ಸಿಂಗಾಪುರದಲ್ಲಿ ಕಂಡುಬಂದ ಅಪರೂಪದ ಡೌಕ್ ಲಂಗೂರ್ ಕೋತಿಯೊಂದು ತನ್ನ ವಿಶಿಷ್ಟ ನೋಟದಿಂದ ಎಲ್ಲರ ಗಮನ ಸೆಳೆದಿದೆ. ನೈಸರ್ಗಿಕವಾಗಿಯೇ ಬಟ್ಟೆ ಧರಿಸಿದಂತೆ ಕಾಣುವ ಈ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕೃತಿಯ ಈ ಅದ್ಭುತ ಸೃಷ್ಟಿಗೆ ನೆಟ್ಟಿಗರು ಬೆರಗಾಗಿದ್ದಾರೆ.

ಮನುಷ್ಯ ಕೃತಕವಾಗಿ ಏನೇನನ್ನೋ ಸೃಷ್ಟಿಸಬಹುದು. ಆದರೆ ದೇವರ ಈ ಪ್ರಕೃತಿಯ ಸೃಷ್ಟಿಯ ಸೃಜನಶೀಲತೆಯ ಮುಂದೆ ಮನುಷ್ಯನ ಸೃಷ್ಟಿ ಏನೇನು ಅಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೌದು ನಾವು ನಮ್ಮ ಸುತ್ತಮುತ್ತಲಿನ ಪ್ರಕೃತಿಯ ನಡುವೆ ಹಲವು ಅಪರೂಪದ ವೈವಿಧ್ಯಮಯವೆನಿಸಿದ ಜೀವಿಗಳನ್ನು ನೋಡಿದ್ದೇವೆ. ಅಂತಹ ಜೀವಿಗಳಲ್ಲಿ ಮನುಷ್ಯನಿಗೆ ವರ್ತನೆಗೆ ಸ್ವಲ್ಪ ಹೋಲಿಕೆ ಇರುವ ಕೋತಿಯೂ ಕೂಡ ಒಂದು ಕೇವಲ ಭಾರತವೊಂದರಲ್ಲಿ ಐದಕ್ಕಿಂತಳು ಹೆಚ್ಚು ತಳಿಯ ಕೋತಿಗಳಿವೆ. ಹೀಗಿರುವಾಗ ಇಲ್ಲೊಂದು ಕಡೆ ಮಹಿಳೆಯೊಬ್ಬರು ಸಿಂಗಾಪುರದ ಕೋತಿಯೊಂದನ್ನು ಪರಿಚಯ ಮಾಡಿದ್ದು, ಆ ಕೋತಿಯ ನೋಟ ನೋಡುಗರಿಗೆ ಯಾವುದೋ ಅನಿಮೇಷನ್ ಚಿತ್ರದಂತೆ ಕಾಣುತ್ತಿದೆ.

ದೇವರೇ ಬಹಳ ಸಮಯ ತೆಗೆದುಕೊಂಡು ಈ ಕೋತಿಯನ್ನು ಸೃಷ್ಟಿ ಮಾಡಿದಂತಿದೆ ಈ ಕೋತಿಯ ನೋಟ. ಹೌದು ಶಾಲೆಗಳಲ್ಲಿ ನಾಟಕಗಳಲ್ಲಿ ಕೋತಿಯ ವೇಷ ಹಾಕುವವವರಿಗೆ ಹೇಗೆ ವೇಷ ಭೂಷಣ ಹಾಕುತ್ತಾರೋ ಹಾಗೆಯೇ ನಿಜವಾಗಿಯೂ ಈ ಕೋತಿ ಇದೆ. ಅನಿಮೇಷನ್ ಸಿನಿಮಾಗಳಲ್ಲಿ ಕೊತಿ ಹೇಗಿರುತ್ತದೋ ಹಾಗೆ ಈ ಕೋತಿ ಇದೆ. ಇದನ್ನು ನೋಡಿ ಹುಡುಗಿಯೊಬ್ಬಳು ನಿಜವಾಗಿ ಬೆರಗಾಗಿದ್ದು, ಈ ಕೋತಿಯ ಅಮೋಘ ಸೌಂದರ್ಯದ ಬಗ್ಗೆ ಪ್ರಪಂಚಕ್ಕೆ ತಿಳಿಸುವುದಕ್ಕೆ ಆಕೆ ಈ ಕೋತಿಯ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗುತ್ತಿದೆ. ಅನೇಕರು ಸಿಂಗಾಪುರದ ಈ ಕೋತಿಯ ಸೌಂದರ್ಯಕ್ಕೆ ಮರುಳಾಗಿದ್ದಾರೆ.

hangrybynature ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಇದು ವಿಶ್ವದ ಅಪರೂಪದ ಮಂಗಗಳಲ್ಲಿ ಒಂದಾದ ಡೌಕ್ ಲಂಗೂರ್ ಎಂದು ಅವರು ಹೇಳಿದ್ದಾರೆ. ಅದರಲ್ಲೂ ಗಮನ ಸೆಳೆಯುವುದು ಈ ಕೋತಿಯ ವರ್ಣರಂಜಿತವಾದ ನೋಟ, ಅಂದರೆ ನೋಡುವುದಕ್ಕೆ ಯಾರೋ ತಲೆಗೆ ಕಪ್ಪನೆಯ ಟೋಪಿ, ಬಿಳಿಯಾದ ಗಡ್ಡ, ಬೂದಿ ಬಣ್ಣದ ಮೇಲ್ಭಾಗದ ಶರ್ಟ್ ಕೈಗಳಿಗೆ ಕಾಲಿಗೆ ತುಸು ಕಾಫಿ ಮಿಶ್ರಿತ ಬಣ್ಣದ ಪ್ಯಾಂಟ್ ಕೈಗಳ ತುದಿಗೆ ಬಿಳಿ ಬಣ್ಣದ ಕೋಟ್ ಹಾಕಿದಂತೆ ಇವುಗಳು ಕಾಣುತ್ತಿವೆ. ಹಾಗಂತ ಯಾರೋ ಇವುಗಳಿಗೆ ಈ ರೀತಿ ಬಟ್ಟೆ ಹಾಕಿ ಕೂರಿಸಿಲ್ಲ, ಇವುಗಳಿಗೆ ನೈಸರ್ಗಿಕವಾಗಿ ದೇವರೇ ಮ್ಯಾಚಿಂಗ್ ಬಟ್ಟೆ ಹಾಕಿ ಕಳುಹಿಸಿದಂತೆ ಕಾಣುತ್ತಿವೆ ಈ ಕೋತಿಗಳು.

ಇದನ್ನೂ ಓದಿ: ನರಕಕ್ಕೆ ಬನ್ನಿ ಅಂತ ಕರೆಯುತ್ತೆ ಈ ವೀಡಿಯೋ: ಅನೇಕರ ತಲೆ ಕೆಡಿಸಿದ 140 ವರ್ಷಗಳ ಅವಧಿಯ ವಿಚಿತ್ರ ಯುಟ್ಯೂಬ್ ವೀಡಿಯೋ

ವೈರಲ್ ಆದ ವೀಡಿಯೋದಲ್ಲಿ ಎರಡು ಕಾಲುಗಳ ಮೇಲೆ ಎರಡು ಕೈಗಳನ್ನಿಟ್ಟು ಈ ಕೋತಿ ಕುಳಿತಿದ್ದಾರೆ ಯಾರೋ ವಯಸ್ಸಾದವರೊಬ್ಬರು ಕಟ್ಟೆಯ ಮೇಲೆ ಕುಳಿತಂತೆ ಕಾಣಿಸುತ್ತಿದೆ. ವಿದೇಶಿಯರಂತೆ ಬೆಳ್ಳನೆಯಮೊಗ ಕಪ್ಪಾದ ಕಣ್ಣುಗಳು ನೋಡುವುದಕ್ಕೆ ಈ ಕೋತಿಗಳನ್ನು ಎರಡು ಕಣ್ಣುಗಳು ಸಾಲದು. ಕೋತಿಯ ಸೌಂದರ್ಯಕ್ಕೆ ಆ ಯುವತಿ ಫುಲ್ ಫಿದಾ ಆಗಿದ್ದು, ಬಟ್ಟೆ ಹಾಕಿ ಕೂತಂತೆ ಕೋತಿ ಕಾಣಿಸುತ್ತಿದೆ ಇತಹ ಕೋತಿಯನ್ನು ನಾನು ಹಿಂದೆಂದು ಎಲ್ಲೂ ನೋಡಿಲ್ಲ ಎಂದು ವಿಡಿಯೋದಲ್ಲಿ ಹೇಳುತ್ತಾರೆ.

ಇದು ಡೌಕ್ ಲಂಗೂರ್. ವಿಶ್ವದ ಅತ್ಯಂತ ಅಪರೂಪದ ಕೋತಿ. ನೀವು ಅದೃಷ್ಟವಂತರಾಗಿದ್ದರೆ, ವಿಯೆಟ್ನಾಂನ ಡಾನಾಂಗ್‌ನಲ್ಲಿರುವ ಕಾಡಿನಲ್ಲಿ ಈ ವ್ಯಕ್ತಿಯನ್ನು ನೀವು ನೋಡಬಹುದು, ಅಥವಾ ನಾವು ಮಾಡಿದ್ದನ್ನು ಮಾಡಿ ಮತ್ತು ಅವುಗಳನ್ನು ಹುಡುಕಲು ಸಿಂಗಾಪುರದ @mandaiwildlifereserve ನಲ್ಲಿರುವ ರೇನ್‌ಫಾರೆಸ್ಟ್ ವೈಲ್ಡ್ ಏಷ್ಯಾಕ್ಕೆ ಹೋಗಿ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಹೊರ ಪ್ರಪಂಚದ ಜೊತೆ ಸಂಪರ್ಕ ಇಲ್ಲದ ಅಮೇಜಾನ್ ಕಾಡಿನ ಕಾಡು ಮನುಷ್ಯರ ಮೊದಲ ವೀಡಿಯೋ

ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿ ಕೋತಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಬೂದು ಬಣ್ಣದ ಜಾಕೆಟ್‌ಗಳು, ಬರ್ಗಂಡಿ ಎತ್ತರದ ಬೂಟುಗಳು, ಕಪ್ಪು ಬಿಗಿಯುಡುಪುಗಳು ಮತ್ತು ಬಿಳಿ ಕೈಗವಸುಗಳು ಮತ್ತು ಹೊಂದಾಣಿಕೆಯ ಟೋಪಿ ಅದು ಜಂಗಲ್ ಕೌಚರ್ ಎಂದು ಒಬ್ಬರು ಈ ಕೋತಿಯನ್ನು ವರ್ಣಿಸಿದ್ದಾರೆ. ಅವರು ಹಲವು ಪೀಳಿಗೆಯಿಂದ ಬಂದ ಸಂಪತ್ತನ್ನು ಹೊಂದಿರುವಂತೆ ಕಾಣುತ್ತಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ವಾವ್ ಅವರು ಬಲವಾದ ಫೇಸ್ ಕಾರ್ಡ್‌ಗಳೊಂದಿಗೆ ಹಾಗೂ ಉತ್ತಮ ಬಟ್ಟೆಗಳೊಂದಿಗೆ ಜನಿಸಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಕುಂಗ್ ಫೂ ಚಿತ್ರದಲ್ಲಿನ ಹಳೆಯ ಮಾಸ್ಟರ್‌ನಂತೆ ಕಾಣುತ್ತಾರೆ ತುಂಬಾ ಸುಂದರವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕೋತಿಯನ್ನು ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ.

View post on Instagram