ಹೊರಗಿನ ಪ್ರಪಂಚದ ಜೊತೆಗೆ ಯಾವುದೇ ಸಂಪರ್ಕವೇ ಇಲ್ಲದ ಅಮೇಜಾನ್ ಕಾಡಿನ ಬುಡಕಟ್ಟು ಸಮುದಾಯದ ಜನರನ್ನು ಬಹಳ ಹತ್ತಿರದಿಂದ ವೀಡಿಯೋ ಮಾಡಿರುವಂತ ದೃಶ್ಯಾವಳಿಯನ್ನು ಸಂರಕ್ಷಣಾವಾದಿ ಪಾಲ್ ರೊಸೋಲಿ ಅವರು ಬಿಡುಗಡೆ ಮಾಡಿದ್ದಾರೆ. ಈ ವಿಚಾರವೀಗ ಜಾಗತಿಕ ಮಟ್ಟದಲ್ಲಿ ಜನರ ಗಮನ ಸೆಳೆಯುತ್ತಿದೆ.

ಹೊರಗಿನ ಪ್ರಪಂಚದ ಜೊತೆಗೆ ಯಾವುದೇ ಸಂಪರ್ಕವೇ ಇಲ್ಲದ ಅಮೇಜಾನ್ ಕಾಡಿನ ಬುಡಕಟ್ಟು ಸಮುದಾಯದ ಜನರನ್ನು ಬಹಳ ಹತ್ತಿರದಿಂದ ವೀಡಿಯೋ ಮಾಡಿರುವಂತ ದೃಶ್ಯಾವಳಿಯನ್ನು ಸಂರಕ್ಷಣಾವಾದಿ ಪಾಲ್ ರೊಸೋಲಿ ಅವರು ಬಿಡುಗಡೆ ಮಾಡಿದ್ದಾರೆ. ಈ ವಿಚಾರವೀಗ ಜಾಗತಿಕ ಮಟ್ಟದಲ್ಲಿ ಜನರ ಗಮನ ಸೆಳೆಯುತ್ತಿದೆ.

ವಿಶ್ವದ ಅತ್ಯಂತ ಪ್ರತ್ಯೇಕವಾದ ಮಾನವ ಸಮುದಾಯಗಳಲ್ಲಿ ಒಂದಾದ ಹಾಗೂ ಹೊರಪ್ರಪಂಚದ ನಾಗರಿಕ ಜನರಿಗೆ ನೋಡುವುದಕ್ಕೆ ತೀರಾ ಅಪರೂಪವೆನಿಸಿದ ಬುಡಕಟ್ಟು ಸಮುದಾಯದಲ್ಲಿ ಅಮೇಜಾನ್‌ನಲ್ಲಿ ವಾಸವಿರುವ ಅಮೆಜೋನಿಯಯನ್ ಬುಡಕಟ್ಟು ಸಮುದಾಯವೂ ಕೂಡ ಒಂದಾಗಿದೆ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಾಗಿ ಕನ್ಸರ್ವೇಟಿವ್ ಪಾಲ್ ರೊಸೋಲಿ ಅವರು ಹೇಳಿಕೊಂಡಿದ್ದು, ತಾವು ಹಿಂದೆಂದೂ ನೋಡಿರದ ದೃಶ್ಯಗಳನ್ನು ಅವರು ಈಗ ಹೊರ ಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಬುಡಕಟ್ಟು ಸಮುದಾಯದ ವಿಭಿನ್ನ ನೋಟವು ಜಾಗತಿಕ ಗಮನ ಸೆಳೆಯುತ್ತಿದೆ.

ಲೇಖಕ ಮತ್ತು ಸಂರಕ್ಷಣಾವಾದಿ ಪಾಲ್ ರೊಸೋಲಿ ಇತ್ತೀಚೆಗೆ ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಹೊರ ಜಗತ್ತಿನ ಜೊತೆ ಸಂಪರ್ಕವಿಲ್ಲದ ಅಮೆಜೋನಿಯನ್ ಬುಡಕಟ್ಟಿನ ಹಿಂದೆಂದೂ ನೋಡಿರದ ದೃಶ್ಯಗಳನ್ನು ಬಹಿರಂಗಪಡಿಸಿದರು. ಇದು ಹಿಂದೆ ದಾಖಲಿಸಲಾದ ಯಾವುದೇ ದೃಶ್ಯಗಳಿಗಿಂ ಭಿನ್ನವಾದ ಕ್ಷಣ ಎಂದು ಅವರು ಆ ದೃಶ್ಯಗಳನ್ನು ಕರೆದಿದ್ದಾರೆ.

ಹೊಸದಾಗಿ ಬಿಡುಗಡೆಯಾದ ದೃಶ್ಯಗಳು ಈ ಅಮೆಜೋನಿಯಯನ್ ಬುಡಕಟ್ಟು ಸಮುದಾದಯ ಸದಸ್ಯರು ಆರಂಭದಲ್ಲಿ ಶಸ್ತ್ರಸಜ್ಜಿತರಾಗಿ ಹೊರಗಿನವರತ್ತ ಬಹಳ ಎಚ್ಚರಿಕೆಯಿಂದ ಸಮೀಪಿಸುತ್ತಿರುವುದನ್ನು ನೋಡಬಹುದು. ನಂತರ ಆಹಾರವನ್ನು ಸಾಗಿಸುವ ದೋಣಿಯನ್ನು ಅವರಿಗೆ ನೀಡಿದ ನಂತರವೇ ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸುತ್ತಾರೆ. ರೊಸೋಲಿ ಪ್ರಕಾರ, ಈ ದೃಶ್ಯಗಳು ಅಮೆಜಾನ್ ಮಳೆಕಾಡಿನ ನಡುವೆ ವಾಸಿಸುವ ಹೊರ ಜಗತ್ತಿನ ಜೊತೆ ಸಂಪರ್ಕವಿಲ್ಲದ ಗುಂಪಿನೊಂದಿಗೆ ಅಭೂತಪೂರ್ವ ಸಂವಾದವನ್ನು ಸೆರೆ ಹಿಡಿದ ದೃಶ್ಯಗಳಾಗಿವೆ.

ಅಮೆಜಾನ್‌ನ ಈ ಕಾಡಿನಲ್ಲಿ ಸುಮಾರು ಎರಡು ದಶಕಗಳ ಕಾಲ ಕೆಲಸ ಮಾಡಿರುವುದಾಗಿ ರಸೋಲಿ ಅವರು ಹೇಳಿಕೊಂಡಿದ್ದಾರೆ. ಅವರು ಅಮೆಜೋನಿಯನ್ ಸಮುದಾಯದ ಜೊತೆಗಿನ ತಮ್ಮ ಭೇಟಿಯೂ ತಮ್ಮ ಜೀವನದ ಅತ್ಯಂತ ತೀವ್ರವಾದ ಮತ್ತು ಅರ್ಥಪೂರ್ಣ ಅನುಭವಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಇದರಲ್ಲಿ ಯಾವುದಾದರೂ ಅರ್ಥಪೂರ್ಣವಾಗಬೇಕೆಂದು ನಿಮಗೆ ಅನಿಸಬೇಕಾದರೆ ನಾನು ನಿಮಗೆ ಈ ದೃಶ್ಯಗಳನ್ನು ತೋರಿಸಲೇಬೇಕು. ಈ ದೃಶ್ಯಗಳನ್ನು ಹಿಂದೆಂದೂ ತೋರಿಸಿಲ್ಲ. ಇದು ವಿಶ್ವದಲ್ಲೇ ಇದೇ ಮೊದಲು ಎಂದು ಪಾಲ್ ರೊಸೋಲಿ ಅವರು ಫ್ರಿಡ್‌ಮನ್‌ಗೆ ತಿಳಿಸಿದ್ದಾರೆ.

ಇಲ್ಲಿಯವರೆಗೂ ಈ ಹೊರ ಜಗತ್ತಿನ ಸಂಪರ್ಕವಿಲ್ಲದ ಬುಡಕಟ್ಟು ಸಮುದಾಯದ ಜನರ ಚಿತ್ರಗಳು ಅಸ್ಪಷ್ಟ ಹಾಗೂ ಬಹಳ ದೂರದಿಂದ ತೆಗೆದಂತದ್ದಾಗಿದ್ದವು. ಆದರೆ ನಾವು ಅವರ ಸಮೀಪವೇ ಕುಳಿತಿದ್ದೆವು ಜೊತೆಗೆ 800 ಎಂಎಂನ 2x ಟೆಲಿಕನ್ವರ್ಟರ್ ಇತ್ತು ಎಂದು ಅವರು ಹೇಳಿದ್ದಾರೆ.

ಅವರು ಹಂಚಿಕೊಂಡ ದೃಶ್ಯಗಳಲ್ಲಿ ಬುಡಕಟ್ಟು ಸದಸ್ಯರು ಚಿಟ್ಟೆಗಳ ಗುಂಪಿಂದ ಆವೃತವಾದ ನದಿಯ ದಡದ ಮೇಲೆ ಹೆಜ್ಜೆ ಹಾಕುತ್ತಾರೆ. ಉದ್ದೇಶಪೂರ್ವಕವಾಗಿ ಮತ್ತು ಬಹಳ ಒಗ್ಗಟ್ಟಿನಿಂದ ಜೊತೆಗೆ ಚಲಿಸುತ್ತಾರೆ. ಅವರು ತಮ್ಮ ಮುಂದೆ ಇರುವವರನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ, ತಮ್ಮ ಶಸ್ತ್ರಾಸ್ತ್ರಗಳನ್ನು ಸಿದ್ಧವಾಗಿಟ್ಟುಕೊಂಡು ಪ್ರತಿಯೊಂದು ಚಲನೆಯನ್ನು ಎಚ್ಚರಿಕೆಯಿಂದ ನಿರ್ಣಯಿಸುತ್ತಾರೆ. ಅವರು ಸನ್ನೆಗಳು ಮತ್ತು ಭಂಗಿಗಳನ್ನು ತೀವ್ರ ಗಮನದಿಂದ ನೋಡುತ್ತಿದ್ದುದನ್ನು ರೊಸೋಲಿ ನೆನಪಿಸಿಕೊಂಡರು.

ಅವರು ಚಲಿಸುವ ರೀತಿಯನ್ನು ನೋಡಿ. ಅವರು ಗುರಿ ತೋರಿಸುವ ರೀತಿಯನ್ನು ನೋಡಿ. ಆತ ಬಿಲ್ಲನ್ನು ಹಿಡಿದಿರುವುದನ್ನು ನೋಡಿ ಎಂದು ಅವರು ಬಾಣವನ್ನು ಸಿದ್ಧಪಡಿಸುತ್ತಿರುವ ವ್ಯಕ್ತಿಯ ಕಡೆಗೆ ತೋರಿಸುತ್ತಾ ಹೇಳಿದರು. ಅಲ್ಲಿ ನಾಗರಿಕ ಸಮಾಜದ ಅಪರಿಚಿತ ಜನರ ನೋಡಿ ಅವರಲ್ಲಿ ಭಯ ಉದ್ವಿಗ್ನತೆ ಅಗಾಧವಾಗಿತ್ತು. ಆ ಕ್ಷಣವು ಯಾವುದೇ ಕ್ಷಣದಲ್ಲಿ ಹಿಂಸಾತ್ಮಕವಾಗಬಹುದು ಎಂದು ಭಾವಿಸಿದೆ ಎಂದು ರಸೋಲಿ ಹೇಳಿದ್ದಾರೆ.

ಇದನ್ನೂ ಓದಿ: ಬಿಎಂಸಿ ಚುನಾವಣೆಯಲ್ಲಿ ಗೆಲುವು: ರಾಜ್‌ಠಾಕ್ರೆ, ಉದ್ಧವ್ ಠಾಕ್ರೆಗೆ ರಸಮಲೈ ಕಳುಹಿಸಿದ ಬಿಜೆಪಿಯ ಬಗ್ಗಾ

ನಾನು ಎಲ್ಲಾ ದಿಕ್ಕುಗಳಲ್ಲಿಯೂ ನೋಡುತ್ತಿದ್ದೆ, ಬಾಣ ಯಾವ ಕಡೆಯಿಂದ ನಮ್ಮನ್ನು ಅಪ್ಪಳಿಸುತ್ತಿದೆ ಎಂದು ಯೋಚಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಅದರೂ ಈ ಪರಿಸ್ಥಿತಿ ಸ್ವಲ್ಪ ಸಮಯದ ನಂತರ ಶಾಂತವಾಯ್ತು. ಎರಡೂ ಗುಂಪುಗಳ ನಡುವಿನ ಅಂತರ ಕಡಿಮೆಯಾದಂತೆ, ಬುಡಕಟ್ಟು ಸದಸ್ಯರು ನಿಧಾನವಾಗಿ ತಮ್ಮ ಶಸ್ತ್ರಗಳನ್ನು ಬದಿಗಿಟ್ಟರು. ಅವರು ನಮ್ಮ ಹತ್ತಿರ ಬರುತ್ತಿದ್ದಂತೆ, ಅವುಗಳನ್ನು ಕೆಳಗೆ ಇಡಲು ಪ್ರಾರಂಭಿಸಿದರು. ನೋಡಿ, ಅವನು ತನ್ನ ಬಿಲ್ಲು ಮತ್ತು ಬಾಣವನ್ನು ಕೆಳಗೆ ಹಾಕುತ್ತಿದ್ದಾನೆ. ಅವರಿಗೆ ಅರ್ಥವಾಯಿತು ಎಂದು ರಸೋಲಿ ಹೇಳಿದ್ದಾರೆ.

ಇದನ್ನೂ ಓದಿ: ಕೇರಳದಿಂದ ಓದಲು ಬಂದು ಇಲ್ಲಿ ಬೇರೆಯದೇ ಕಾರುಬಾರು: ಕಾರಿನ ಬೆಲೆಗಿಂತಲೂ ದುಬಾರಿ ದಂಡ ವಿಧಿಸಿದ ಪೊಲೀಸರು

ಪ್ರಪಂಚದಾದ್ಯಂತ ಸುಮಾರು 200 ಸಂಪರ್ಕವಿಲ್ಲದ ಬುಡಕಟ್ಟು ಜನಾಂಗಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ , ಅವರಲ್ಲಿ ಹೆಚ್ಚಿನವರು ಬ್ರೆಜಿಲ್ ಮತ್ತು ಪೆರುವಿನಾದ್ಯಂತ ಇರುವ ಅಮೆಜಾನ್‌ನ ಕಾಡಿನ ನಡುವೆ ವಾಸಿಸುತ್ತಿದ್ದಾರೆ . ನೇರ ಸಂಪರ್ಕದಿಂದ ಅವರಿಗೆ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳಿಂದಾಗಿ, ಈ ಸಮುದಾಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಖಾಮುಖಿ ಭೇಟಿಗಳಿಗಿಂತ ಉಪಗ್ರಹ ದತ್ತಾಂಶ, ವೈಮಾನಿಕ ಕಣ್ಗಾವಲು ಮತ್ತು ನೆರೆಯ ಸ್ಥಳೀಯ ಗುಂಪುಗಳ ವರದಿಗಳಿಂದ ಪಡೆಯಲಾಗುತ್ತದೆ.

Scroll to load tweet…