09:01 AM (IST) Jan 16

India News Live 16th January:ಅಂಡರ್-19 ವಿಶ್ವಕಪ್ - ಅಮೆರಿಕ ಎದುರು ಯಂಗ್‌ ಇಂಡಿಯಾ ಶುಭಾರಂಭ!

ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೆನಿಲ್‌ ಪಟೇಲ್ ಮಾರಕ ಬೌಲಿಂಗ್ ದಾಳಿಗೆ (6 ವಿಕೆಟ್) ತತ್ತರಿಸಿದ ಯುಎಸ್‌ಎ 107 ರನ್‌ಗಳಿಗೆ ಆಲೌಟ್ ಆಯಿತು. ಅಭಿಗ್ಯಾನ್‌ ಅಜೇಯ 42 ರನ್‌ಗಳ ನೆರವಿನಿಂದ ಭಾರತ ಗೆದ್ದಿತು.

Read Full Story
07:55 AM (IST) Jan 16

India News Live 16th January:ಮಸ್ಕತ್ ತಲುಪಿದ ಎಂಜಿನ್‌ ಇಲ್ಲದ ಭಾರತದ ನೌಕೆ!

ಕೇವಲ ಗಾಳಿ ಮತ್ತು ನೌಕಾಯಾನದ ಪರದೆಗಳ (Sails) ಸಹಾಯದಿಂದ ಸಾಗಿದ ಈ ನೌಕೆಯು, ‘ವಿರುದ್ಧ ದಿಕ್ಕಿನ ಗಾಳಿ, ಗಾಳಿಯಿಲ್ಲದ ಶಾಂತ ಸ್ಥಿತಿ (Dead calms), ಭೋರ್ಗರೆಯುವ ಅಲೆಗಳು ಮತ್ತು ಆಧುನಿಕ ಹಡಗು ಸಂಚಾರ ಮಾರ್ಗಗಳ’ ಅಡಚಣೆ ಸೇರಿದಂತೆ ಹಲವು ಸವಾಲುಗಳನ್ನು ಈ ನೌಕೆಯು ಎದುರಿಸಬೇಕಾಯಿತು.

Read Full Story
07:55 AM (IST) Jan 16

India News Live 16th January:ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಹ್ಯಾಕಾಶ ಯಾನಿಯೊಬ್ಬರನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ತುರ್ತು ಕಾರ್ಯಾಚರಣೆಯೊಂದರಲ್ಲಿ ಯಶಸ್ವಿಯಾಗಿ ಭೂಮಿಗೆ ಮರಳಿ ಕರೆತಂದಿದೆ.

Read Full Story
07:54 AM (IST) Jan 16

India News Live 16th January:ಮುಂಬೈ ಪಾಲಿಕೆ ಚುನಾವಣೆಯಲ್ಲಿ ಅಳಿಸದ ಇಂಕ್‌ ಅಳಿಸಿದ ವಿವಾದ

ಗುರುವಾರ ನಡೆದ ಮುಂಬೈ ಸೇರಿದಂತೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಲಾದ ಅಳಿಸಲು ಆಗದ ಇಂಕಿನ ಗುರುತು ಅಳಿಸಿ ಹೋಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

Read Full Story
07:54 AM (IST) Jan 16

India News Live 16th January:ದರ ನಿಗದಿ ಪ್ರಕ್ರಿಯೆ ಸೀಕ್ರೆಟ್‌ ಬಹಿರಂಗಪಡಿಸಲ್ಲ: ರೈಲ್ವೆ

ಪ್ರಯಾಣಿಕರ ರೈಲಿನ ಟಿಕೆಟ್‌ ದರ ನಿಗದಿ ಹೇಗೆ ಮಾಡಲಾಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಅದು ವ್ಯಾಪಾರದ ಸೀಕ್ರೆಟ್‌. ಈ ದರ ನಿಗದಿ ಪ್ರಕ್ರಿಯೆಗೆ ಮಾಹಿತಿ ಹಕ್ಕುಗಳ ಕಾಯ್ದೆಯಿಂದ ರಕ್ಷಣೆ ಇದೆ ಎಂದು ಭಾರತೀಯ ರೈಲ್ವೆಯು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ತಿಳಿಸಿದೆ.

Read Full Story
07:54 AM (IST) Jan 16

India News Live 16th January:ಇರಾನ್‌ನತ್ತ ಅಮೆರಿಕದ ನೌಕಾಪಡೆಯ ದಂಡು

ಇರಾನ್‌ನೊಂದಿಗೆ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ, ತನ್ನ ನೌಕಾಪಡೆಯ ಮುಂಚೂಣಿ ದಾಳಿಯ ನೌಕೆಗಳನ್ನು ಅಮೆರಿಕ ಸರ್ಕಾರವು ಮಧ್ಯಪ್ರಾಚ್ಯದತ್ತ ರವಾನಿಸಿದೆ. ಇದರೊಂದಿಗೆ ಇರಾನ್‌ ಮೇಲೆ ಅಮೆರಿಕದ ದಾಳಿ ಮತ್ತಷ್ಟು ಸನ್ನಿಹಿತವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

Read Full Story
07:53 AM (IST) Jan 16

India News Live 16th January:ಗ್ರೀನ್‌ಲ್ಯಾಂಡ್‌ಗೆ ನ್ಯಾಟೋ ಸೈನಿಕರ ಪ್ರವೇಶ

ನಮಗೆ ಗ್ರೀನ್‌ಲ್ಯಾಂಡ್‌ ಬೇಕೇ ಬೇಕು ಎಂದು ಅಮೆರಿಕ ಪಟ್ಟು ಹಿಡಿದು ಕೂತಿರುವ ನಡುವೆಯೇ ಅಮೆರಿಕದ್ದೇ ನೇತೃತ್ವ ಹೊಂದಿರುವ ನ್ಯಾಟೋ ಮಿಲಿಟರಿ ಕೂಟದ ಭಾಗವಾಗಿರುವ ಫ್ರಾನ್ಸ್‌, ಜರ್ಮನಿ ಸೇರಿ ಇತರೆ ಯುರೋಪಿಯನ್‌ ದೇಶಗಳು ಗ್ರೀನ್‌ಲ್ಯಾಂಡ್‌ ರಕ್ಷಣೆಗಾಗಿ ತಮ್ಮ ಸೇನೆಯನ್ನು ಕಳುಹಿಸಿಕೊಟ್ಟಿವೆ

Read Full Story
07:53 AM (IST) Jan 16

India News Live 16th January:ಹೊಸ ‘ಪಂಚ್‌’ ಕೊಟ್ಟ ಟಾಟಾ ‘ಕಮಾಂಡ್ ಮ್ಯಾಕ್ಸ್’!

ಭಾರತದ ಮುಂಚೂಣಿ ಕಾರು ಮತ್ತು ಎಸ್‌ಯುವಿಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., (ಟಿಎಂಪಿವಿ) ಹೆಚ್ಚು ವೇಗ, ಹೆಚ್ಚು ಸ್ಮಾರ್ಟ್ ಹೊಂದಿರುವ ಹೊಸ ಟಾಟಾ ‘ಪಂಚ್‌ ಕಮಾಂಡ್ ಮ್ಯಾಕ್ಸ್’ ಎಂಬ ಹೆಸರಿನ ಕಾರು ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Read Full Story
07:52 AM (IST) Jan 16

India News Live 16th January:ದೇಶದ ಶ್ರೀಮಂತ ಪಾಲಿಕೆಗೆ ಮೊದಲ ಬಿಜೆಪಿ ಮೇಯರ್‌?

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಶಾಂತಿಯುತ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ.

Read Full Story
07:52 AM (IST) Jan 16

India News Live 16th January:ಸಿಂದೂರದಿಂದ ಪಾಕ್‌ ತಲ್ಲಣ ಆಗಿತ್ತು : ಉಗ್ರನಿಂದ್ಲೇ ಒಪ್ಪಿಗೆ

ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಭಾರತ ಕೈಗೊಂಡ ‘ಆಪರೇಷನ್‌ ಸಿಂದೂರ’ವು, ನಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಾನವಾದ ಮುರೀದ್ಕೆ ಮಸೀದಿಯನ್ನು ನಾಮಾವಶೇಷ ಮಾಡಿತ್ತು ಎಂದು ಸ್ವತಃ ಲಷ್ಕರ್‌ ಉಗ್ರ ಹಫೀಜ್‌ ಅಬ್ದುಲ್‌ ರೌಫ್‌ ಒಪ್ಪಿಕೊಂಡಿದ್ದಾನೆ.

Read Full Story
07:52 AM (IST) Jan 16

India News Live 16th January:ಗ್ರೋಕ್‌ನಲ್ಲಿ ನೈಜ ವ್ಯಕ್ತಿ ಅಶ್ಲೀಲ ಚಿತ್ರ ಸೃಷ್ಟಿ ಅವಕಾಶಕ್ಕೆ ಬ್ರೇಕ್‌

ಎಲಾನ್ ಮಸ್ಕ್ ಒಡೆತನದ ಎಐ ಚಾಟ್‌ಬಾಟ್‌ ಗ್ರೋಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಎಡಿಟ್‌ ಮಾಡುತ್ತಿರುವ ಕುರಿತು ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾದ ಬೆನ್ನಲ್ಲೇ, ಯಾವುದೇ ನೈಜ ವ್ಯಕ್ತಿಯ ಚಿತ್ರವನ್ನು ಬೆತ್ತಲೆ/ಅಶ್ಲೀಲಗೊಳಿಸುವ ಆಯ್ಕೆಯನ್ನು ಗ್ರೋಕ್‌ನಿಂದ ತೆಗೆದುಹಾಕಲು ನಿರ್ಧರಿಸಿದೆ.

Read Full Story
07:51 AM (IST) Jan 16

India News Live 16th January:ಇರಾನ್‌ ಭಾರತೀಯರ ಏರ್‌ಲಿಫ್ಟ್‌ - ಅಮೆರಿಕದ ದಾಳಿ ಭೀತಿ

ಕ್ಷಣಕ್ಷಣಕ್ಕೂ ಅಮೆರಿಕ ದಾಳಿಯ ಭೀತಿ ಹೆಚ್ಚಾಗುತ್ತಿರುವ ನಡುವೆಯೇ ಇರಾನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ವಿಮಾನದ ಮೂಲಕ ತವರಿಗೆ ಕರೆತರಲು ಭಾರತ ಸರ್ಕಾರ ಸಜ್ಜಾಗಿದೆ. ಎಲ್ಲವೂ ಅಂದುಕೊಂಡರೆ ನಡೆದರೆ ಮೊದಲ ತಂಡ ಶುಕ್ರವಾರ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

Read Full Story
07:51 AM (IST) Jan 16

India News Live 16th January:ಈ ಬಾರಿ ಗುಂಡಿನ ಗುರಿ ತಪ್ಪಲ್ಲ : ಟ್ರಂಪ್‌ಗೆ ಇರಾನ್‌ ವಾರ್ನಿಂಗ್‌!

ಇರಾನ್‌ ಮತ್ತು ಅಮೆರಿಕ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಇರಾನ್‌ ಹತ್ಯೆಯ ಬೆದರಿಕೆ ಹಾಕಿದೆ. ಈ ಬಾರಿ ಗುಂಡು ಗುರಿ ತಪ್ಪಲ್ಲ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಎಚ್ಚರಿಕೆ ನೀಡಿದೆ.

Read Full Story
07:50 AM (IST) Jan 16

India News Live 16th January:ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಬಹುತೇಕ ಫೈನಲ್‌- ಬಾಕಿ ಉಳಿದ ವಿಷಯ ಇತ್ಯರ್ಥಕ್ಕೆ ಚರ್ಚೆ

ರಷ್ಯಾ ತೈಲ ಖರೀದಿ ವಿಷಯ ಉಭಯ ದೇಶಗಳ ನಡುವೆ ಬಿಕ್ಕಟ್ಟು, ತೆರಿಗೆ ದಾಳಿಗೆ ಕಾರಣವಾದ ಹೊರತಾಗಿಯೂ ಅಮೆರಿಕ ಮತ್ತು ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಎರಡೂ ಕಡೆಯವರು ಸಿದ್ಧವಾದಾಗ ಅದನ್ನು ಘೋಷಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿದೆ.

Read Full Story