₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?

ತಮಿಳುನಾಡಲ್ಲಿ ವಿಜಯ ಶಕೆ ಆರಂಭವಾಗಿದೆ.. ದ್ರಾವಿಡ ನಾಡಲ್ಲಿ, ವಿಜಯ ಪತಾಕೆ ಹಾರಾಡ್ತಾ ಇದೆ.. ಆದ್ರೆ ಇಲ್ಲಿ ಪ್ರಶ್ನೆ ಇರೋದು, ಮುಖ್ಯವಾಗಿ 2.. ಮೊದಲನೇದು.. ವಿಜಯ್ ಸಿಎಮ್ ಕುರ್ಚಿ ಅದೆಷ್ಟು ಸೇಫ್? ಇನ್ನೊಂದು..

Share this Video
  • FB
  • Linkdin
  • Whatsapp

ತಮಿಳುನಾಡಲ್ಲಿ ವಿಜಯ ಶಕೆ ಆರಂಭವಾಗಿದೆ.. ದ್ರಾವಿಡ ನಾಡಲ್ಲಿ, ವಿಜಯ ಪತಾಕೆ ಹಾರಾಡ್ತಾ ಇದೆ.. ಆದ್ರೆ ಇಲ್ಲಿ ಪ್ರಶ್ನೆ ಇರೋದು, ಮುಖ್ಯವಾಗಿ 2.. ಮೊದಲನೇದು.. ವಿಜಯ್ ಸಿಎಮ್ ಕುರ್ಚಿ ಅದೆಷ್ಟು ಸೇಫ್? ಇನ್ನೊಂದು, ವಿಜಯ್ ಕೊಟ್ಟಿರೋ ವಾಗ್ದಾನ ಯಾವಾಗ ಪೂರೈಕೆ ಮಾಡ್ತಾರೆ? ಹೇಗೆ ಕೊಟ್ಟ ಮಾತು ಈಡೇರಿಸ್ತಾರೆ, ಅದರ ಪರಿಣಾಮ ತಮಿಳುನಾಡಿನ ಮೇಲೆ ಹೇಗಾಗುತ್ತೆ ಅಂತ.. ಈ ಎರಡು ಅನುಮಾನಗಳು ಹುಟ್ಟಿಕೊಂಡಿದ್ದೇಕೆ? ಅದಕ್ಕೆ ಉತ್ತರ ಏನು? ವಿಜಯ್ ಅವರ ವಾಗ್ದಾನ ನೋಡಿದ ಎಂಥವರಿಗೂ ಕೂಡ, ಇದು ಸುಲಭದ ಕೆಲಸ ಅಲ್ಲ ಅನ್ನೋದು ಅರ್ಥವಾಗತ್ತೆ.. ಅಷ್ಟೇ ಅಲ್ಲ, ಅಲ್ಲಿ ವಿಜಯ್ ಸ್ವಂತ ಬಲದ ಮೇಲೆ ಸರ್ಕಾರ ಮಾಡಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಬ್ಬ ಸದಸ್ಯ ಮುನಿಸಿಕೊಂಡ್ರೂ, ಕುರ್ಚಿಗೇ ಕಂಟಕ ಇದೆ.. ಈ ಸವಾಲನ್ನ ಹೇಗೆ ನಿಭಾಯಿಸ್ತಾರೆ ವಿಜಯ್? ವಿಜಯ್ ಕೊಟ್ಟ ಪ್ರತಿಯೊಂದು ಭರವಸೆ ಕೂಡ ಕೇಳೋಕೆ ಮಾಸ್ ಸಿನಿಮಾ ಡೈಲಾಗ್ ತರಹ ಸೂಪರ್ ಆಗಿದೆ.. ಆದ್ರೆ, ಈ ಕಥೆ ಇರೋದು ತಮಿಳುನಾಡಿನ ಖಜಾನೆಯಲ್ಲಿ. ಈ ಹೊರೆ ಇಳಿಸೋದಕ್ಕೆ, ಅಥವಾ ಹೊರೆ ಹೊರೆಯೇ ಅಲ್ಲ ಅಂತ ತೋರಿಸೋಕೆ, ವಿಜಯ್ ಯಾವ್ದಾದ್ರೂ ದಾರಿ ಹುಡುಕ್ಕೊಂಡಿದಾರಾ? ಅಥವಾ ಏನಾದ್ರೂ ಮ್ಯಾಜಿಕ್ ಮಾಡ್ತಾರಾ? ವಿಜಯ್ ಅವರು ಕೊಟ್ಟಿರೋ ಪ್ರಾಮಿಸ್‌ಗಳನ್ನ ಈಡೇರಿಸೋಕೆ ವರ್ಷಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬೇಕು.. ಇದನ್ನ ತರೋದಕ್ಕೆ ವಿಜಯ್ ಟೀಂ ಹತ್ತಿರ ಕೆಲವು ಐಡಿಯಾಗಳಿವೆ. ಏನದು?

Related Video