ಮುಂಬೈ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಭರ್ಜರಿ ಗೆಲುವು ಕಂಡಿದ್ದಾರೆ. ಬಿಜೆಪಿ, ಶಿವಸೇನೇ ಸರಿದಂತೆ ಪ್ರಮುಖ ಪಕ್ಷಗಳಿಂದ ಪ್ರಬಲ ಸ್ಪರ್ಧೆ ಎದುರಿಸಿದ ಅಭ್ಯರ್ಥಿ ಅಭೂತಪೂರ್ವ ಗೆಲುವು ಕಂಡಿದ್ದಾರೆ.
ಮುಂಬೈ (ಜ.16) ಮುಂಬೈ ಮಹಾನಗರ ಪಾಲಿಕೆ ಚುನಾವಣೆ ದೇಶಾದ್ಯಂತ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿ, ಶಿವಸೇನೆ, ಅಜಿತ್ ಪವಾರ್ ಬಣದ ಎನ್‌ಸಿಪಿ ಮೈತ್ರಿ ಮಹಾಯುತಿಗೆ ಜನರು ಮಣೆ ಹಾಕಿದ್ದಾರೆ. ವಿಶೇಷ ಅಂದರೆ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಾಹಿತಿ, ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಾಂತ್ ಪಂಗಾರ್ಕರ್ ಗೆಲುವಿನ ಸಂಭ್ರಮ ಆಚರಿಸಿದ್ದಾರೆ.
ಜಲ್ನಾ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಸ್ಪರ್ಧಿ
ಮುಂಬೈನ ಜಲ್ನಾ ಮುನ್ಸಿಪಲ್ ಕಾರ್ಪೋರೇಶನ್‌ನ ವಾರ್ಡ್ 13ರಲ್ಲಿ ಶ್ರೀಕಾಂತ್ ಪಂಗಾರ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿ, ಎಕನಾಥ ಶಿಂಧೆ ಶಿವಸೇನೆ ಸೇರಿದಂತೆ ಪ್ರಮುಖ ಪಕ್ಷಗಳಿಂದ ಪ್ರಬಲ ಸ್ಪರ್ಧೆ ಎದುರಿಸಿದ್ದರು. ಭರ್ಜರಿ 2,621 ಮತಗಳ ಅಂತರದಿಂದ ಶ್ರೀಕಾಂತ್ ಗೆಲುವು ದಾಖಲಿಸಿದ್ದಾರೆ. ಶ್ರೀಕಾಂತ್ ಪಂಗಾರ್ಕರ್ ಗೆಲುವಿನ ಬೆನ್ನಲ್ಲೇ ಜಲ್ನಾ ವಾರ್ಡ್ 13ರಲ್ಲಿ ಭಾರಿ ಸಂಭ್ರಮಾಚರಣೆ ಶುರುವಾಗಿದೆ. ಗೆಲುವಿನ ಬಳಿಕ ಮಾತನಾಡಿದ ಶ್ರೀಕಾಂತ್, ಜನತೆಗೆ ಧನ್ಯವಾದ ಹೇಳಿದ್ದಾರೆ. ಸತತ ಆರೋಪಗಳು,ಹಲವ ಪಕ್ಷಗಳಿಂದ ಆದ ಹಿನ್ನಡೆಗೆ ಜನರು ಉತ್ತರಿಸಿದ್ದಾರೆ. ಜನ ಸೇವೆಯಲ್ಲಿ ಆರೋಪಗಳು ಬರುತ್ತಲೇ ಇರುತ್ತದೆ. ಎಲ್ಲೀವರೆಗೆ ಜನರು ಬೆಂಬಲ ನೀಡುತ್ತಾರೆ, ಅಲ್ಲೀವರೆಗೆ ಸೇವೆ ಮಾಡುತ್ತೇನೆ ಎಂದು ಶ್ರೀಕಾಂತ್ ಪಂಗಾರ್ಕರ್ ಹೇಳಿದ್ದಾರೆ.
2017ರ ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿ
2017ರಲ್ಲಿ ಕನ್ನಡ ಜನಪ್ರಿಯತ ಲೇಖಕಿ, ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಎಡಪಂಥೀಯ ವಿಚಾರಧಾರೆ ಹೊಂದಿದ್ದ ಗೌರಿ ಲಂಕೇಶ್ ಮನೆ ಹೊರಭಾಗದಲ್ಲಿ ಹತ್ಯೆಯಾಗಿದ್ದರು. ಗೌರಿ ಲಂಕೇಶ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಇದೇ ಶ್ರೀಕಾಂತ್ ಪಂಗಾರ್ಕರ್ ಪ್ರಮುಖ ಆರೋಪಿಯಾಗಿದ್ದಾರೆ.
ಶಿವಸೇನೆ ಸೇರ್ಪಡೆ ಹಿನ್ನಡೆ
2024ರಲ್ಲಿ ಶ್ರೀಕಾಂತ್ ಪಂಗಾರ್ಕರ್ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷ ಸೇರಿಕೊಂಡಿದ್ದರು. ಆದರೆ ಗೌರಿ ಲಂಕೇಶ್ ಆರೋಪಿಯನ್ನು ಶಿವಸೇನೆ ಪಕ್ಷಕ್ಕೆ ಸೇರಿಸಿಕೊಂಡಿದೆ ಎಂದು ತೀವ್ರ ವಿರೋಧಗಳು ವ್ಯಕ್ತವಾಗಿತ್ತು. ಹೀಗಾಗಿ ಶಿವಸೇನೆ ಪಕ್ಷದಿಂದ ಅನಿವಾರ್ಯವಾಗಿ ಶ್ರೀಕಾಂತ್ ಹಿಂದೆ ಸರಿಯಬೇಕಾಯಿತು. ಇತ್ತ ಶಿವಸೇನೆ, ಶ್ರೀಕಾಂತ್ ಪಂಗಾರ್ಕರ್ ಪಕ್ಷ ಸೇರ್ಪಡೆಯನ್ನು ರದ್ದುಗೊಳಿಸಿತ್ತು.
ಮುಂಬೈ ಪಾಲಿಕೆ ಚುನಾವಣೆ
ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಗೆಲುವು ದಾಖಲಿಸಿದೆ. 227 ವಾರ್ಡ್‌ಗೆ ಚುನಾವಣೆ ನಡೆದಿತ್ತು. ಸಂಜೆ ವರೆಗಿನ ಫಲಿತಾಂಶ ಪ್ರಕರಾ, ಮಹಾಯುತಿ 116 ಸ್ಥಾನಗಳ ಗೆಲುವಿನ ಮೂಲಕ ಮ್ಯಾಜಿಕ್ ನಂಬರ್ ದಾಟಿದೆ. ಇತ್ತ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 85 ವಾರ್ಡ್ ಗೆದ್ದಿತ್ತು.


