ಯೂಟ್ಯೂಬ್‌ನಲ್ಲಿ 140 ವರ್ಷಗಳ ಅವಧಿ ತೋರಿಸುವ ವೀಡಿಯೋವೊಂದು ವೈರಲ್ ಆಗಿ ಜನರಲ್ಲಿ ಗೊಂದಲ ಸೃಷ್ಟಿಸಿದೆ. ವಿಡಿಯೋದ ವಿವರಣೆ ಅರೇಬಿಕ್ ಭಾಷೆಯಲ್ಲಿದ್ದು ಭಾಷಾಂತರಿಸಿದಾಗ 'ನರಕದಲ್ಲಿ ನನ್ನನ್ನು ಭೇಟಿ ಮಾಡಿ' ಎಂಬ ಅರ್ಥವನ್ನು ನೀಡುತ್ತದೆ. ಈ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

ಯೂಟ್ಯೂಬ್‌ನಲ್ಲಿ ಚಿತ್ರ ವಿಚಿತ್ರವಾದ ವೀಡಿಯೋಗಳು ಬಹಳ ಒಳ್ಳೆಯ ವೀಡಿಯೋಗಳು ವೈರಲ್ ಆಗಾಗ ವೈರಲ್ ಆಗ್ತಾ ಇರ್ತಾವೆ. ಯೂಟ್ಯೂಬ್‌ನಲ್ಲಿ ವಿಡಿಯೋಗೆ ಇತರ ಸಾಮಾಜಿಕ ಜಾಲತಾಣಗಳಂತೆ ಸಮಯದ ಮಿತಿ ಇಲ್ಲ. ಎಷ್ಟು ಗಂಟೆಗಳ ವೀಡಿಯೋವನ್ನು ಕೂಡ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಬಹುದಾಗಿದೆ. ಕೆಲ ನಿಮಿಷಗಳಿಂದ ಕೆಲ ಗಂಟೆಗಳವರೆಗಿನ ವೀಡಿಯೋಗಳು ಸಂಪೂರ್ಣ 3 ಗಂಟೆಗಳ ಸಿನಿಮಾ ಯೂಟ್ಯೂಬ್‌ನಲ್ಲಿದೆ. 2011 ರಲ್ಲಿ, ಜೋನಾಥನ್ ಹಾರ್ಚಿಕ್ ಎಂಬುವವರು 596 ಗಂಟೆಗಳ ವೀಡಿಯೊವನ್ನು ಅಪ್‌ಲೋಡ್ ಮಾಡುವ ಮೂಲಕ ದಾಖಲೆಯನ್ನು ಸ್ಥಾಪಿಸಿದರು. ಆದರೆ ಈಗ ಕೆಲ ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಆದ ವೀಡಿಯೋವೊಂದು ಜನರಲ್ಲಿ ವಿಚಿತ್ರ ಸಂಚಲನ ಗೊಂದಲಗಳನ್ನು ಸೃಷ್ಟಿಸಿದೆ. ಅಂದಹಾಗೆ ಈ ಯೂಟ್ಯೂಬ್ ವೀಡಿಯೋದ ಅವಧಿ 140 ವರ್ಷಗಳಷ್ಟು ಸುದೀರ್ಘ ಸಮಯವನ್ನು ತೋರಿಸುತ್ತಿದೆ.

ಈ ವರ್ಷದ ಜನವರಿ 5ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೋ ಈಗ ನೋಡುಗರಲ್ಲಿ ಗೊಂದಲ, ಊಹಾಪೋಹದ ಜೊತೆಗೆ ದೊಡ್ಡ ಚರ್ಚೆಯ ವಿಚಾರವಾಗಿದೆ. ಯೂಟ್ಯೂಬ್‌ನಲ್ಲಿ ಈ ವಿಚಿತ್ರವಾದ ವೀಡಿಯೋ ಅಪ್‌ಲೋಡ್ ಆದ ನಂತರ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕ ನಂತರ ಸೋಶಿಯಲ್ ಮೀಡಿಯಾ ಬಳಕೆದಾರರು ಇದು ಏನು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

@ShinyWR ಎಂಬ ಚಾನೆಲ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಯಾರಾದರೂ ಈ ವೀಡಿಯೋವನ್ನು ನೋಡಲು ಹೋದರೆ ಈ ಒಂದು ಶತಮಾನ ಮುಗಿದರು ಈ ವೀಡಿಯೋದ ಸಮಯ ಮುಗಿಯುವುದಿಲ್ಲ ಏಕೆಂದರೆ ಅದರ ರನ್‌ಟೈಮ್ ಒಂದು ಶತಮಾನಕ್ಕೂ ಹೆಚ್ಚು ಕಾಲ ವ್ಯಾಪಿಸಿದೆ. ಈ ವಿಡಿಯೋ ಮೊದಲ ನೋಟದಲ್ಲಿ 140 ವರ್ಷಗಳ ಅವಧಿಯನ್ನು ಹೊಂದಿದೆ ಎಂದು ತೋರಿಸುತ್ತದೆ. ಆದರೆ ಈ ಅತೀಯಾದ ಅವಧಿಯ ಹೊರತಾಗಿಯೂ ಈ ವೀಡಿಯೊವನ್ನು ಈಗಾಗಲೇ ಸುಮಾರು ಮೂರು ಮಿಲಿಯನ್ ಜನ ವೀಕ್ಷಿಸಿದ್ದಾರೆ ಎಂದು ತೋರಿಸುತ್ತಿದೆ. ಅಲ್ಲದೇ ಸುಮಾರು 3 8,000 ಕಾಮೆಂಟ್‌ಗಳನ್ನು ಗಳಿಸಿದೆ , ವೀಕ್ಷಕರು ತಾವು ನಿಜವಾಗಿ ಏನನ್ನು ನೋಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆದರೆ, ವೀಡಿಯೊವನ್ನು ಕ್ಲಿಕ್ ಮಾಡುವವರಿಗೆ ಇನ್ನೂ ಹೆಚ್ಚಿನ ಗೊಂದಲ ಉಂಟಾಗುತ್ತದೆ. ವೀಡಿಯೋ ಕ್ಲಿಕ್ ಮಾಡ್ತಿದ್ದಂತೆ ಸ್ಕ್ರೀನ್ ಸಂಪೂರ್ಣವಾಗಿ ಕತ್ತಲೆ ಕಾಣುತ್ತದೆ. ಯಾವುದೇ ರೀತಿಯ ಧ್ವನಿ ಅಥವಾ ದೃಶ್ಯಗಳು ಕಾಣುವುದಿಲ್ಲ. ಇದರ ಥಂಬ್‌ನೇಲ್ 140 ವರ್ಷಗಳ ರನ್‌ಟೈಮ್ ತೋರಿಸಿದ್ರೆ ಪ್ಲೇ ಬಟನ್ ಒತ್ತಿದಾಗ ಇದ್ದಕ್ಕಿದ್ದಂತೆ ಅವಧಿಯು ಕೇವಲ 12 ಗಂಟೆಗಳಿಗೆ ಬದಲಾಗುತ್ತದೆ , ಇದು ಅನೇಕರನ್ನು ಗೊಂದಲಕ್ಕೀಡು ಮಾಡಿದೆ.

ಇದನ್ನೂ ಓದಿ: ಹೊರ ಪ್ರಪಂಚದ ಜೊತೆ ಸಂಪರ್ಕ ಇಲ್ಲದ ಅಮೇಜಾನ್ ಕಾಡಿನ ಕಾಡು ಮನುಷ್ಯರ ಮೊದಲ ವೀಡಿಯೋ

ಇನ್ನೂ ಈ ವವೀಡಿಯೊದ ವಿವರಣೆಯು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಅರೇಬಿಕ್ ಲಿಪಿಯಲ್ಲಿ ಇದನ್ನು ಬರೆಯಲಾಗಿದ್ದು, ಇದನ್ನು ಅನುವಾದಿಸಿದಾಗ 'ನರಕದಲ್ಲಿ ನನ್ನನ್ನು ಭೇಟಿ ಮಾಡಿ ಬನ್ನಿ' ಎಂದು ತೋರಿಸುತ್ತದೆ. ಹೀಗಾಗಿ ಈ ಕ್ಲಿಪ್‌ನ ಸ್ಕ್ರೀನ್‌ಶಾಟ್‌ಗಳು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ತ್ವರಿತವಾಗಿ ಹರಡಿ, ಗೊಂದಲವನ್ನು ಹೆಚ್ಚಿಸಿದ್ದು, ಅದರ ಉದ್ದೇಶ ಮತ್ತು ಮೂಲದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿವೆ. ಅಲ್ಲದೇ ಈ ವೀಡಿಯೋ ಅಪ್‌ಲೋಡ್ ಮಾಡಿದವರ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಕೆಲವು ಬಳಕೆದಾರರು ಚಾನೆಲ್‌ನ ವಿವರಗಳು ಉತ್ತರ ಕೊರಿಯಾದಿಂದ ಕಾರ್ಯನಿರ್ವಹಿಸುತ್ತಿದೆ ಹಾಗೂ ಜುಲೈ 31, 2023 ರಂದು ಈ ಚಾನೆಲ್ ತೆರೆದಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಬಿಎಂಸಿ ಚುನಾವಣೆಯಲ್ಲಿ ಗೆಲುವು: ರಾಜ್‌ಠಾಕ್ರೆ, ಉದ್ಧವ್ ಠಾಕ್ರೆಗೆ ರಸಮಲೈ ಕಳುಹಿಸಿದ ಬಿಜೆಪಿಯ ಬಗ್ಗಾ

ಈ ವಿಚಾರ ವೈರಲ್ ಆಗ್ತಿದ್ದಂತೆ 140 ವರ್ಷಗಳ ಅವಧಿಯ ವೀಡಿಯೋದ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹಲವಾರು ಪ್ರಸಿದ್ಧ ಇನ್‌ಫ್ಲುಯೆನ್ಸರ್‌ಗಳು ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ. ಕೆಲವರು ನಿಜವಾಗಿಯೂ ಕುತೂಹಲ ಹೊಂದಿದ್ದರೆ, ಇತರರು ಇದರ ಸತ್ಯಾಸತ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. 140 ವರ್ಷಗಳ ಅವಧಿಯು ಥಂಬ್‌ನೇಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂದು ಅನೇಕ ಬಳಕೆದಾರರು ಇಲ್ಲಿ ಗಮನಸೆಳೆದರು, 12 ಗಂಟೆಗಳ ನಿಜವಾದ ರನ್‌ಟೈಮ್ ತಾಂತ್ರಿಕ ಅಥವಾ ಮೆಟಾಡೇಟಾ ದೋಷ ಆಗಿದೆ ಬೇರೆನಿಲ್ಲ ಎಂದು ಕೆಲವರು ಹೇಳಿದ್ದಾರೆ.

YouTube video player