ದಸರಾಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆ ಇಳಿಕೆ ಮಾಡಲಾಗಿದೆ. ಇನ್ನು ಮುಂದೆ ಎರಡು ಸ್ಲ್ಯಾಬ್ ಇರಲಿದೆ. ಕೇವಲ ಶೇಕಡಾ 5 ಹಾಗೂ 18 ಮಾತ್ರ. ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ.
- Home
- News
- India News
- India Latest News Live: ದಸರಾಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ, ಅಗತ್ಯ ವಸ್ತು, ಆರೋಗ್ಯ ವಿಮೆ ತೆರಿಗೆ ಇಳಿಕೆ
India Latest News Live: ದಸರಾಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ, ಅಗತ್ಯ ವಸ್ತು, ಆರೋಗ್ಯ ವಿಮೆ ತೆರಿಗೆ ಇಳಿಕೆ

ನವದೆಹಲಿ: ಅಮೆರಿಕದ ವ್ಯಾಪಾರ ಒಪ್ಪಂದ ಗೊಂದಲ ಮುಂದುವರೆದಿರುವ ನಡುವೆಯೇ ಚಿನ್ನದ ಬೆಲೆ ಸತತ 7ನೇ ದಿನವಾದ ಮಂಗಳವಾರ ಕೂಡಾ ಏರಿಕೆ ಕಂಡಿದೆ. ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 400 ರು. ಏರಿಕೆಯಾಗಿ 1,06,070 ರು.ಗೆ ತಲುಪಿದೆ. 99.5 ಶುದ್ದತೆಯ ಚಿನ್ನ ಸಹ 400 ರು. ಏರಿ 1,05,200 ರು.ಗೆ ಮುಟ್ಟಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಬಂಗಾರದ ಬೆಲೆ 10 ಗ್ರಾಂಗೆ 100 ರು. ಏರಿಕೆಯಾಗಿ 1,10,100 ರು.ಗೆ ಜಿಗಿದಿದೆ. ಕಳೆದ ಡಿಸೆಂಬರ್ನಲ್ಲಿ 10 ಗ್ರಾಂಗೆ 78,950 ರು. ಇದ್ದ ಬೆಲೆಯು ಈ ವರ್ಷ ಬರೋಬ್ಬರಿ 34ರಷ್ಟು ಏರಿದೆ. ಇನ್ನು ಬೆಳ್ಳಿಯು ದೆಹಲಿಯಲ್ಲಿ 100 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,26,100 ರು.ಗೆ ತಲುಪಿದೆ. ಆದರೆ ಬೆಂಗಳೂರಿನಲ್ಲಿ 1000 ರು. ಕುಸಿದು 1,31,000 ರು.ಗೆ ತಲುಪಿದೆ.
India Latest News Live 3rd September 2025ದಸರಾಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ, ಅಗತ್ಯ ವಸ್ತು, ಆರೋಗ್ಯ ವಿಮೆ ತೆರಿಗೆ ಇಳಿಕೆ
India Latest News Live 3rd September 2025GST Council Meet - ಶೇ. 5, ಶೇ. 18ರ ಜಿಎಸ್‌ಟಿ ಸ್ಲ್ಯಾಬ್‌ಗೆ ಒಪ್ಪಿಗೆ, ಸೆ.22 ರಿಂದ ಹೊಸ ಜಿಎಸ್‌ಟಿ ದರ ಜಾರಿ
India Latest News Live 3rd September 2025ಭಾರೀ ಬೆಲೆಗೆ ಮಾರಾಟವಾದ ದೆಹಲಿಯ ಐತಿಹಾಸಿಕ ನೆಹರು ಬಂಗಲೆ!
India Latest News Live 3rd September 2025ಪಾಕ್ ಪಿಎಂ ಶಹಬಾಜ್ ಷರೀಪ್ ರಷ್ಯಾದೊಂದಿಗೆ ಬಲಿಷ್ಠ ಸಂಬಂಧ ಬಯಸುತ್ತೇವೆ ಎಂದಾಗ ಪುಟಿನ್ ಹೇಳಿದ್ದೇನು? 'ದುರದೃಷ್ಟವಶಾತ್' ಎಂದಿದ್ಯಾಕೆ?
India Latest News Live 3rd September 2025ಐಟಿ ಕಂಪನಿ ಕೆಲಸಗಾರನ ಮೇಲೆ ಹೂಕುಂಡ ಎಸೆದ ಸಿಇಒ; ಹಲ್ಲೆ ಪ್ರಶ್ನೆ ಮಾಡಿದ್ದಕ್ಕೆ ಗೇಟ್ ಪಾಸ್!
ಐಟಿ ಕಂಪನಿಯ ಸಿಇಒ, ಉದ್ಯೋಗಿಯೊಬ್ಬರ ಮೇಲೆ ಹೂಕುಂಡ ಎಸೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಇಒ ಸ್ಪಷ್ಟನೆ ನೀಡಿದ್ದು, ಕೋಪದ ಕ್ಷಣದಲ್ಲಿ ಹೂಕುಂಡವಲ್ಲ, ಹೂವಿನ ಗಿಡವನ್ನು ಕಿತ್ತು ಎಸೆದಿದ್ದಾಗಿ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
India Latest News Live 3rd September 2025ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡ್ರಾ ನಿಖಿಲ್ ಕಾಮತ್ ರೇಹಾ ಚಕ್ರಬೊರ್ತಿ? ವೈರಲ್ ಫೋಟೋ
ಉದ್ಯಮಿ ನಿಖಿಲ್ ಕಾಮತ್ ಹಾಗೂ ನಟಿ ರೇಹಾ ಚಕ್ರಬೊರ್ತಿ ಡೇಟಿಂಗ್‌ನಲ್ಲಿದ್ದಾರಾ? ಇವರಿಬ್ಬರದ್ದೂ ಎನ್ನಲಾದ ರೆಸ್ಟೋರೆಂಟ್ ಫೋಟೋ ಒಂದು ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗಿದೆ.
India Latest News Live 3rd September 2025ಮಧ್ಯ ಆಗಸದಲ್ಲಿ ಟಾಯ್ಲೆಟ್ ಬ್ಲಾಕ್ - ಮೂತ್ರ ವಿಸರ್ಜನೆಗೆ ವೃದ್ಧೆಗೆ ಬಾಟಲಿ ನೀಡಿದ ಏರ್‌ಲೈನ್ಸ್
ಇಂಡೋನೇಷ್ಯಾದಿಂದ ಆಸ್ಟ್ರೇಲಿಯಾಗೆ ಹೊರಟಿದ್ದ ವಿಮಾನದಲ್ಲಿ ಶೌಚಾಲಯಗಳು ಮಧ್ಯಆಗಸದಲ್ಲಿ ಕೆಟ್ಟುಹೋಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾದ ಘಟನೆ ನಡೆದಿದೆ.
India Latest News Live 3rd September 2025ಜೋರಾಗಿ ಮಳೆ, ಕೈಗೆ ಸಿಗದ ಉಬರ್ ಓಲಾ - ಮನೆಗೆ ಹೋಗಲು ಮಿನಿ ಟ್ರಕ್ ಬುಕ್ ಮಾಡಿದ ಉದ್ಯೋಗಿಗಳು
ಭಾರೀ ಮಳೆಯಿಂದಾಗಿ ದುಬಾರಿ ಬೆಲೆ ಹೇಳ್ತಿದ್ದ ಆಟೋ ಹಾಗೂ ಕ್ಯಾಬ್‌ಗಳು ನಡೆಯಿಂದ ಬೇಸತ್ತ ಉದ್ಯೋಗಿಗಳು ಮಿನಿ ಟ್ರಕ್ ಬಾಡಿಗೆಗೆ ಪಡೆದು ಮನೆಗೆ ತೆರಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
India Latest News Live 3rd September 2025ನನ್ನ ಅಮ್ಮನ ಬಳಿ ಒಂದು ಪೈಸೆಯೂ ಇಲ್ಲ; ಚಿನ್ನ, 7 ಕೋಟಿ ಹಣ ಪೀಟರ್ ಮುಖರ್ಜಿ ಗಂಡು ಮಕ್ಕಳು ಕಳ್ಳತನ ಮಾಡಿದ್ದಾರೆ!
India Latest News Live 3rd September 2025ಶಿಲ್ಪಾ ಶೆಟ್ಟಿ ಮಾಲೀಕತ್ವದ ಪ್ರಸಿದ್ಧ ಬಾಸ್ಟಿಯನ್ ಬಾಂದ್ರಾ ರೆಸ್ಟೋರೆಂಟ್‌ಗೆ ಬೀಗ - ನಾಳೆ ಕೊನೆ ದಿನ
60 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಈಗ 9 ವರ್ಷಗಳ ಹಿಂದೆ ಶಿಲ್ಪಾಶೆಟ್ಟಿ ಮುಂಬೈನ ಪ್ರತಿಷ್ಠಿತ ಬಾಂದ್ರಾದಲ್ಲಿ ಸ್ಥಾಪಿಸಿದ್ದ ರೆಸ್ಟೋರೆಂಟ್‌ನ್ನು ಮುಚ್ಚುವಂತೆ ಆದೇಶವಾಗಿದ್ದು, ನಾಳೆ ಕೊನೆಯ ದಿನ ಬಾಸ್ಟಿಯನ್ ಬಾಂದ್ರಾ ಎಂಬ ಐಷಾರಾಮಿ ರೆಸ್ಟೋರೆಂಟ್ ಕೆಲಸ ಮಾಡಲಿದೆ.
India Latest News Live 3rd September 2025ಜಗತ್ತಿನಾದ್ಯಂತ ಚಾಟ್‌ಜಿಪಿಟಿ ಔಟೇಜ್ ಆಗಿದ್ದಕ್ಕೆ ಅದ್ಭುತ ಉತ್ತರ ನೀಡಿದ ಗೂಗಲ್ ಜೆಮಿನಿ AI
India Latest News Live 3rd September 2025ತಿಂಗಳ ವೆಚ್ಚ 5,90,000 ರೂ. ಎಂದ ದಂಪತಿ - ಬೆಂಗಳೂರಿನಲ್ಲಿ ಜೀವನ ಇಷ್ಟೊಂದು ದುಬಾರಿನಾ?
ಬೆಂಗಳೂರಿನಲ್ಲಿ ವಾಸಿಸುವ ಅನೇಕರ ಗೋಳು ಎಷ್ಟು ಸ್ಯಾಲರಿ ಸಿಕ್ರು ಸಾಕಾಗಲ್ಲ ಎಂಬುದು. ಬೆಂಗಳೂರಿನ ಜೀವನವೆಚ್ಚ(Living cost) ದಿನೇ ದಿನೇ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಹೀಗಿರುವಾಗ ಬೆಂಗಳೂರಿನಲ್ಲಿ ವಾಸ ಮಾಡ್ತಿರುವ ದಂಪತಿಗಳು ತಮ್ಮ ತಿಂಗಳ ವೆಚ್ಚದ ಬಗ್ಗೆ ಹೇಳಿದ್ದು ಕೇಳಿ ಜನ ಶಾಕ್ ಆಗಿದ್ದಾರೆ.
India Latest News Live 3rd September 2025Shah Rukh Khan ಪುತ್ರಿ ಸುಹಾನಾಗೆ ಕಾನೂನು ಸಂಕಷ್ಟ! ಅಕ್ರಮ ಕೇಸ್ನಲ್ಲಿ ಸಿಲುಕಿದ ಸ್ಟಾರ್ ಕಿಡ್?
25 ವರ್ಷದ ಸುಹಾನಾ ಖಾನ್ ಅವರು ಅಪ್ಪ ಶಾರುಖ್ ಖಾನ್ ಜೊತೆ ಕಿಂಗ್ ಚಿತ್ರದ ಖುಷಿಯಲ್ಲಿ ಇರುವ ನಡುವೆಯೇ, ಅವರಿಗೆ ಅಕ್ರಮ ಭೂಕಬಳಿಕೆ ಆರೋಪ ಕೇಳಿಬಂದಿದೆ. ಏನಿದು ವಿಷ್ಯ? ಏನಿದೂ ಕಾನೂನು ಸಂಕಷ್ಟ?
India Latest News Live 3rd September 2025ರೈಲಿನ ಲೈವ್ ಸ್ಟೇಟಸ್ ಚೆಕ್ ಮಾಡುವ 5 ಸಿಂಪಲ್ ಟ್ರಿಕ್ಸ್
Train running status online and offline: ರೈಲಿನಲ್ಲಿ ಪ್ರಯಾಣ ಸುಲಭ ಮತ್ತು ಬಜೆಟ್‌ಗೆ ಸ್ನೇಹಿ. ಆದರೆ ಕೆಲವೊಮ್ಮೆ ರೈಲು ತಡವಾಗಿ ಬಂದ್ರೆ ತೊಂದರೆಯಾಗುತ್ತde. ಹಾಗಾಗಿ ರೈಲು ಈಗ ಎಲ್ಲಿದೆ, ಯಾವಾಗ ಬರುತ್ತೆ ಅಂತ ತಿಳ್ಕೊಳ್ಳೋ ಸಿಂಪಲ್ ಟ್ರಿಕ್ಸ್ ಇಲ್ಲಿವೆ
India Latest News Live 3rd September 2025ಶ್ವಾನಕ್ಕೆ ಮಾಡಿಸಿದ ಆಧಾರ್ ಕಾರ್ಡ್ ಹಿಂದಿದೆ ಮನಕಲುಕುವ ಕತೆ - ತಪ್ಪಿತಸ್ಥರ ವಿರುದ್ಧ ತನಿಖೆಗೆ ಆದೇಶಿಸಿದ ಡಿಸಿ
ವೈರಲ್ ಆಗಿದ್ದ ನಾಯಿಯ ಆಧಾರ್ ಕಾರ್ಡ್‌ನ ಪೋಟೋದ ಬೆನ್ನು ಬಿದ್ದ ಮಾಧ್ಯಮವೊಂದಕ್ಕೆ ಅದರಲ್ಲಿನ ವಿಳಾಸವನ್ನು ಬೆನ್ನತ್ತಿ ಹೋದಾಗ ಅವರು ಮನಕಲುಕುವ ಕತೆ ಕೇಳುವಂತಹ ಸ್ಥಿತಿ ನಿರ್ಮಾಣವಾಗಿತ್ತು.
India Latest News Live 3rd September 2025ಸೇನೆಯಿಂದ 4 ದಿನಗಳಿಂದ ಪ್ರವಾಹಪೀಡಿತ ಸ್ಥಳದಲ್ಲಿ ಸಿಲುಕಿದ್ದ ಬಾಣಂತಿ, 15 ದಿನಗಳ ಮಗುವಿನ ರಕ್ಷಣೆ
ಪ್ರವಾಹ ಪೀಡಿತ ಪಂಜಾಬ್‌ನಲ್ಲಿ ಸಿಲುಕಿದ್ದ ನವಜಾತ ಶಿಶು ಮತ್ತು ತಾಯಿಯನ್ನು ಭಾರತೀಯ ಸೇನೆ ರಕ್ಷಿಸಿದೆ. ತಾಯಿ ಮತ್ತು 15 ದಿನಗಳ ಮಗು, ನಾಲ್ಕು ದಿನಗಳಿಂದ ನೀರಿನಿಂದ ಮುಳುಗಿದ್ದ ಮನೆಯ ಮೊದಲ ಮಹಡಿಯಲ್ಲಿ ಸಿಲುಕಿಕೊಂಡಿದ್ದರು.
India Latest News Live 3rd September 20259 ದಿನಗಳಲ್ಲಿ 5,460 ರೂ. ಏರಿಕೆ; ಇಂದು ಹೆಚ್ಚಾದ ಹಣದಲ್ಲಿ 5 ದಿನ ಹೊಟ್ಟೆ ತುಂಬಾ ಊಟ ಮಾಡಬಹುದು!
Gold And Silver Price: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಚಿನ್ನದ ಬೆಲೆ 9 ದಿನಗಳಿಂದ ಏರಿಕೆಯಾಗುತ್ತಿದೆ. ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ದರಗಳ ವಿವರ ಇಲ್ಲಿದೆ.
India Latest News Live 3rd September 2025OYO ರೂಮ್‌ಗೆ ಹೋಗುವ ಗ್ರಾಹಕರ ಜೇಬಿನ ಭಾರ ಇಳಿಸಲಿದೆ ಸರ್ಕಾರ! ಎಷ್ಟು ಹಣ ಉಳಿತಾಯ?
India Latest News Live 3rd September 2025ಎಬಿಸಿ ಅಧ್ಯಕ್ಷರಾಗಿ ಕರುಣೇಶ್ ಬಜಾಜ್ ಆಯ್ಕೆ
India Latest News Live 3rd September 2025ಡೊನಾಲ್ಡ್ ಟ್ರಂಪ್ ಹೊಟ್ಟೆ ಉರಿಸಿದ ರಷ್ಯಾ; ಇಬ್ಬರ ಜಗಳದಲ್ಲಿ ಭಾರತಕ್ಕೆ ಸಿಕ್ತು ಬಂಪರ್ ಲಾಭ
International News: ಮೋದಿ-ಪುಟಿನ್ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದ್ದು, ಟ್ರಂಪ್‌ಗೆ ಪರೋಕ್ಷ ತಿರುಗೇಟು ನೀಡಿದಂತಾಗಿದೆ. ಈ ರಿಯಾಯ್ತಿ ಭಾರತೀಯ ತೈಲ ಕಂಪನಿಗಳಿಗೆ ಭಾರಿ ಲಾಭ ತರುವ ನಿರೀಕ್ಷೆಯಿದೆ.