ಷರತ್ತನ್ನು ಮುಂದಿಟ್ಟಿದ್ದಾರೆ.
Karnataka News Liveಹೊಸ ವರ್ಷದ ಆಫರ್ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!
ಜನವರಿಯಿಂದ ಎಲ್‌ಇಡಿ ಟೀವಿಗಳ ದರ ಹೆಚ್ಚಾಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್‌ಗಳ ಕೊರತೆ, ಚಿಪ್‌ಗಳ ಬೆಲೆ ಏರಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬೆಲೆ ಏರಿಕೆಯು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೂ ಪರಿಣಾಮ ಬೀರಲಿದೆ.
Karnataka News LiveBigg Boss - ಅಬ್ಬಬ್ಬಾ! ಗಿಲ್ಲಿ ಮೇಲೆ ಅಶ್ವಿನಿಗೆ ಇದೆಂಥ ಲವ್? ನನ್ನ ಮನಸ್ಸು ಪರಿವರ್ತಿಸಿದ್ದೂ ಇವನೇ ಅಂದ ಧ್ರುವಂತ್
ಬಿಗ್ಬಾಸ್ ಮನೆಯಲ್ಲಿ ಸಂಬಂಧಗಳು ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗಬಹುದು ಎಂಬುದಕ್ಕೆ ಹೊಸ ಸೇರ್ಪಡೆಯಾಗಿದೆ. ಹಾವು-ಮುಂಗುಸಿಯಂತಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಇದೀಗ ಸ್ನೇಹಿತರಾಗಿದ್ದು, ಗಿಲ್ಲಿಯಿಂದಲೇ ತನ್ನ ಮನಸ್ಸು ಪರಿವರ್ತನೆಯಾಗಿದೆ ಎಂದು ಧ್ರುವಂತ್ ಹೇಳಿಕೊಂಡಿದ್ದಾರೆ.
Karnataka News Liveಶಾಕಿಂಗ್ - ರಾತ್ರಿಯಾದ್ರೆ ಬೆಡ್‌ರೂಂ ಬಳಿ ಬರ್ತಾನೆ ಸೈಕೋ! ಅಪರಿಚಿತನ ಕಾಟಕ್ಕೆ ಬೇಸತ್ತ ವೈದ್ಯೆ!
ಬೆಂಗಳೂರಿನಲ್ಲಿ ಮಹಿಳಾ ವೈದ್ಯೆಯೊಬ್ಬರು ಕಳೆದ ಮೂರು ತಿಂಗಳಿಂದ ಸೈಕೋ ವ್ಯಕ್ತಿಯೊಬ್ಬನಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆ ಮನೆ ಬಳಿ, ವಿಶೇಷವಾಗಿ ಬೆಡ್‌ರೂಂ ಬಳಿ ಬಂದು ದಿಟ್ಟಿಸಿ ನೋಡುವ ಈತನ ಕಾಟದಿಂದ ಬೇಸತ್ತು ವೈದ್ಯೆ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ
Karnataka News Liveಬೆಡ್ತಿ-ವರದಾ ನದಿ ಜೋಡಣೆ ಯೋಜನೆ ಮಹತ್ವ ಬಿಚ್ಚಿಟ್ಟ ಜಲತಜ್ಞ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ!
ಬೆಡ್ತಿ-ವರದಾ ನದಿ ಜೋಡಣೆ ಯೋಜನೆಗೆ ತಪ್ಪು ಕಲ್ಪನೆಯಿಂದ ವಿರೋಧಿಸುವುದು ಬೇಡವೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಪರಿಷ್ಕೃತ ಯೋಜನೆಯಡಿ ಕೇವಲ 10% ನೀರನ್ನು ಮಾತ್ರ ಬಳಸಿಕೊಳ್ಳಲಾಗುವುದು ಮತ್ತು ಇದರಿಂದ ನದಿ ಹರಿವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Karnataka News Liveಭಾಗಮಂಡಲ ದೇವಾಲಯದ ಮುಂಭಾಗ ಅಂಗಡಿ ಮಳಿಗೆ ನಿರ್ಮಾಣಕ್ಕೆ ಭಕ್ತರು ತೀವ್ರ ವಿರೋಧ
ಕೊಡಗಿನ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಆದಾಯ ಹೆಚ್ಚಿಸಲು ಜಿಲ್ಲಾಡಳಿತವು ದೇಗುಲದ ಮುಂದೆ ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತಿದೆ. ಆದರೆ, ಈ ನಿರ್ಮಾಣದಿಂದ ದೇವಾಲಯದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಮತ್ತು ಇದು ನಿಯಮಬಾಹಿರ ಎಂದು ಸ್ಥಳೀಯರು ಹಾಗೂ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Karnataka News Liveರಾಜ್ಯ ರಾಜಕಾರಣದ ಅಜಾತಶತ್ರು ಶಾಸಕ ಶಾಮನೂರು ಶಿವಶಂಕರಪ್ಪ ನಿಧನ!
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ, ಎಐವಿಎಂ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು 95 ನೇ ವಯಸ್ಸಿನಲ್ಲಿ ನಿಧನರಾದರು. ಅವರು 6 ಬಾರಿ ಶಾಸಕ, 1 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದರು.
Karnataka News LiveYajamana BTS - ಝಾನ್ಸಿಗೆ ಆ್ಯಕ್ಸಿಡೆಂಟ್ ಆದಾಗ ಏನಾಯ್ತು? ಝುಂ ಎನ್ನೋ ಶಾಕಿಂಗ್ ವಿಡಿಯೋ ವೈರಲ್
ಯಜಮಾನ ಸೀರಿಯಲ್ನಲ್ಲಿ ಅಪಘಾತದಿಂದ ನೆನಪು ಕಳೆದುಕೊಂಡಿರುವ ಝಾನ್ಸಿಯನ್ನು ಒಲಿಸಿಕೊಳ್ಳಲು ರಾಘು ಅವಳ ಡ್ರೈವರ್ ಆಗಿ ಸೇರಿದ್ದಾನೆ. ಈ ಮೈ ಜುಮ್ಮೆನ್ನಿಸುವ ಅಪಘಾತದ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಯಿತು ಎಂಬುದರ ರಿಸ್ಕಿ ಶೂಟಿಂಗ್ ವಿಡಿಯೋವನ್ನು ನಟಿ ಮಧು ಭೈರಪ್ಪ ಹಂಚಿಕೊಂಡಿದ್ದಾರೆ.
Karnataka News Liveಚಾಮರಾಜನಗರದಲ್ಲಿ ಬೇಟೆಗಾರರ ಬಂದೂಕಿನ ಸದ್ದು - ಚಿರತೆ, ನವಿಲು, ಕಾಡುಹಂದಿಗಳೇ ಟಾರ್ಗೆಟ್!
ಚಾಮರಾಜನಗರದಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಕಾಡು ಹಂದಿಯೊಂದನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಚಿರತೆಗಳನ್ನು ಬೇಟೆಯಾಡಲು ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೇಟೆಗಾರರನ್ನು ಶೀಘ್ರವೇ ಬಂಧಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯ.
Karnataka News Live2028ಕ್ಕೆ ನಾನೇ ಸಿಎಂ, 11 ಜೆಸಿಬಿ ಪೂಜೆ ಮಾಡಿ ಪ್ರಮಾಣ ಸ್ವೀಕರಿಸ್ತೀನಿ, ಬೆಳಗಾವಿಯಲ್ಲಿ ಯತ್ನಾಳ್ ಅಬ್ಬರದ ಭಾಷಣ!
ಅಥಣಿಯಲ್ಲಿ ನಡೆದ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 2028ರಲ್ಲಿ ತಾವೇ ಮುಖ್ಯಮಂತ್ರಿಯಾಗುವುದಾಗಿ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಸಚಿವ ಸಂತೋಷ್ ಲಾಡ್ ಅವರಿಗೆ ಸವಾಲು ಹಾಕಿದರು.
Karnataka News LiveBigg Boss ನಿರೂಪಣೆ ಮಾಡೋದೇ ಇಲ್ಲ ಎಂದು ಶಾಕ್ ಕೊಟ್ಟಿದ್ದ ಸುದೀಪ್ ಒಪ್ಪಿಕೊಂಡಿದ್ಯಾಕೆ? ಕಿಚ್ಚ ಹೇಳಿದ್ದೇನು?
ಬಿಗ್ಬಾಸ್ ಸೀಸನ್ 11ರ ನಂತರ ನಿರೂಪಣೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿ ಶಾಕ್ ನೀಡಿದ್ದ ಕಿಚ್ಚ ಸುದೀಪ್, ಇದೀಗ ಮತ್ತೆ ನಿರೂಪಣೆಗೆ ಮರಳಿದ್ದಾರೆ. ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದ ಅವರು, ವಾಹಿನಿಯವರ ಮನವಿಗೆ ಸ್ಪಂದಿಸಿ ಮುಂದಿನ ನಾಲ್ಕು ವರ್ಷಗಳ ಕಾಲ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ.