ಸೋಷಿಯಲ್ ಮೀಡಿಯಾದಲ್ಲಿ ಗಿಳಿಯೊಂದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅದು ತನ್ನ ಒಡತಿಯ ಬಳಿ ಟೊಮೆಟೊ ಕೇಳುತ್ತದೆ. ಒಡತಿ ನಿರಾಕರಿಸಿದಾಗ, ಗಿಳಿಯು 'ಪೊಲೀಸ್, ಪೊಲೀಸ್' ಎಂದು ಕೂಗುವ ಮೂಲಕ ತಮಾಷೆಯಾಗಿ ಧಮ್ಕಿ ಹಾಕುತ್ತದೆ.

ಪ್ರತಿಯೊಂದು ಸಾಕು ಪ್ರಾಣಿ, ಪಕ್ಷಿಗಳಿಗೂ ಅದರ ಮಾಲೀಕರ ಮಾತೆಲ್ಲವೂ ಅರ್ಥವಾಗುತ್ತವೆ. ಅದೇ ರೀತಿ ಅತ್ಯಂತ ಪ್ರೀತಿಯಿಂದ ಸಾಕಿದ ಪ್ರಾಣಿ, ಪಕ್ಷಿಗಳ ಭಾಷೆಗಳೂ ಮಾಲೀಕರಿಗೆ ಅರ್ಥವಾಗುವುದು ಇದೆ. ಆದರೆ ಎಲ್ಲಕ್ಕಿಂತಲೂ ಕುತೂಹಲ ಎನ್ನಿಸಿರುವ ಪಕ್ಷಿ ಗಿಳಿ. ಏಕೆಂದರೆ, ಇದು ಮನುಷ್ಯರಂತೆಯೇ ಮಾತನಾಡಬಲ್ಲದ್ದಾಗಿದ್ದರಿಂದ ಸಹಜವಾಗಿ ಈ ಪಕ್ಷಿಯ ವಿಭಿನ್ನ ಎನ್ನಿಸಿಕೊಳ್ಳುತ್ತದೆ. ಗಿಳಿಗಳು ತಮ್ಮ ಧ್ವನಿಯ ಮೂಲಕ ವಿವಿಧ ಶಬ್ದಗಳನ್ನು ಮಾಡಿ ಸಂವಹನ ಮಾಡುತ್ತವೆ, ಅವುಗಳಲ್ಲಿ ಕೆಲವು ಮಾತುಗಳನ್ನು ಅನುಕರಿಸಬಲ್ಲವು. ಅಷ್ಟೇ ಅಲ್ಲದೇ ರೆಕ್ಕೆಗಳ ಚಲನೆ, ಕುತ್ತಿಗೆಯನ್ನು ತಿರುಗಿಸುವುದು ಮತ್ತು ತಮ್ಮ ಹಾರಾಟದ ಮೂಲಕ ತಮ್ಮ ಭಾವನೆಗಳನ್ನೂ ತಿಳಿಸುವಲ್ಲಿ ಗಿಳಿಗಳಿಗೆ ವಿಶೇಷ ಜಾಣ್ಮೆಯಿದೆ.

ಟೊಮೆಟೋ ಕೇಳಿದ ಗಿಳಿ

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್​ ಆಗ್ತಿದೆ. ಅದರಲ್ಲಿ ಗಿಳಿಯೊಂದು ಟೊಮೆಟೊ ಕೊಡಲಿಲ್ಲ ಎನ್ನುವ ಕಾರಣಕ್ಕೆ, ತನ್ನ ಒಡತಿಯ ವಿರುದ್ಧವೇ ಪೊಲೀಸರಿಗೆ ಕರೆಸಿದೆ. ಪೊಲೀಸ್​ ಪೊಲೀಸ್​ ಎನ್ನುವ ಮೂಲಕ ಧಮ್ಕಿ ಹಾಕಿದೆ.ಈ ವಿಡಿಯೋ ಅನ್ನು ಐಬಿಸಿ24ಡಿಜಿಟಲ್​ ಎನ್ನುವ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಲಾಗಿದೆ. ಇದರಲ್ಲಿ ಗಿಳಿಯೊಂದು ತನಗೆ ಟೊಮೆಟೊ ನೀಡುವಂತೆ ಒಡತಿಯನ್ನು ಕೇಳಿದೆ. ಆದರೆ ಒಡತಿ ಅದನ್ನು ನಿರಾಕರಿಸಿದ್ದಾಳೆ.

ವಿಡಿಯೋ ಇಲ್ಲಿದೆ

ಆಗ ಗಿಳಿಯು ಹಾಗಿದ್ದರೆ ನಾನು ಪೊಲೀಸರನ್ನು ಕರೆಯುತ್ತೇನೆ ಎಂದು ಪೊಲೀಸ್​ ಪೊಲೀಸ್​ ಎಂದು ಕೂಗಿದೆ. ಈ ಫನ್ನಿ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದೆ. ಗಿಳಿಯ ಈ ವಿಡಿಯೋ ನೋಡಿ ನೆಟ್ಟಿಗರು ತಮಾಷೆಯ ಕಮೆಂಟ್ಸ್​ ಹಾಕುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ:

तोते ने दी टमाटर न देने पर Police बुलाने की धमकी... Viral Parrot Video | Talking Parro