
ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
ಕೇರಳ ವಿಧಾನಸಭೆ ಚುನಾವಣೆ ಕಾವು ತೀವ್ರಗೊಂಡಿದೆ. ಕರ್ನಾಟಕದ ಗಡಿ ಭಾಗ ಕಾಸರಗೋಡಿನಲ್ಲಿ ಚುನಾವಣೆ ರಂಗು ಪಡೆದುಕೊಂಡಿದೆ. ಈ ಪೈಕಿ ಕನ್ನಡಿಗರೇ ತುಂಬಿಕೊಂಡಿರುವ ಮಂಜೇಶ್ವರದಲ್ಲಿ ಮತದಾರರನ ನಿಲುವೇನು?
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್‍ಡಿಎಫ್, ಯೂಡಿಎಫ್ ಜೊತೆಗೆ ಬಿಜೆಪಿ ತೀವ್ರ ಪೈಪೋಟಿ ನಡೆಸುತ್ತಿದೆ. ಕೇರಳ ರಾಜಕೀಯದಲ್ಲಿ ಬಿಜೆಪಿಗೆ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದ ಗಡಿ ಭಾಗ, ಕರ್ನಾಟಕದ ಭಾಗವೇ ಆಗಿದ್ದ ಕಾಸರಗೋಡು, ಮಂಜೇಶ್ವರ ಇದೀಗ ಕೇರಳದ ಆಡಳಿತಕ್ಕೆ ಒಳಪಟ್ಟಿದೆ. ಇಲ್ಲಿಯ ಜನರ ಅಭಿಪ್ರಾಯವೇನು? ನನ್ನ ವೋಟು ನನ್ನ ಮಾತು.