25 ವರ್ಷದ ಸುಹಾನಾ ಖಾನ್​ ಅವರು ಅಪ್ಪ ಶಾರುಖ್​ ಖಾನ್​ ಜೊತೆ ಕಿಂಗ್​ ಚಿತ್ರದ ಖುಷಿಯಲ್ಲಿ ಇರುವ ನಡುವೆಯೇ, ಅವರಿಗೆ ಅಕ್ರಮ ಭೂಕಬಳಿಕೆ ಆರೋಪ ಕೇಳಿಬಂದಿದೆ. ಏನಿದು ವಿಷ್ಯ? ಏನಿದೂ ಕಾನೂನು ಸಂಕಷ್ಟ? 

ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ಗೆ ಈಗ 25 ವರ್ಷ ವಯಸ್ಸು. ಸ್ಟಾರ್​ ಕಿಡ್​ ಆಗಿರುವ ಕಾರಣ ಸಹಜವಾಗಿ ಈಕೆಯ ಮೇಲೆ ಸಾರ್ವಜನಿಕರ ಕಣ್ಣು ನೆಟ್ಟಿರುತ್ತದೆ. ಇದಾಗಲೇ ಸಿನಿಮಾಗಿಂತಲೂ ಹೆಚ್ಚಾಗಿ ಸುಹಾನಾ ಡೇಟಿಂಗ್​, ರೊಮಾನ್ಸ್​ ವಿಷ್ಯದಲ್ಲಿಯೇ ಭಾರಿ ಸದ್ದು ಮಾಡುತ್ತಿದ್ದಾರೆ. ಆದರೆ ಇದರ ನಡುವೆಯೇ ಇದೀಗ ಭಾರಿ ಅಕ್ರಮ ಆರೋಪ ಸುಹಾನಾ ಖಾನ್​ (Suhana Khan) ವಿರುದ್ಧ ಕೇಳಿ ಬಂದಿದ್ದು, ಇವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಇದು ಅಕ್ರಮ ಭೂ ವ್ಯವಹಾರ ವಿಷಯವಾಗಿದೆ.

ಸುಹಾನಾ ಖಾನ್ ವಿರುದ್ಧ ಆರೋಪವೇನು?

ಮಹಾರಾಷ್ಟ್ರ ಸರ್ಕಾರವು ಅಲಿಬಾಗ್‌ನ ಥಾಲ್ ಗ್ರಾಮದಲ್ಲಿ ಕೃಷಿಗಾಗಿ ರೈತರಿಗೆ ಭೂಮಿಯನ್ನು ನೀಡಿತ್ತು. ಸುಹಾನಾ ಈ ಭೂಮಿಯನ್ನು ಖರೀದಿಸಿದ್ದಾರೆ ಎನ್ನುವ ಆರೋಪವಿದೆ. ಅಂತಹ ಭೂಮಿಯನ್ನು ಖರೀದಿಸಲು ಕಲೆಕ್ಟರ್ ಅನುಮೋದನೆ ಅಗತ್ಯವಿದೆ, ಆದರೆ ಸುಹಾನಾ ಭೂಮಿಯನ್ನು ಖರೀದಿಸಲು ಅನುಮತಿ ಪಡೆಯಲಿಲ್ಲ ಅಥವಾ ದಾಖಲೆಗಳನ್ನು ಪೂರ್ಣಗೊಳಿಸಲಿಲ್ಲ ಎಂಬ ಆರೋಪವಿದೆ. ಮುಂಬೈನ ಕಫೆ ಪರೇಡ್‌ನಲ್ಲಿ ವಾಸಿಸುವ ಖೋಟೆ ಕುಟುಂಬದಿಂದ ಸುಹಾನಾ ಸುಮಾರು 12.91 ಕೋಟಿ ರೂ.ಗೆ ಈ ಭೂಮಿಯನ್ನು ಖರೀದಿಸಿದ್ದಾರೆ. ಅವರು 77.46 ಲಕ್ಷ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಸಹ ಪಾವತಿಸಿದ್ದಾರೆ.

ಇದನ್ನೂ ಓದಿ: SRK ಎಂದ್ರೆ ಶೇಖರ್​ ರಾಧಾ ಕೃಷ್ಣ ಎಂದ ಶಾರುಖ್​: ಮಾತು ಕೇಳಿ ಬೆಚ್ಚಿ ಬಿದ್ದ ಫ್ಯಾನ್ಸ್​!

ವರ್ಗಾವಣೆಯು ಮೇ 30, 2023 ರಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮೂಲಕ ನಡೆಯಿತು. ಮುಂಬೈ ಪೊಲೀಸ್‌ನ ನಿವಾಸಿ ಉಪ ಆಯುಕ್ತರು ಈ ಒಪ್ಪಂದದ ತನಿಖೆಗಾಗಿ ಅಲಿಬಾಗ್ ತಹಶೀಲ್ದಾರ್ ಅವರಿಂದ ವರದಿಯನ್ನು ಕೋರಿದ್ದಾರೆ. ಅಂತಹ ಭೂಮಿಯನ್ನು ಖರೀದಿಸಲು ಕಲೆಕ್ಟರ್ ಅನುಮೋದನೆ ಅಗತ್ಯವಿದೆ, ಆದರೆ ಸುಹಾನಾ ಭೂಮಿಯನ್ನು ಖರೀದಿಸಲು ಅನುಮತಿ ಪಡೆಯಲಿಲ್ಲ ಅಥವಾ ದಾಖಲೆಗಳನ್ನು ಪೂರ್ಣಗೊಳಿಸಲಿಲ್ಲ ಎಂಬ ಆರೋಪವಿದೆ.

ಕಲೆಕ್ಟರ್ ಅನುಮತಿ ಅಗತ್ಯವಿದೆ

ಮುಂಬೈನ ಕಫೆ ಪರೇಡ್‌ನಲ್ಲಿ ವಾಸಿಸುವ ಖೋಟೆ ಕುಟುಂಬದಿಂದ ಸುಹಾನಾ ಸುಮಾರು 12.91 ಕೋಟಿ ರೂ.ಗೆ ಈ ಭೂಮಿಯನ್ನು ಖರೀದಿಸಿದ್ದಾರೆ. ಅವರು 77.46 ಲಕ್ಷ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಸಹ ಪಾವತಿಸಿದ್ದಾರೆ. ವರ್ಗಾವಣೆಯು ಮೇ 30, 2023 ರಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮೂಲಕ ನಡೆಯಿತು. ಮುಂಬೈ ಪೊಲೀಸ್‌ನ ನಿವಾಸಿ ಉಪ ಆಯುಕ್ತರು ಈ ಒಪ್ಪಂದದ ತನಿಖೆಗಾಗಿ ಅಲಿಬಾಗ್ ತಹಶೀಲ್ದಾರ್ ಅವರಿಂದ ವರದಿಯನ್ನು ಕೋರಿದ್ದಾರೆ.

ಇದನ್ನೂ ಓದಿ: ನಮ್ಮಿಬ್ಬರ ಸಂಬಂಧ ಪತಿಗೆ ಗೊತ್ತಾ? ಓಪನ್ನಾಗಿಯೇ ಕೇಳಿ ನಟಿಯನ್ನು ಹೀಗೆ ಪೇಚಿಗೆ ಸಿಲುಕಿಸೋದಾ ಶಾರುಖ್​?

ಮಹಾರಾಷ್ಟ್ರ ಕೃಷಿ ಭೂಮಿ ಕಾಯ್ದೆ, 1961 ರ ಪ್ರಕಾರ, ಸ್ವತಃ ರೈತನಾಗಿರುವ (ಅಥವಾ ಅವರ ಕುಟುಂಬವು ಈಗಾಗಲೇ ಕೃಷಿ ಭೂಮಿಯನ್ನು ಹೊಂದಿದೆ) ವ್ಯಕ್ತಿ ಮಾತ್ರ ಕೃಷಿ ಭೂಮಿಯನ್ನು ಖರೀದಿಸಬಹುದು. ರೈತರಲ್ಲದವರು ಅಂತಹ ಭೂಮಿಯನ್ನು ನೇರವಾಗಿ ಖರೀದಿಸಲು ಸಾಧ್ಯವಿಲ್ಲ. ಸರಕಾರವು ರೈತ ಕುಟುಂಬಕ್ಕೆ ಕೃಷಿಗಾಗಿ ಮಾತ್ರ ಭೂಮಿಯನ್ನು ನೀಡಿದ್ದರೆ, ಆ ಭೂಮಿಯನ್ನು ನೇರವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ, ಕಲೆಕ್ಟರ್ ಅನುಮೋದನೆ ಪಡೆಯುವುದು ಅವಶ್ಯಕ. ಖರೀದಿದಾರ ಮತ್ತು ಮಾರಾಟಗಾರ ಇಬ್ಬರೂ ತಹಶೀಲ್ದಾರ್ ಕಲೆಕ್ಟರ್‌ನಿಂದ NOC ಪಡೆಯಬೇಕು.

ಸುಹಾನ ಚಿತ್ರದ ಕುರಿತು

ಇನ್ನು ಸುಹಾನಾ ಖಾನ್ ಅವರ ಮುಂಬರುವ ಚಿತ್ರದ ಬಗ್ಗೆ ಮಾತನಾಡುವುದಾದರೆ, ಈಕೆ ಶೀಘ್ರದಲ್ಲೇ ತನ್ನ ತಂದೆ ಶಾರುಖ್ ಜೊತೆ ಕಿಂಗ್ (Shah rukh Khan's King Film) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಎರಡನೇ ಚಿತ್ರ. ಇದಕ್ಕೂ ಮೊದಲು, ಅವರು ದಿ ಆರ್ಚೀಸ್ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಸ್ಟಾರ್ ಮಕ್ಕಳಿಂದ ತುಂಬಿರುವ ಈ ಚಿತ್ರವನ್ನು ಪ್ರೇಕ್ಷಕರು ವಿಶೇಷವಾಗಿ ಇಷ್ಟಪಡಲಿಲ್ಲ.