ಮಹಾರಾಷ್ಟ್ರದ 29 ಪುರಸಭೆಗಳ ಮತ ಎಣಿಕೆಯಲ್ಲಿ, ಬಿಜೆಪಿ-ಶಿವಸೇನೆ (ಶಿಂಧೆ ಬಣ) ನೇತೃತ್ವದ ಮಹಾಯುತಿ ಮೈತ್ರಿಕೂಟವು ಮುನ್ನಡೆ ಸಾಧಿಸಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ಪ್ರಮುಖ ನಗರಗಳಲ್ಲಿ ಶತಕದ ಗಡಿ ದಾಟಿ ಮುನ್ನಡೆಯುತ್ತಿದ್ದು, ಲಾತೂರ್‌ನಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಮುಂಬೈ (ಜ.16): ಮಹಾರಾಷ್ಟ್ರದ 29 ಪುರಸಭೆಗಳ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು. ಜನವರಿ 15 ರಂದು ಮತದಾನ ಇಲ್ಲಿಗೆ ಮತದಾನ ನಡೆದಿತ್ತು. 893 ವಾರ್ಡ್‌ಗಳಲ್ಲಿ ಒಟ್ಟು 15,931 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಎಲ್ಲಾ ಪುರಸಭೆಗಳಲ್ಲಿ ಪ್ರಮುಖವಾದದ್ದು ಬೃಹನ್ಮುಂಬೈ ಮಹಾನಗರ ಪಾಲಿಕೆ (BMC). ಆರಂಭಿಕ ಪ್ರವೃತ್ತಿಗಳು ಇಲ್ಲಿ ಬಿಜೆಪಿ ಮೈತ್ರಿಕೂಟ ಅಂದರೆ ಬಿಜೆಪಿ ಹಾಗೂ ಶಿವಸೇನೆ (ಶಿಂಧೆ ಬಣ) ಇರುವ ಮಹಾಯುತಿ ಮುನ್ನಡೆ ಸಾಧಿಸುತ್ತಿದೆ ಎಂದು ತೋರಿಸಿದ್ದು, ಮುನ್ನಡೆಯಲ್ಲಿ ಶತಕದ ಗಡಿ ಕೂಡ ದಾಟಿದೆ. ನಾಗ್ಪುರ, ಪುಣೆ, ನಾಸಿಕ್ ಮತ್ತು ಥಾಣೆಯಲ್ಲೂ ಮಹಾಯುತಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.
ಆರಂಭದಲ್ಲಿ ಕೊಲ್ಹಾಪುರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು, ಆದರೆ ಈಗ ಬಿಜೆಪಿ ವ್ಯಾಪಕ ಅಂತರದಿಂದ ಮುನ್ನಡೆ ಸಾಧಿಸಿದೆ. ಸಂಭಾಜಿನಗರದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಲಾತೂರ್‌ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೋರೇಷನ್‌ನ ಒಟ್ಟು 2869 ವಾರ್ಡ್‌ಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದಲ್ಲಿ 2801 ಕ್ಷೇತ್ರಗಳ ಫಲಿತಾಂಶ ಇಂದು ಹೊರಬೀಳಲಿದೆ. 68 ಕ್ಷೇತ್ರಗಳಲ್ಲಿ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.
ಮಹಾರಾಷ್ಟ್ರದ ಐದು ಪ್ರಮುಖ ಪಾಲಿಕೆಗಳಲ್ಲಿ ಇರುವ ಟ್ರೆಂಡ್
ಬೃಹನ್ಮುಂಬೈ ಮಹಾನಗರ ಪಾಲಿಕೆ: ಒಟ್ಟು ಸೀಟ್: 227, ಬಹುಮತ: 114
| ಬಿಜೆಪಿ + | ಉದ್ದವ್ ಶಿವಸೇನಾ+ | ಕಾಂಗ್ರೆಸ್ | ಎನ್‌ಸಿಪಿ (ಅಜಿತ್ ಪವಾರ್) |
| 108 | 56 | 03 | 00 |
ಪುಣೆ ಪಾಲಿಕೆ: ಒಟ್ಟು ಸೀಟ್: 165, ಬಹುಮತ: 83
| ಬಿಜೆಪಿ+ | ಎನ್‌ಸಿಪಿ + | ಐಎನ್‌ಸಿ-ಯುಬಿಟಿ | ಶಿವಸೇನಾ | ಇತರೆ |
| 90 | 20 | 10 | 02 | 00 |
ಥಾಣೆ ಪಾಲಿಕೆ: ಒಟ್ಟು ಸೀಟ್: 131, ಬಹುಮತ: 66
| ಬಿಜೆಪಿ+ | ಎನ್‌ಸಿಪಿ (ಅಜಿತ್ ಪವಾರ್) | ಉದ್ಧವ್ ಶಿವಸೇನಾ+ | ಕಾಂಗ್ರೆಸ್ | ಇತರೆ |
| 29 | 04 | 04 | 00 | 06 |
ನಾಗ್ಪುರ ಪಾಲಿಕೆ: ಒಟ್ಟು ಸೀಟ್: 151, ಬಹುಮತ: 76
| ಬಿಜೆಪಿ+ | ಕಾಂಗ್ರೆಸ್ | ಉದ್ಧವ್ ಶಿವಸೇನಾ+ | ಎನ್‌ಸಿಪಿ(ಅಜಿತ್ ಪವಾರ್) | ಎನ್‌ಸಿಪಿ (ಶರದ್ ಪವಾರ್) | ಇತರೆ |
| 106 | 29 | 01 | 01 | 02 | 07 |
ನಾಸಿಕ್ ಪಾಲಿಕೆ: ಒಟ್ಟು ಸೀಟ್: 122, ಬಹುಮತ 62
| ಬಿಜೆಪಿ+ | ಎಂವಿಎ-ಎಂಎನ್ಎಸ್ | ಶಿವಸೇನೆ (ಶಿಂಧೆ)-ಎನ್‌ಸಿಪಿ | ಇತರೆ |
| 27 | 08 | 14 | 04 |


