ಬಿಗ್ ಬಾಸ್ ಮನೆಯಲ್ಲಿ ಕ್ಯೂಟ್ ಜೋಡಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಸಂಬಂಧದ ಬಗ್ಗೆ ಎಲ್ಲರಿಗೂ ಗೊಂದಲವಿದೆ. ಇದೀಗ ಗಿಲ್ಲಿ ನಟ ಮೇಕಪ್ ಕೋಣೆಯಲ್ಲಿ ಕಾವ್ಯಾಗೆ 'ಐ ಲವ್ ಯು' ಎಂದು ಹೇಳಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾವ್ಯಾ ಅಚ್ಚರಿ ಮತ್ತು ನಗುವಿನಿಂದ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಡಿ.14): ಬಿಗ್ ಬಾಸ್ ಮನೆಯ ಸುಂದರ ಮತ್ತು ಕ್ಯೂಟ್ ಜೋಡಿಗಳಲ್ಲಿ ಒಂದಾಗಿರುವ ಕಾವ್ಯಾ ಶೈವ (Kavya Shaiva) ಮತ್ತು ಗಿಲ್ಲಿ ನಟ (Gilli Nata) ಅವರನ್ನು ಜೋಡಿದ ರಾಜ್ಯದ ಬಹುತೇಕ ಜನತೆ ಇವರಿಬ್ಬರೂ ಲವ್ ಮಾಡ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ, ಇದೀಗ ರಾಜ್ಯದ ಜನತೆಯ ಆಶಯವನ್ನು ಸತ್ಯವನ್ನಾಗಿಸುವ ನಿಟ್ಟಿನಲ್ಲಿ ಗಿಲ್ಲಿನಟ, ಮೇಕಪ್ ಕೋಣೆಯಲ್ಲಿ ಕಾವ್ಯಾಳಿಗೆ ಲವ್ ಪ್ರಪೋಸ್ ಮಾಡಿದ್ದಾರೆ. ಸಣ್ಣದೊಂದು ಮೇಕಪ್ ಸಾಮಗ್ರಿ ಕೊಟ್ಟು ಐ ಲವ್ ಯು ಎಂದು ಹೇಳಿದ್ದಾನೆ.

ಬಿಗ್ ಬಾಸ್ ಮನೆಯಲ್ಲಿ ತುಂಬಾ ಆಪ್ತರಾಗಿರುವ ಮತ್ತು ಎಂತಹದ್ದೇ ಸಂದರ್ಭದಲ್ಲಿ ಕಾವ್ಯಾಳನ್ನು ಬಿಟ್ಟುಕೊಡದೇ ಜೊತೆಯಲ್ಲಿಯೇ ಗಿಲ್ಲಿ ಆಟವಾಡುತ್ತಿದ್ದಾನೆ. ಆದರೆ, ಕಾವ್ಯಾ ಮತ್ತು ಗಿಲ್ಲಿ ನಟ ಅವರ ನಡುವಿನ ಸಂಬಂಧ ಎಂಥಹದ್ದು ಎಂಬುದೇ ಎಲ್ಲರಿಗೂ ಕನ್ಫ್ಯೂಸ್ ಆಗಿದೆ. ಇದಕ್ಕೆ ಕಾರಣ ಈ ಇಬ್ಬರೂ ಒಮ್ಮೆ ಸ್ನೇಹಿತರು, ಮತ್ತೊಮ್ಮೆ ಅಣ್ಣ-ತಂಗಿ, ಮಗದೊಮ್ಮೆ ನಿಜವಾದ ಪ್ರೇಮಿಗಳಿಗಿಂತಲೂ ಹೆಚ್ಚಾಗಿ ರೊಮ್ಯಾಂಟಿಕ್ ಮೂಡ್‌ನಲ್ಲಿರುತ್ತಾರೆ. ಹೀಗಾಗಿ, ಇವರಿಬ್ಬರ ಸಂಬಂಧದ ಬಗ್ಗೆ ಜನರಿಗಂತೂ ತಲೆ ಕೆಟ್ಟುಹೋಗಿ ಸುಮ್ಮನಾಗಿದ್ದಾರೆ.

ಸ್ಪರ್ಧೆಯ ಗೆಲುವಿನ ಬಗ್ಗೆ ಗುರಿ:

ಇನ್ನು ಬಿಗ್ ಬಾಸ್ ರಿಯಾಲಿಟಿ ಶೋ ಆದದರಿಂದ ಇಲ್ಲಿ ಪ್ರೀತಿ-ಪ್ರೇಮಕ್ಕೆ ಆದ್ಯತೆ ಇಲ್ಲವಾದ್ದರಿಂದ ಸ್ಪರ್ಧಿಗಳಾಗಿ ಆಟವಾಡುವುದೇ ಮುಖ್ಯವೆಂದು ಇಬ್ಬರೂ ಸ್ನೇಹಿತರಾಗಿ ಆಟದಲ್ಲಿ ತೊಡಗಿಕೊಂಡಿದ್ದಾರೆ. ಕೇವಲ 3 ತಿಂಗಳ ಅವಧಿಯಲ್ಲಿ ರಾಜ್ಯದ ಜನತೆಯ ಮನಸ್ಸನ್ನು ಗೆದ್ದು ಬಿಗ್ ಬಾಸ್ ಸ್ಪರ್ಧೆಯ ವಿಜೇತರಾಗಿ 50 ಲಕ್ಷ ರೂ. ಹಣವನ್ನು ಗೆದ್ದುಕೊಳ್ಳುವುದೇ ಗುರಿಯನ್ನಾಗಿ ಇಟ್ಟುಕೊಂಡಿದ್ದಾರೆ. ಆದ್ದರಿಂದ ತಾವಿಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ಗಿಲ್ಲಿ ನಟ ಅವರದ್ದು ತುಂಬಾ ತಮಾಷೆಯ ಸ್ವಭಾವ. ಯಾವುದೇ ಸಮಯ ಸಿಕ್ಕಿದರೂ ಕಾಲೆಳೆಯುವುದು ಹಾಗೂ ಸೀರಿಯಸ್ ಎನ್ನಿಸುವಂತಹ ಒಂದು ಡೈಲಾಗ್ ಹೇಳುತ್ತಾರೆ. ಅದನ್ನು ಎದುರಿಗಿದ್ದವರು ಸಹಿಸಿಕೊಳ್ಳಲೂ ಆಗದೆ, ಒಪ್ಪಿಕೊಳ್ಳಲೂ ಆಗದೆ ಅಥವಾ ಸುಮ್ಮನಿರಲೂ ಆಗದಂತಹ ಪರಿಸ್ಥಿತಿಗೆ ಸಿಲುಕುತ್ತಾರೆ. ಹೀಗಾಗಿ, ತಕ್ಷಣಕ್ಕೆ ಕೆಲವರು ಕೋಪಗೊಳ್ಳುವುದು, ಬೈಯುವುದು ಇನ್ನು ಕೆಲವರು ನಕ್ಕು ಸುಮ್ಮನೆ ಹೋಗುತ್ತಾರೆ. ಇನ್ನು ಕೆಲವರು ಗಿಲ್ಲಿಗೆ ಬುದ್ಧಿ ಕಲಿಸಲು ಸಮಯವನ್ನು ಸಾಧಿಸಿ, ನಾಮಿನೇಷನ್ ಅಥವಾ ಕಳಪೆಯನ್ನು ಕೊಡುತ್ತಾರೆ.

ಲವ್ ಪ್ರಪೋಸ್ ಮಾಡಿದ್ದು ಹೇಗೆ?

ಇದೀಗ ಗಿಲ್ಲಿನಟ ಹಾಗೂ ಕಾವ್ಯಾ ಅವರು ಯಾವಾಗಲೂ ಮಾತನಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಕಾರಣ ಇದೊಂದು ಸ್ಪರ್ಧೆ ಎಂದು ತಿಳಿದುಕೊಂಡಿದ್ದು, ಅಕ್ಕ-ಪಕ್ಕದಲ್ಲಿ ಅಂಟಿಕೊಂಡೇ ಇರುತ್ತಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಗಿಲ್ಲಿನಟ ಮೇಕಪ್ ಮಾಡಿಕೊಳ್ಳುವ ಕೋಣೆಯಲ್ಲಿ ಕುಳಿತುಕೊಂಡು ಗಿಲ್ಲಿ ಮತ್ತು ಕಾವ್ಯ ಮಾತನಾಡುತ್ತಾರೆ. ಮೊದಲು ಗಿಲ್ಲಿನಟ ಕಾವ್ಯಾಳನ್ನು ಕರೆದು ನಾನು ನಿನಗೆ ಏನೋ ಒಂದು ಕೊಡುತ್ತೇನೆ, ಬೇಡ ಎನ್ನದೇ ತೆಗೆದುಕೊಳ್ಳಬೇಕು ಎಂದು ಹೇಳುತ್ತಾನೆ. ಇದಕ್ಕೆ ಒಪ್ಪಿದ ಕಾವ್ಯಾ ಗಿಲ್ಲಿ ಕೊಟ್ಟಿದ್ದನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಕೈಯಲ್ಲಿ ಹಿಡಿದ ಸಣ್ಣ ಸಾಮಗ್ರಿಯೊಂದನ್ನು ಕಾವ್ಯಾಳಿಗೆ ನೀಡುತ್ತಿದ್ದಂತೆ .ಐ ಲವ್ ಯು' ಎಂದು ಹೇಳುತ್ತಾನೆ.

ಇದನ್ನು ಕೇಳುತ್ತಲೇ ನಗಾಡುತ್ತಲೇ ಕೋಪಗೊಂಡಂತೆ ಮತ್ತು ಆಶ್ವರ್ಯದಿಂದಲೇ ಗಿಲ್ಲಿ ನಟನಿಗೆ ಏನಂದೆ, ಏನಂದೇ ಎಂದು ಜೋರು ಧ್ವನಿಯಲ್ಲಿ ಕೇಳುತ್ತಾರೆ. ಆಗ ಏನಿಲ್ಲ ಬಿಡು ಆಯ್ತು ಹೋಗು ಎಂದು ಗಿಲ್ಲಿ ಹೇಳುತ್ತಾನೆ. ಆಗ ನಿನ್ನ ಮಾತನ್ನು ಹಿಂದಕ್ಕೆ ತಗೋ ಎಂದು ಹೇಳಿದರೂ ಅವನು ಕೇಳದೇ, ಹಾಗಾದ್ರೆ ನೀನು ನನಗೆ ಅಣ್ಣ ಅಂದಿದ್ದನ್ನು ವಾಪಸ್ ತಗೋ ಎಂದು ಸವಾಲು ಹಾಕುತ್ತಾನೆ. ಆಗ ಕಾವ್ಯಾ ಕೂಡ ನಗಾಡುತ್ತಾ ಈ ಕ್ಷಣವನ್ನು ತಮಾಷೆ ಎಂಬಂತೆ ನಡೆದುಕೊಳ್ಳುತ್ತಾರೆ.

ಆದರೆ, ಈ ವಿಡಿಯೋ ಹಳೆಯ ವಿಡಿಯೋ ಆಗಿದ್ದು, ಅವರ ಆಟವನ್ನು ಪ್ರಮೋಷನ್ ಮಾಡುವ ಉದ್ದೇಶದಿಂದ ಗಿಲ್ಲಿನಟ ಅವರ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮರು ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿಡಿಯೋ ಕೂಡ ಭಾರೀ ವೈರಲ್ ಆಗುತ್ತಿದೆ.