
ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
ಪ್ರಧಾನಿ ಮೋದಿಯವರ ಕರೆಯಿಂದ ಚಿನ್ನದ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದೇ ಸಮಯದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿದ್ದು, ಗ್ರಾಹಕರ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಈ ಎರಡೂ ಬೆಳವಣಿಗೆಗಳ ಹಿಂದಿನ ಆರ್ಥಿಕ ತರ್ಕವನ್ನು ಈ ವರದಿ ವಿಶ್ಲೇಷಿಸುತ್ತದೆ.
ಚಿನ್ನದ ಖರೀದಿ ಬಗ್ಗೆ ಮೋದಿ ಕರೆ ಕೊಟ್ಮೇಲೆ ಬಂಗಾರದ ಮಾರುಕಟ್ಟೆಯಲ್ಲಿ ನಿಜಕ್ಕೂ ಅಲ್ಲೋಲ ಕಲ್ಲೋಲ ಆಗಿದೆ.. ತೆರೆಗೆ ಬರೆಯಿಂದಲೂ ಭಯ ಬಿದ್ದಿರೋ ಹೂಡಿಕೆದಾರರು ಚಿನ್ನದ ಮುಖವನ್ನೇ ನೋಡದಂತಾಗಿದ್ದಾರೆ.. ಇನ್ನು ಆಭಾರಣ ಪ್ರಿಯರು ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಅಂತಾನೇ ಭಾವಿಸಿದ್ದಾರೆ.. ಈ ಮಧ್ಯೆ ಪೆಟ್ರೋಲ್ ಗ್ರಾಹಕರ ಜೇಬಂತೂ ದಿನದಿಂದ ದಿನಕ್ಕೆ ಖಾಲಿಯಾಗೋದು ಮಾತ್ರವಲ್ಲ.. ಸುಡೋದಕ್ಕೂ ಶುರುವಾಗಿದೆ..