ಬೆಂಗಳೂರಿನಲ್ಲಿ ವಾಸಿಸುವ ಅನೇಕರ ಗೋಳು ಎಷ್ಟು ಸ್ಯಾಲರಿ ಸಿಕ್ರು ಸಾಕಾಗಲ್ಲ ಎಂಬುದು. ಬೆಂಗಳೂರಿನ ಜೀವನವೆಚ್ಚ(Living cost) ದಿನೇ ದಿನೇ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಹೀಗಿರುವಾಗ ಬೆಂಗಳೂರಿನಲ್ಲಿ ವಾಸ ಮಾಡ್ತಿರುವ ದಂಪತಿಗಳು ತಮ್ಮ ತಿಂಗಳ ವೆಚ್ಚದ ಬಗ್ಗೆ ಹೇಳಿದ್ದು ಕೇಳಿ ಜನ ಶಾಕ್ ಆಗಿದ್ದಾರೆ.
ಬೆಂಗಳೂರಿನಲ್ಲಿ ವಾಸಿಸುವ ಅನೇಕರ ಗೋಳು ಎಷ್ಟು ಸ್ಯಾಲರಿ ಸಿಕ್ರು ಸಾಕಾಗಲ್ಲ ಎಂಬುದು. ಬೆಂಗಳೂರಿನ ಜೀವನವೆಚ್ಚ(Living cost) ದಿನೇ ದಿನೇ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಆದರೂ ಬೆಂಗಳೂರಿನಲ್ಲಿ ಕಡಿಮೆ ಎಂದರೆ ತಿಂಗಳಿಗೆ 15 ಸಾವಿರ ಸಂಪಾದನೆ ಮಾಡುವವರು ಕೂಡ ಬದುಕುತ್ತಾರೆ. ಲಕ್ಷದ ಮೇಲೆ ಸಂಪಾದನೆ ಮಾಡುವವರು ಕೂಡ ಬದುಕುತ್ತಾರೆ. ಅವರು ಗಳಿಸುವ ಸ್ಯಾಲರಿ, ಜೀವನಶೈಲಿಯ ಮೇಲೆ ಇದು ಅವಲಂಬಿತವಾಗಿದೆ... ಅಲ್ಲದೇ ಬೆಂಗಳೂರಿನ ಕೆಲವು ಏರಿಯಾಗಳ ಮೇಲೆ ನಿಮ್ಮ ವೆಚ್ಚ ಅವಲಂಬಿತವಾಗಿದೆ. ಬೆಂಗಳೂರಿನ ಕೆಲವು ಪ್ರತಿಷ್ಠಿತ ಏರಿಯಾಗಳಲ್ಲಿ ವಾಸ ಮಾಡಬೇಕು ಎಂದರೆ ನೀವು ಕನಿಷ್ಠ ಲಕ್ಷದ ಮೇಲೆ ಸ್ಯಾಲರಿ ಹೊಂದಿರಬೇಕು.
ಅಚ್ಚರಿ ಮೂಡಿಸಿದ ವಿವಾಹಿತ ಜೋಡಿಯ ವೆಚ್ಚ:
ಕೆಲವರು ಸ್ಯಾಲರಿಗೆ ತಕ್ಕಂತೆ ಜೀವನಶೈಲಿಯನ್ನು ಏರಿಸುತ್ತಾ ಹೋಗುತ್ತಾರೆ. ಹೀಗಾಗಿ ಎಷ್ಟೇ ಸ್ಯಾಲರಿ ಬಂದರೂ ಸಾಲುವುದೇ ಇಲ್ಲ. ಇಬ್ಬರು ದುಡಿಮೆ ಮಾಡುತ್ತಾ ಒಂದು ಮಗುವನ್ನು ಹೊಂದಿರುವ ದಂಪತಿ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರೆ ಇಬ್ಬರ ಸ್ಯಾಲರಿ ಸೇರಿ ಕನಿಷ್ಠ 50 ಸಾವಿರವಾದರೂ ಆದರೆ ಮಾತ್ರ ಕನಿಷ್ಟ ಮಧ್ಯಮ ವರ್ಗದ ಜೀವನ ಮಾಡಬಹುದು. ಏಕೆಂದರೆ ಬೆಂಗಳೂರಿನಲ್ಲಿ ಎಲ್‌ಕೆಜಿ ಮಕ್ಕಳ ವಾರ್ಷಿಕ ಶೈಕ್ಷಣಿಕ ವೆಚ್ಚವೇ ಲಕ್ಷದ ಮೇಲಿದೆ. ಹೀಗಿರುವಾಗ ಇಲ್ಲೊಂದು ಬೆಂಗಳೂರಿನಲ್ಲಿ ವಾಸ ಮಾಡುವ ಉದ್ಯೋಗಸ್ಥ ವಿವಾಹಿತ ಜೋಡಿ ಒಂದು ತಿಂಗಳಲ್ಲಿ ತಾವು ವೆಚ್ಚ ಮಾಡಿದ ಹಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಈ ಪೋಸ್ಟ್ ನೋಡಿದ ಅನೇಕರು ಆಘಾತಗೊಂಡಿದ್ದಾರೆ. ಹಾಗಿದ್ದರೆ ಈ ಜೋಡಿ ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳಲ್ಲಿ ವೆಚ್ಚ ಮಾಡಿದ ಹಣ ಎಷ್ಟು ಈ ಎಲ್ಲಾ ಡಿಟೇಲ್ ಈ ಸ್ಟೋರಿಯಲ್ಲಿ ಇದೆ ನೋಡಿ.
ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಏನಿದೆ?
ಅಂದಹಾಗೆ ಬೆಂಗಳೂರಿನಲ್ಲಿ ವಾಸ ಮಾಡ್ತಿರುವ ಪ್ರಕೃತಿ ಆರೋರಾ ಹಾಗೂ ಆಶೀಶ್ ಎಂಬುವವರು ತಮ್ಮ escapetolandscapes ಎಂಬ ಇನ್ಸ್ಟಾಪೇಜ್‌ನಿಂದ ಈ ಪೋಸ್ಟ್ ಮಾಡಿದ್ದಾರೆ. ಇವರು ಪ್ರಪಂಚ ಸುತ್ತುವ ಪಯಣಿಗ ಜೋಡಿ. ಇವರು ಬೆಂಗಳೂರಿನಲ್ಲಿ ಒಂದು ತಿಂಗಳಲ್ಲಿ ತಗುಲಿದ ಚೆಚ್ಚದ ಬಗ್ಗೆ ಹೇಳಿಕೊಂಡಿದ್ದು, ಇದರಲ್ಲಿ ಇವರ ಟ್ರಾವೆಲ್ ವೆಚ್ಚವೂ ಕೂಡ ಸೇರಿದೆ. ಅದರ ಸಾರಾಂಶ ಇಲ್ಲಿದೆ ಅವು ಏನ್ ಹೇಳಿದ್ದಾರೆ ನೋಡಿ.
- ವಿವಾಹಿತ ದಂಪತಿಯಾಗಿ ಆಗಸ್ಟ್ ತಿಂಗಳಲ್ಲಿ ನಾವು ಬೆಂಗಳೂರಿನಲ್ಲಿ ಎಷ್ಟು ವೆಚ್ಚ ಮಾಡ್ತಿದ್ದೇವೆ.
- ಮೊದಲನೇಯದಾಗಿ ಮನೆ ಬಾಡಿಗೆ -42,000
- ಫಿಟ್ನೆಸ್ - 40,000(ಪರ್ಸನಲ್ ಟ್ರೇನರ್ ಹಾಗೂ ಪಿಲೇಟ್ಸ್ ಸೆಷನ್)
- ದಿನಸಿಗೆ 20,000
- ದಿನನಿತ್ಯದ ಅಗತ್ಯಗಳು 10,000 (ಮನೆಕೆಲಸದಾಕೆಯ ವೆಚ್ಚ, ಒಟಿಟಿ, ಅಗತ್ಯವೆಚ್ಚಗಳು)
- ಆಹಾರಕ್ಕೆ 13,000(ಆನ್‌ಲೈನ್ ಆರ್ಡರ್ ಮಾಡೋದು, ಔಟ್ ಸೈಡ್ ತಿನ್ನೋದು ಸೇರಿ)
- ಟ್ರಾವೆಲ್- 3,50,000 (ಫ್ಲೈಟ್, ಹೊಟೇಲ್ ಬುಕ್ಕಿಂಗ್, 2 ಇಂಟರ್‌ನ್ಯಾಷನಲ್, 2 ದೇಶಿಯ ಪ್ರವಾಸ ಸೇರಿ)
- ಹೂಡಿಕೆ- 1,00,000
- ಇತರ ವೆಚ್ಚಗಳು 13,000(ಕ್ಯಾಬ್,ಇನ್ಶ್ಯುರೆನ್ಸ್)
- ಒಟ್ಟು ವೆಚ್ಚ 5,90,000
ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ವಿವಾಹಿತ ದಂಪತಿಗಳಾಗಿ ನಾವು ಒಂದು ತಿಂಗಳಲ್ಲಿ ಮಾಡಿದ ಖರ್ಚು ಇದು. ನಿಮಗೆ ಖರ್ಚಿನ ಟ್ರ್ಯಾಕರ್ ಬೇಕೇ ಅಥವಾ ಮಾಸಿಕ ಬಜೆಟ್ ಶೀಟ್ ಬೇಕೇ? ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಆದರೆ ನಾವು ಹಣವನ್ನು ನಿರ್ವಹಿಸುವ ಒಂದು ಅದ್ಭುತ ಆರಂಭವನ್ನು ಹೊಂದಿದ್ದೇವೆ. ಅಲ್ಲಿ ಒಬ್ಬರು ಬೇರೆಯವರ ಹಣಕಾಸಿನಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನಿರ್ಧರಿಸಲಾಯ್ತು ಮತ್ತು ಇನ್ನೊಬ್ಬರು ತುಂಬಾ ಪ್ರಾಯೋಗಿಕವಾಗಿದ್ದರು. ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಹಣ ಮತ್ತು ಹೂಡಿಕೆಗಳ ಬಗ್ಗೆ ದೀರ್ಘವಾಗಿ ಮಾತನಾಡಲು ಸಾಧ್ಯವಾದರೆ, ಯಾವುದೇ ದಂಪತಿಗಳು ಇದನ್ನು ಮಾಡಬಹುದು ಎಂದು ನನಗೆ ಖಚಿತವಾಗಿದೆ.
ಏಕೆಂದರೆ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಕೇವಲ ವಾಸಿಸುತ್ತಿಲ್ಲ, ನೀವು ಅವರೊಂದಿಗೆ ಜೀವನವನ್ನು ಸಹ ನಿರ್ಮಿಸುತ್ತಿದ್ದೀರಿ ಮತ್ತು ಅದು ನಂತರ ಸಮಸ್ಯೆಯಾಗದಂತೆ ಹಲವು ಕಠಿಣ ವಿಷಯಗಳನ್ನು ಪರಿಹರಿಸುವ ಅಗತ್ಯವಿದೆ. ಈಗ ನಾವು ಪ್ರತಿ ತಿಂಗಳ ಆರಂಭದಲ್ಲಿ ಮಾಸಿಕ ಚರ್ಚೆ ಮಾಡ್ತೇವೆ. ಅಲ್ಲಿ ನಾವು ನಮ್ಮ ಎಲ್ಲಾ ಖರ್ಚುಗಳನ್ನು ಲೆಕ್ಕ ಹಾಕುತ್ತೇವೆ, ಗಳಿಕೆಯನ್ನುಗಳಿಕೆಯನ್ನು ಮಾತುಕತೆಗೆ ಒಳಪಡದ ಹೂಡಿಕೆಗಳಾಗಿ ವಿಂಗಡಿಸಿ ಮತ್ತು ನಮ್ಮ ನಿಗೂಢ ನಿಧಿಗೆ ಹಣವನ್ನು ಉಳಿಸಿ. ಇದು ಸುಲಭವಲ್ಲ ಆದರೆ ಇದು ಅತ್ಯಗತ್ಯ ಎಂದು ಆ ಜೋಡಿ ವೀಡಿಯೋ ಮೂಲಕ ಹೇಳಿಕೊಂಡಿದ್ದು ಈ ಜೋಡಿಯ ವೀಡಿಯೋ ನೋಡಿ ತಿಂಗಳ ಖರ್ಚು ಲಕ್ಸುರಿ ಲೈಫ್‌ಸ್ಟೈಲ್ ನೋಡಿದ ಅನೇಕರು ಶಾಕ್ ಆಗಿದ್ದಾರೆ.
ಇವರ ಒಂದು ತಿಂಗಳ ವೆಚ್ಚ ನಮಗೆ ಒಂದು ವರ್ಷದ ವೇತನವಾಗಿರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಮಗೆ ಲೆಕ್ಕಾಚಾರ ಮಾಡುವುದಕ್ಕೇ ಭಯವಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ಜೀವನದಲ್ಲಿ ಆರ್ಥಿಕ ಶಿಸ್ತು ತುಂಬಾ ಮುಖ್ಯ, ಒಬ್ಬ ವ್ಯಕ್ತಿ ಶ್ರೀಮಂತನಾಗುವುದನ್ನು ಆತನ ವೇತನ ಅವಲಂಬಿಸಿಲ್ಲ, ಆತ ಮಾಸಿಕ ಅಥವಾ ವಾರ್ಷಿಕವಾಗಿ ತನ್ನ ದುಡಿಮೆಯಲ್ಲಿ ಎಷ್ಟು ಹಣವನ್ನು ಕೂಡಿಡುತ್ತಾನೆ ಎಂಬುದರ ಮೇಲೆ ಒಬ್ಬನ ಶ್ರೀಮಂತಿಕೆಯನ್ನು ನಿರ್ಧರಿಸಬಹುದಾಗಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ..
ಇದನ್ನೂ ಓದಿ: ಶ್ವಾನಕ್ಕೆ ಮಾಡಿಸಿದ ಆಧಾರ್ ಕಾರ್ಡ್ ಹಿಂದಿದೆ ಮನಕಲುಕುವ ಕತೆ: ತಪ್ಪಿತಸ್ಥರ ವಿರುದ್ಧ ತನಿಖೆಗೆ ಆದೇಶಿಸಿದ ಡಿಸಿ
ಇದನ್ನೂ ಓದಿ: ಪ್ರವಾಹಕ್ಕೆ ಮುಳುಗಿದ ಮನೆಯ ಮಹಡಿಯಲ್ಲಿ 4 ದಿನಗಳಿಂದ ಸಿಲುಕಿದ್ದ 15 ದಿನಗಳ ಬಾಣಂತಿ ಮಗುವಿನ ರಕ್ಷಣೆ
