ಹವಾಮಾನ ಬದಲಾವಣೆಯಿಂದ ಕುಂದಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸದ್ಗುರು ಜಗ್ಗಿ ವಾಸುದೇವ್ ಅವರು ಸರಳ ಮನೆಮದ್ದನ್ನು ತಿಳಿಸಿದ್ದಾರೆ. ನೆಲ್ಲಿಕಾಯಿ, ಜೇನುತುಪ್ಪ ಮತ್ತು ಕಾಳು ಮೆಣಸನ್ನು ಬಳಸಿ ತಯಾರಿಸಬಹುದಾದ ಈ ಆಯುರ್ವೇದ ಪೇಯವು ಕೆಲವೇ ವಾರಗಳಲ್ಲಿ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ.

ಹವಾಮಾನ ಏರಿಳಿತ ಈ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದು ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಯಾರ ದೇಹವು ಸೂಕ್ಷ್ಮವಾಗಿರುತ್ತದೆಯೋ, ರೋಗ ನಿರೋಧದಕ ಶಕ್ತಿ ಇರುವುದಿಲ್ಲವೋ ಅಥವಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆಯೋ ಅವರಿಗೆ ಶೀಘ್ರದಲ್ಲಿ ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ದೇಹವನ್ನು ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ರೋಗಕಾರಕಗಳ ಆಕ್ರಮಣ ಇಂಥವರಿಗೆ ಸಲೀಸಾಗಿ ಆಗುತ್ತದೆ. ಇದೇ ಕಾರಣಕ್ಕೆ ರೋಗನಿರೋಧಕ ಶಕ್ತಿ (Immunity Boost) ಬಹಳ ಮುಖ್ಯವಾಗಿದೆ. ಇದನ್ನೇ ಈಗ ಮಾರುಕಟ್ಟೆಗೆ ಟೆಕ್ನಿಕ್​ ಮಾಡಿಕೊಂಡು ಏನೇನೋ ರಾಸಾಯಿನಿಕ ಯುಕ್ತ ಪೇಯಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳನ್ನು ಭಾರತದಲ್ಲಿ ಸುಲಭದಲ್ಲಿ ಮಾರಾಟ ಮಾಡಲು ದೊಡ್ಡ ತಂತ್ರ ಉಪಯೋಗಿಸುವುದು ಸಿನಿಮಾ, ಕ್ರಿಕೆಟ್​ ಸೆಲೆಬ್ರಿಟಿಗಳ ಜಾಹೀರಾತು ತೋರಿಸಿ. ಏಕೆಂದರೆ ಭಾರತೀಯರಿಗೆ ಇವರೇ ದೇವರ ಸಮಾನ ಆಗಿರೋ ಕಾರಣ, ಇವರು ಏನು ಮಾಡಿದರೂ ಅದನ್ನೇ ತಾವು ಮಾಡಬೇಕು ಎಂದು ಅವರನ್ನು ಅನುಸರಿಸುವುದು ಇದ್ದೇ ಇದೆ. ಇದನ್ನೇ ದುರ್ಬಳಕೆ ಮಾಡಿಕೊಂಡು ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ರೂಪಾಯಿ ಸುರಿದು ರಾಸಾಯನಿಕಗಳನ್ನು ಗ್ರಾಹಕರ ದೇಹದ ಒಳಗೆ ಸುರಿಯುವಂತೆ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಸದ್ಗುರು ಟಿಪ್ಸ್​

ಇದರ ಸೈಡ್​ ಎಫೆಕ್ಟ್​ನಿಂದ ಮುಕ್ತವಾಗುವಂಥ ಆಯುರ್ವೇದ ಪದ್ಧತಿ ಭಾರತದಲ್ಲಿಯೇ ಇದ್ದರೂ, ಆಯುರ್ವೇದವು ಭಾರತದ ಮೂಲವೇ ಆಗಿದ್ದರೂ, ನಮಗೆ ಅದು ಬೇಡ. ಮೆಡಿಕಲ್​ ಮಾಫಿಯಾ ಎಷ್ಟರಮಟ್ಟಿಗೆ ಇದೆ ಎಂದರೆ ಆಯುರ್ವೇದ ಎನ್ನುವುದು ಅತ್ಯಂತ ಕೆಟ್ಟ ಪದ್ಧತಿ ಎಂದು ಪ್ರಚಾರ ಮಾಡುವ ಕಾರ್ಯವೂ ಇದ್ದು, ಅದನ್ನು ನಂಬುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಇಂದು ವಿದೇಶಿಗರು ಭಾರತದ ಆಯುರ್ವೇದವನ್ನು ಪೇಟೆಂಟ್​ ಪಡೆಯುವ ಮಟ್ಟಿಗೆ ಹೋಗಿದೆ.

ಮೂರೇ ಸಾಮಗ್ರಿ

ಅದೇನೇ ಇರಲಿ. ಇದೀಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಅತ್ಯಂತ ಸುಲಭವಾಗಿರುವ ಮಾರ್ಗವನ್ನು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿಕೊಟ್ಟಿದ್ದಾರೆ. ಅದು ನೆಲ್ಲಿಕಾಯಿಯ ತಂತ್ರ. ಇದಕ್ಕೆ ಬೇಕಾಗಿರುವುದು ಕೆಲವು ನಲ್ಲಿಕಾಯಿ, ಜೇನುತುಪ್ಪ ಮತ್ತು ಕಾಳು ಮೆಣಸು ಅಷ್ಟೇ.

ಮಾಡುವುದು ಹೇಗೆ?

ಮೊದಲಿಗೆ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ, ಚಿಕ್ಕದಾಗಿ ಕಟ್​ ಮಾಡಿಕೊಂಡು, ಒಂದು ಬೌಲ್​ನಲ್ಲಿ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸುರಿದು ರಾತ್ರಿ ಬೆಳಗಿನವರೆಗೆ ಇಡಿ. ಅದಕ್ಕೆ ಕಾಳುಮೆಣಸಿನ ಪುಡಿಯನ್ನು ಉದುರಿಸಿ. ಬೆಳಿಗ್ಗೆ ಖಾಲಿ ಹೊಟ್ಟೆ ಸೇರಿದಂತೆ ದಿನಕ್ಕೆ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುತ್ತಾ ಬನ್ನಿ. 4 ರಿಂದ 8 ವಾರಗಳಲ್ಲಿಯೇ ನಿಮಗೆ ಪರಿಣಾಮ ಕಾಣಿಸುತ್ತದೆ. foodieklixನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ.