- Home
- Business
- ಅಲಿಬಾಗ್‌ನಲ್ಲಿ ಮತ್ತೊಂದು ದುಬಾರಿ ಆಸ್ತಿ ಖರೀದಿಸಿದ ವಿರುಷ್ಕಾ: ಸ್ಟಾಂಪ್ ಡ್ಯೂಟಿಯೇ 2.27 ಕೋಟಿ: ಆಸ್ತಿ ಮೊತ್ತವೆಷ್ಟು?
ಅಲಿಬಾಗ್‌ನಲ್ಲಿ ಮತ್ತೊಂದು ದುಬಾರಿ ಆಸ್ತಿ ಖರೀದಿಸಿದ ವಿರುಷ್ಕಾ: ಸ್ಟಾಂಪ್ ಡ್ಯೂಟಿಯೇ 2.27 ಕೋಟಿ: ಆಸ್ತಿ ಮೊತ್ತವೆಷ್ಟು?
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ ಜಂಟಿಯಾಗಿ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ. ಸುಮಾರು 21,010 ಚದರ ಮೀಟರ್ ವಿಸ್ತೀರ್ಣದ ಆಸ್ತಿಗಾಗಿ ಅವರು 2.27 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ.

ಅಲಿಬಾಗ್ ಬಳಿ ವಿರುಷ್ಕಾ ಜೋಡಿಯಿಂದ ಮತ್ತೊಂದು ಆಸ್ತಿ ಖರೀದಿ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಜಂಟಿಯಾಗಿ ಅಲಿಬಾಗ್ ಬಳಿ ಮತ್ತೊಂದು ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ.
37.86 ಕೋಟಿ ರೂಪಾಯಿ ಮೌಲ್ಯದ ಆಸ್ತಿ
ಮಹಾರಾಷ್ಟ್ರದ ರಾಯ್‌ಗಢ ಜಿಲ್ಲೆಯ ಅಲಿಬಾಗ್‌ನಲ್ಲಿ ಅವರು ಸುಮಾರು 37.86 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಮಾಹಿತಿ ವಿಶ್ಲೇಷಕ ಸಂಸ್ಥೆಯಾದ ಕ್ರೀ ಮ್ಯಾಟ್ರಿಕ್ಸ್(CRE Matrix) ವರದಿ ಮಾಡಿದೆ.
21,010 ಚದರ ಮೀಟರ್ ವಿಸ್ತೀರ್ಣದ ಆಸ್ತಿ
ಅಲಿಬಾಗ್‌ನ ವಿಲೇಜ್ ಜಿರಾದ್‌ನಲ್ಲಿರುವ ಒಟ್ಟು 21,010 ಚದರ ಮೀಟರ್ ವಿಸ್ತೀರ್ಣದ ಆಸ್ತಿಯನ್ನು ಈ ದಂಪತಿ ಖರೀದಿಸಿದ್ದಾರೆ. ಸೋನಾಲಿ ಅಮಿತ್ ರಾಜ್‌ಪೂತ್ ಎಂಬುವವರು ಈ ಆಸ್ತಿಯನ್ನು ಮಾರಾಟ ಮಾಡಿದ್ದರೆ, ಸಮೀರಾ ಲ್ಯಾಂಡ್ ಅಸೆಟ್ ಪ್ರೈವೇಟ್ ಲಿಮಿಟೆಡ್ ದೃಢೀಕರಿಸುವ ಪಾರ್ಟಿಯಾಗಿತ್ತು. 2026ರ ಜನವರಿ 13ರಂದು ಈ ಆಸ್ತಿಯ ನೋಂದಣಿ ಕಾರ್ಯ ನಡೆದಿದೆ.
ಆಸ್ತಿ ನೋಂದಣಿಗೆ 2.27 ಕೋಟಿ ರೂ.ಗಳ ಮುದ್ರಾಂಕ ಶುಲ್ಕ
ಈ ಆಸ್ತಿಯನ್ನು ಖರೀದಿಸುವ ವೇಳೆ ಆಸ್ತಿ ಕೊಂಡವರಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಆಸ್ತಿ ನೋಂದಣಿಗಾಗಿ 2.27 ಕೋಟಿ ರೂ.ಗಳ ಮುದ್ರಾಂಕ ಶುಲ್ಕವನ್ನು(stamp duty) ಪಾವತಿಸಿದ್ದಾರೆ.
ಮುಂಬೈಗೆ ಹತ್ತಿರವಿರುವ ಕರಾವಳಿ ಪಟ್ಟಣವಾದ ಅಲಿಬಾಗ್
ಮುಂಬೈಗೆ ಹತ್ತಿರವಿರುವ ಕರಾವಳಿ ಪಟ್ಟಣವಾದ ಅಲಿಬಾಗ್ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಭೂಮಿಯನ್ನು ಖರೀದಿಸುವ ಮತ್ತು ಎರಡನೇ ಮನೆಗಳನ್ನು ಬಯಸುವ ಹೆಚ್ಚಿನ ನಿವ್ವಳ ಮೌಲ್ಯದ ಶ್ರೀಮಂತ ವ್ಯಕ್ತಿಗಳ ಪ್ರಮುಖ ಆದ್ಯತೆಯ ತಾಣವಾಗಿ ಬದಲಾಗಿದೆ. ಈ ಪ್ರದೇಶದಲ್ಲಿ ಸುಧಾರಿತ ಸಂಪರ್ಕ ಮತ್ತು ಬೆಳೆಯುತ್ತಿರುವ ಪ್ರೀಮಿಯಂ ವಸತಿ ಪ್ರದೇಶದ ಅಭಿವೃದ್ಧಿಯಿಂದಾಗಿ ಇಲ್ಲಿ ಆಸ್ತಿ ಖರೀದಿಸುವ ಶ್ರೀಮಂತರ ಸಂಖ್ಯೆ ಹೆಚ್ಚಾಗಿದೆ.
ಹೆಚ್ಚಾಗ್ತಿದೆ ಇಲ್ಲಿ ಆಸ್ತಿ ಖರೀದಿಸುವ ಶ್ರೀಮಂತರ ಸಂಖ್ಯೆ
ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(MMRDA) ನಿರ್ಮಿಸಿರುವ ಅತಿ ಉದ್ದವಾದ ಸಮುದ್ರ ಸೇತುವೆಯಾದ ಅಟಲ್ ಸೇತು ಇಲ್ಲಿ ಹಾದು ಹೋಗುವುದರಿಂದ ಹಾಗೂ ಮತ್ತು ರೋರೋ ಸೇವೆಯಿಂದ ಮುಂಬೈನಿಂದ ಅಲಿಬಾಗ್‌ಗೆ ಪ್ರಯಾಣದ ದೂರವು ಬಹಳ ಕಡಿಮೆಯಾಗಿದೆ. ಇದು ಇಲ್ಲಿ ಜನರು ಆಸ್ತಿಗಳನ್ನು ಖರೀದಿಸಲು ಮತ್ತೊಂದು ಪ್ರಮುಖ ಕಾರಣವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

